ವಿವಿಧ ವೃಂದದ ಬೇಡಿಕೆಗಳ ಈಡೇರಿಕ್ಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಹೋರಾಟ

0
32

ಕಲಬುರಗಿ: ವಿವಿಧ ವೃಂದದ ಬೇಡಿಕೆಗಳನ್ನು ಈಡೇರಿಸಬೇಕೆಂದು ಬೆಂಗಳೂರಿನಿಂದ ಜಿಲ್ಲಾ ಮಟ್ಟದಲ್ಲಿ ಅನಿರ್ದಿಷ್ಟ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಬೇಡಿಕೆಗಳನ್ನು ಈಡೇರಿಸ ಬೇಕೆಂದು ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘದ ಸಮಿತಿಯ ರಾಜ್ಯ ನಿರ್ದೇಶಕರು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಾಜೇಶ್ವರಿ ಸಾಹು ಅವರು ಒತ್ತಾಯಿಸಿದ್ದಾರೆ.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆಯ ಎಲ್ಲ ವೃಂದ ಸಂಘಗಳು ಬೆಂಗಳೂರಿನ ಪ್ರೀಡಮ್ ಪಾರ್ಕನಲ್ಲಿ ನಾಲ್ಕೈದು ದಿನಗಳ ಕಾಲ ಹೋರಾಟ ನಡೆಸಿ ಪ್ರಸ್ತುತ ಜಿಲ್ಲಾ ಮಟ್ಟದಲ್ಲಿ ಅನಿರ್ದಿಷ್ಟ ಹೋರಾಟ ನಡೆಸಲಾಗುತ್ತಿದೆ. ಇದರಲ್ಲಿ ಗಣಕಯಂತ್ರ ಅಡರೇಟ್‍ರ್ಸ್ ಸಂಘ, ಕರವಸೂಲಿಗಾರರ ಸಂಘ,ಗ್ರೇಡ್-1 ಕಾರ್ಯದರ್ಶಿ ಸಂಘ, ಗ್ರೇಡ್ -2 ಕಾರ್ಯದರ್ಶಿಗಳ ಸಂಘ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಂಘ, ಸದಸ್ಯರ ಒಕ್ಕೂಟ, ಕ್ಷೇಮಾಭಿವೃದ್ಧಿ ಸಂಘ, ಬಿ ಗ್ರೇಡ್ ಸಂಘ ಹೀಗೆ ಹಲವಾರು ಸಂಘಗಳು ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸು ತ್ತಿವೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘವು ರಾಜ್ಯದ ಲ್ಲಿರುವ ಎಲ್ಲಾ ಪಿಡಿಒ ಹುದ್ದೆಗಳು ಏಕಕಾಲದಲ್ಲಿ ಬಿ ಗ್ರೇಡ್ ಮಾಡಬೇಕು, ಏಕೆಂದರೆ ಒಬ್ಬ ತಾಲೂಕಾ ಮಟ್ಟದ ಅಧಿಕಾರಿಗಿಂತಲೂ ಹೆಚ್ಚಿನ ಅನುದಾನವನ್ನು ಬಟಾವಣೆ ಮಾಡುತ್ತಿದ್ದೇವೆ. ವಿವಿಧ ಗ್ರಾಮ ಸಭೆಗಳನ್ನು ನಡೆಸುತ್ತಿದ್ದೇವೆ. ಕೆಡಿಪಿ ಸಭೆಯನ್ನು ನಡೆಸುತ್ತಿದ್ದೇವೆ. ಶಾಸನ ಬದ್ದ ಕಾನೂನುಗಳನ್ನು ಪಾಲಿಸುತ್ತಿದ್ದೇವೆ. 73ನೇ ತಿದ್ದುಪಡಿಯ ಪ್ರಕಾರ ಸ್ಥಳೀಯ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ರಾಜೇಶ್ವರಿ ಹೇಳುತ್ತಾ. ಇದರ ಜೊತೆಗೆ ನಮ್ಮ ಆರ್‍ಡಿಪಿಆರ್ ಕುಟುಂಬದ ಎಲ್ಲ ಸಂಘಗಳ ಬೇಡಿಕೆ ಗಳನ್ನು ತ್ವರಿತವಾಗಿ ಈಡೇರಿಸಬೇಕು ಮತ್ತು ಇಲಾಖೆಯ ಸಿಬ್ಬಂದಿಗಳು ಎದುರಿಸುತ್ತಿರುವ ಒತ್ತಡ ಬೇರೆ ಯಾವ ಇಲಾಖೆಯಲ್ಲೂ ಇಲ್ಲ ಹಾಗಾಗಿ ಎಲ್ಲರ ಹುದ್ದೆಗಳನ್ನು ಬಲಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷಭಗವಂತರಾಯ, ಅನೀಲ ಮಾನ್ಪಡೆ, ಬ್ರಿಗ್ರೇಡ್ ಸಂಘದ ತಾಲ್ಲೂಕಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅನಸೂಯ, ಪಾರ್ವತಿ, ವಿದ್ಯಾರಾಣಿ, ಜಗದೇವಿ ಪವಾರ, ಸಿದ್ದರಾಮ ಚಿಂಚೋಳಿ, ಅಮಿತ ಕೊಳ್ಳದ, ಸಿದ್ದರಾಮ ಬಬಲೇಶ್ವರ, ಭೀಮರಾಯ, ಪ್ರವೀಣ, ಮಹಾದೇವ, ರೇಣುಕಾ, ಶಾಂತಪ್ಪ, ಶರಣು, ಶರಣು ಪಾಟೀಲ, ಪಾರ್ವತಿ, ರಾಮದಾಸ, ನಾಗೇಶ್ ಮೂರ್ತಿ, ರಮೇಶ್ ಪ್ಯಾಟಿ ಹಾಗೂ ಕರವಸೂಲಿ ಸಂಘ, ಡಿಇಒ ಸಂಘದ ಜಿಲ್ಲಾಧ್ಯಕ್ಷ,  ಪಂಪ್ ಆಪರೇಟರ್ ಸಂಘದ ಜಿಲ್ಲಾಧ್ಯಕ್ಷರು, ಸದಸ್ಯರು, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here