ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

0
43

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಖಾಡಾ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಅವರಿಗೆ ಜಿಲ್ಲಾಧಿಕಾರಿ ಫೌಜಿಯಾ ತರುನ್ನುಮ್ ಅವರಿಗೆ ಮನವಿ ಸಲ್ಲಿಸಿದರು.

ನಗರವು ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ಉದ್ಯೋಗದ ಮೂಲಗಳಲ್ಲಿ ಎರಡು ಕಂಪನಿಗಳಿದ್ದವು. ಈ ಎರಡು ಕಂಪನಿಗಳು ಮುಚ್ಚಿಹೋಗಿವೆ. ಅಲ್ಲದೇ ಕಲ್ಲು ಗಣಿಗಳು ವ್ಯವಹಾರವೂ ಸ್ಥಗಿತಗೊಂಡಿವೆ. ಇಲ್ಲಿನ ಜನರು ಉದ್ಯೋಗಕ್ಕಾಗಿ ಗುಲ್ಬರ್ಗ ಮತ್ತು ಇತರ ನಗರಗಳಿಗೆ ವಲಸೆ ಹೋಗಿದ್ದಾರೆ.ಉದ್ಯೋಗವಿಲ್ಲದೇ ಸಂಕಷ್ಟದಲ್ಲಿರುವ ಜನರಿಗೆ ನೀರಿನ ಬಾಕಿ ಬಡ್ಡಿ ಹಾಗೂ ಅಸಲು ಕಟ್ಟಲು ಸಾಧ್ಯವಾಗದು.

Contact Your\'s Advertisement; 9902492681

ಇಲ್ಲಿನ ಜನರಿಗೆ ರಸ್ತೆ, ಕುಡಿಯುವ ನೀರು, ಬೀದಿ ದೀಪ ಹಾಗೂ ಸ್ವಚ್ಛತೆ ನೀಡುವುದು ನಗರಸಭೆಯ ಜವಾಬ್ದಾರಿಯಾಗಿದೆ.ಅಲ್ಲದೇ ಈ ಹಿಂದೆ ನಗರಸಭೆ ವ್ಯವಸ್ಥೆಯಲ್ಲಿ ಸಾರ್ವಜನಿಕ ನಲ್ಲಿಗಳ ಮೂಲಕ ಬಡವರಿಗೆ ಉಚಿತವಾಗಿ ನೀರು ಪೂರೈಕೆ ಮಾಡುತ್ತಿತ್ತು.ನಗರಸಭೆ ಎಡಿಬಿ ಯೋಜನೆಯ ಮೂಲಕ ನೀರು ಒದಗಿಸುತ್ತಿದೆ.ಆದರೆ ಅದರ ಅಧಿಕ ಬಳಕೆ ಮಾಡುವುದರಿಂದ ಅಧಿಕ ಬಿಲ್ ಪಾವತಿಸಬೇಕಾಗುತ್ತದೆ ಎಂಬ ಅರಿವು ಕೂಡ ಅವರಿಗಿಲ್ಲ. ಹೀಗಾಗಿ ಪ್ರತಿ ತಿಂಗಳು ಬಡ್ಡಿ ಸಮೇತ ಬಿಲ್ ಬರುತ್ತಿದೆ.

ಇದರಿಂದ ಸಾರ್ವಜನಿಕರು ಸಂಕಷ್ಟ ತಲೆದೋರಿದೆ.ಈಗಾಗಲೇ ಕುಡಿಯುವ ನೀರಿನ ಬಡ್ಡಿ ಸಮೇತ ಸುಮಾರು 6 ಕೋಟಿ ಬಿಲ್ ಇದೆ.ಅದರಲ್ಲಿ ಸುಮಾರು 2 ಕೋಟಿ ಬಡ್ಡಿವಿರುವುದು ತಿಳಿದು ಬಂದಿದೆ.ಕೂಡಲೇ ನೀರಿನ ಕರ ವಸೂಲಾತಿಗೆ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಕಟ್ಟಿಕೊಳ್ಳುವ ಹಾಗೇ ಕ್ರಮಕೈಗೊಳ್ಳಬೇಕು.ಅಲ್ಲದೇ ಆಸ್ತಿ ತೆರಿಗೆಯ ಮೇಲಿನ ಬಡ್ಡಿ ಮನ್ನಾ ಮಾಡಿ ಒಂದೇ ಬಾರಿ ಸೆಟಲ್ಮೆಂಟ್ ಮೂಲಕ ತೆರಿಗೆ ಪವಾತಿಸಲು ಅವಕಾಶ ಕೊಟ್ಟರೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ಕಟ್ಟುತ್ತಾರೆ.ಅಲ್ಲದೇ ನಗರಸಭೆಯ ಆದಾಯಕ್ಕೂ ಅನುಕೂಲವಾಗುತ್ತದೆ.ಆ ನಿಟ್ಟಿನಲ್ಲಿ ಪುರಸಭೆ ಕಾಯ್ದೆ ಅಡಿಯಲ್ಲಿ ಅವಕಾಶವಿದೆ.

ನಿಯಮಾನುಸಾರವಾಗಿ ನಗರಸಭೆಯ ಸಾಮನ್ಯ ಸಭೆಯಲ್ಲಿ ಮಂಡಿಸಿ ಸಾರ್ವಜನಿಕರ ಹಾಗೂ ಆಡಳಿತ ಹಿತದೃಷ್ಟಿಯಿಂದ ಠರಾವು ಪಾಸು ಮಾಡುವುದರ ಮೂಲಕ ಸೂಕ್ತ ಕ್ರಮಕೈಗೊಂಡು ಅನುಕೂಲ ಮಾಡಿಕೊಡಬೇಕೆಂದು ಡಾ.ರಶೀದ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here