ಕಲಬುರಗಿ: ರಾಜ್ಯ ಗುತ್ತಿಗೆದಾರರ ಸಂಘದ ಪ್ರಭಾರ ಅಧ್ಯಕ್ಷರಾಗಿ ಕಲಬುರಗಿಯ ಜಗನ್ನಾಥ ಜಿ. ಶೇಗ್ಜಿ ಆಯ್ಕೆ ಯಾಗಿದ್ದಾರೆ.
ಡಿ.ಕೆಂಪಣ್ಣ ಅವರು’ಸೆಪ್ಟೆಂಬರ್ 19ರಂದು ನಿಧನರಾಗಿದ್ದರಿಂದಾಗಿ, ಅಧ್ಯಕ್ಷ ಸ್ಥಾನ ತೆರವಾಗಿತ್ತು. ಅ.7ರ ಸೋಮವಾರ ದಂದು ನಡೆದ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ಹಿರಿಯ ಕಾರ್ಯಾಧ್ಯಕ್ಷರಾಗಿದ್ದ ಜಗನ್ನಾಥ್ ಜಿ. ಶೇಗ್ಜಿ ಅವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅಯ್ಕೆ ಮಾಡಲಾಯಿತು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ. ರವೀಂದ್ರ ತಿಳಿಸಿದ್ದಾರೆ.