371 (J)ಗಾಗಿ ಶ್ರಮಿಸಿದ ಸ್ಥಳೀಯ ಪತ್ರಿಕೆಗಳಿಗೆ ಪ್ರಾಶಸ್ತ್ಯ ಸಿಗುತ್ತಿಲ್ಲ; ಹಿರಿಯ ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ್

0
125

ಕಲಬುರಗಿ: 371 (ಜೆ) ಹೋರಾಟವನ್ನು ಯಶಸ್ವಿಯಾಗಿ ಈ ಭಾಗದ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿದ್ದು ಆದರೆ ಕಲಂ ಪ್ರಯೋಜನಗಳು ಕಲ್ಯಾಣ ಕರ್ನಾಟಕದ ಜಿಲ್ಲಾ ಪತ್ರಿಕೆಗಳಿಗೆ ಸಿಗುತ್ತಿಲ್ಲವೆಂದು ಬಹಮನಿ ನ್ಯೂಸ್” ಉರ್ದು ಡೇಲಿ ಸಂಪಾದಕರು ಹಾಗೂ ಹಿರಿಯ ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ್ ಕಳವಳ ವ್ಯಕ್ತಪಡಿಸಿದ್ದರು

ನಗರದ ಅಂಜುಮನ್ ತರಕ್ಕಿ ಉರ್ದು ಸಭಾಂಗಣದಲ್ಲಿ ಆಯೋಜಿಸಿದ ಕಲ್ಯಾಣ ಕರ್ನಾಟಕ ಜನಪರ ಸಮಿತಿ ಸ್ಥಾಪಕ ಅಧ್ಯಕ್ಷ ಲಕ್ಷ್ಮಣ್ ದಸ್ತಿ ಅವರ ವಿಶೇಷ ಉಪನ್ಯಾಸದ ಕಾರ್ಯಕ್ರಮದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಜನಪರ ಸಮಿತಿ ಕಲ್ಯಾಣ ಕರ್ನಾಟಕದ ಜಿಲ್ಲಾ ಪತ್ರಿಕೆಗಳಿಗೆ ಕೆಕೆಆರ್‌ಡಿಬಿಯಿಂದ ಆರ್ಥಿಕ ನೆರವು ನೀಡಲು ಯಾಕೆ ಪ್ರಾತಿನಿಧ್ಯ ಸಲ್ಲಿಸಲಿಲ್ಲವೆಂದು ಪ್ರಸ್ನಿಶಿದರು.

ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರಿಗೆ ಸೌಲಭ್ಯಗಳು ದೊರಕುತ್ತಿವೆ, ಆದರೆ ಕಲ್ಯಾಣ ಕರ್ನಾಟಕದ ಜಿಲ್ಲಾ ಪತ್ರಿಕೆಗಳಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲವೆಂದು ಅವರು ವಿಷಾದ ವ್ಯಕ್ತಪಡಿಸಿದರು.

ಕೆಕೆಆರ್‌ಡಿಬಿಯಿಂದ ಕಲ್ಯಾಣ ಕರ್ನಾಟಕದ ಜಿಲ್ಲಾ ಪತ್ರಿಕೆಗಳಿಗೆ ಮಾಸಿಕವಾಗಿ 2 ಪುಟಗಳ ಜಾಹೀರಾತು ನೀಡುವಂತೆ ಮತ್ತು ಬಜೆಟ್ ಮಂಜೂರು ಮಾಡಲು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದರು.

17 ಸೆಪ್ಟೆಂಬರ್ ದಿನದಂದು ಜಿಲ್ಲಾ ಪತ್ರಿಕೆಗಳ ಸಂಘದ ಪ್ರಾತಿನಿಧ್ಯದ ಮೇಲೆ ಕೆಕೆಆರ್‌ಡಿಬಿ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಪೂರ್ಣ ಪುಟ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲಾ ಪತ್ರಿಕೆಗಳಿಗೆ ಅರ್ಧ ಪುಟ ಜಾಹೀರಾತು ನೀಡಿತ್ತು. ಆದರೆ ಕಲ್ಯಾಣ ಕರ್ನಾಟಕದ ಜಿಲ್ಲಾ ಪತ್ರಿಕೆಗಳಿಗೆ ಸಂಪೂರ್ಣ ಪುಟ್ಟ ಜಾಹೀರಾತು ನೀಡಬೇಕಿತ್ತು ಏಕೆಂದರೆ ಜಾಹಿರಾತುಗಳಿಗಾಗಿ ಪ್ರಾತಿನಿಧ್ಯ ಮಾಡಿರುವುದು ಜಿಲ್ಲಾ ಪತ್ರಿಕೆಗಳ ರಾಜ್ಯ ಸಂಘ ಎಂದು ಅವರು ಹೇಳಿದರು.

ಹಿಂದುಳಿದ ಪ್ರದೇಶದ ಜಿಲ್ಲಾ ಪತ್ರಿಕೆಗಳಿಗೆ ಪ್ರೋತ್ಸಾಹ ನೀಡುವುದು ಕೆ.ಕೆ.ಆರ್.ಡಿ.ಬಿಯ ಮೊದಲ ಆದ್ಯತೆ ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಲಕ್ಷ್ಮಣ್ ದಸ್ತಿ 371 (ಜೆ) ವಿಧಾನದ ಸೌಲಭ್ಯಗಳ ಕುರಿತಂತೆ ತಮ್ಮ ಉಪನ್ಯಾಸ ನೀಡಿದ ನಂತರ ಮಾತನಾಡಿ ಅಜೀಜುಲ್ಲಾ ಸರ್ಮಸ್ತ್ ಅವರ ಅಭಿಪ್ರಾಯ ಸ್ವೀಕರಿಸಿ, ತಮ್ಮಿಂದ ತಪ್ಪು ಆಗಿದೆ ಎಂದು ಒಪ್ಪಿಕೊಂಡರು. “ನಮ್ಮ ಹೋರಾಟ ಶೇಕಡಾ 100ರಷ್ಟು ಕಲ್ಯಾಣ ಕರ್ನಾಟಕದ ಜಿಲ್ಲಾ ಪತ್ರಿಕೆಗಳ ಬೆಂಬಲದ ಮೇಲೆ ಯಶಸ್ವಿಯಾಯಿತು.

ನಾವು ಕಲ್ಯಾಣ ಕರ್ನಾಟಕದ ಜಿಲ್ಲಾ ಪತ್ರಿಕೆಗಳ ಅಭಿವೃದ್ಧಿಗಾಗಿ ಪ್ರಾತಿನಿಧ್ಯ ಮಾಡಬೇಕಾಗಿತ್ತು, ನಮ್ಮಿಂದ ತಪ್ಪಾಗಿದೆ. ಈಗ ಜಿಲ್ಲಾ ಪತ್ರಿಕೆಗಳ ಸಂಪಾದಕರೊಂದಿಗೆ ಸೇರಿಕೊಂಡು, ಕಲ್ಯಾಣ ಕರ್ನಾಟಕ ಜನಪರ ಸಮಿತಿಯಿಂದ ಕೆಕೆಆರ್‌ಡಿಬಿ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಪ್ರಾತಿನಿಧ್ಯ ಸಲ್ಲಿಸುತ್ತೇವೆ ಮತ್ತು ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಭಿಕರಿಂದ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here