ಸೇಡಂ; ಇಲ್ಲಿನ ಐತಿಹಾಸಿಕ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ 43 ನೇ ದಸರಾ ಉತ್ಸವ ನಿಮಿತ್ತ ಅಕ್ಟೊಬರ್ 9 ರಂದು ಸಂಜೆ 7.30 ಕ್ಕೆ ದಸರಾ ಕಾವ್ಯ ವೈಭವ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ಶ್ರೀ ಪಂಚಲಿಂಗೇಶ್ವರ ದೇವಾಲಯ ಮಂಡಳಿಯ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ದಸರಾ ಉತ್ಸವ ಸಮಿತಿ, ಶ್ರೀ ಪಂಚಲಿಂಗೇಶ್ವರ ದೇವಾಲಯದ ಸಮಿತಿ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ದಸರಾ ಕಾವ್ಯ ವೈಭವವನ್ನು ಹಿರಿಯ ಕವಿ ಲಿಂಗಾರೆಡ್ಡಿ ಶೇರಿ ಉದ್ಘಾಟಿಸುವರು. ನೃಪತುಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಜೋಶಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮಾ ಎಲ್.ಚಿಮ್ಮನಚೋಡ್ಕರ್ ನೇತೃತ್ವದಲ್ಲಿ ನಡೆಯುವ ಕಾವ್ಯ ವೈಭವದಲ್ಲಿ ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಹಾಗೂ ಹಿರಿಯ ಸಾಹಿತಿ ಧನಶೆಟ್ಟಿ ಸಕ್ರಿ ಮುಖ್ಯ ಅತಿಥಿಗಳಾಗಿರುವರು. ಪಂಚಲಿಂಗೇಶ್ವರ ದೇವಾಲಯದ ಮಂಡಳಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿರುವರು.
ಕವಿಗಳಾದ ವೀರಯ್ಯ ಸ್ವಾಮಿ ಮೂಲಿಮನಿ, ಆರತಿ ಕಡಗಂಚಿ, ಲಕ್ಷ್ಮಣ ರಂಜೋಳ, ಅವಿನಾಶ ಬೋರಂಚಿ, ವಿಜಯಭಾಸ್ಕರರೆಡ್ಡಿ, ಶಿವಪ್ರಸಾದ ವಿಶ್ವಕರ್ಮ, ಪ್ರಕಾಶ ಗೊಣಗಿ, ಅಮರಮ್ಮ ಪಾಟೀಲ, ಜ್ಯೋತಿ ಲಿಂಗಂಪಲ್ಲಿ, ರುಕ್ಮಿಣಿ ಕಾಳಗಿ, ಡಾ.ಸುವರ್ಣಾ ಅಳ್ಳೋಳ್ಳಿ, ರೂಪಾದೇವಿ ಬಂಗಾರ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.