ಕಲಬುರಗಿ: ಪಿಡಿಓಗಳ 3ನೇ ದಿನ ಹೋರಾಟ

0
59

ಕಲಬುರಗಿ: ಗ್ರಾಮ ಪಂಚಾಯತಿ ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪಿಡಿಓ, ಕಾರ್ಯದರ್ಶಿ ಗ್ರೇಡ- 1 ಗ್ರೇಡ್-2 ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಡಿಇಓ ಗ್ರಾಮ ಪಂಚಾಯತಿ ನೌಕರರ ಬಡ್ತಿ ಕೋಟಾ ಹೆಚ್ಚಳ ಮಾಡುವುದು ಮತ್ತು ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಅಡಿಯಲ್ಲಿ ಬೆಂಗಳೂರಿನಲ್ಲಿ 2 ದಿನ ಹೋರಾಟ ಮಾಡಿ ಕಲಬುರಗಿ ಜಿಲ್ಲಾ ಪಂಚಾಯತ ಎದುರುಗಡೆ 3ನೇ ದಿನಕ್ಕೆ ಹೋರಾಟ ಕಾಲಿಟ್ಟಿದೆ.

ಎಲ್ಲಾ ನೌಕರರ ಬಡ್ತಿ ಕೋಟಾ ಹೆಚ್ಚಳ ಮಾಡುವ ಬಗ್ಗೆ,ಕಾರ್ಯದರ್ಶಿ ಯಿಂದ ಪಿಡಿಓ ಹುದ್ದೆಗೆ ಜಿಲ್ಲಾ ಮಟ್ಟದಲ್ಲಿ ಬಡ್ತಿ ಕೊಡಬೇಕು, ಪಿಡಿಓ ರವರನ್ನು ಬಿ ರ್ಜೆ ಮಾಡುವ ಬಗ್ಗೆ, ಎಸ್‍ಡಿಎಎ ರವರನ್ನು ಎಫ್‍ಡಿಎಎ ಆಗಿ ಬಡ್ತಿ ಕೊಡಬೇಕು,ಗ್ರೇಡ-2 ಗ್ರಾಮ ಪಂಚಾಯತಿ ಗಳು ಗ್ರೇಡ-1 ಆಗಿ ಮೇಲ್ದರ್ಜೆಗೆ ಏರಿಸಬೇಕು. ಕಾರ್ಯದರ್ಶಿ ಮತ್ತು ಎಸ್‍ಡಿಎಎ ಹುದ್ದೆ ಜಿಲ್ಲಾ ಮಟ್ಟದ್ದಾಗಿರುವುದರಿಂದ ನಿಯೋಜನೆ ಮತ್ತು ವರ್ಗಾವಣೆ ಆಯುಕ್ತಾಲಯ ಬೆಂಗಳೂರು ಇವರಿಗೆ ಅಧಿಕಾರ ವಹಿಸಿದ್ದು ಖಂಡಿಸುತ್ತೇವೆ ಮತ್ತು ಈ ಆದೇಶ ಹಿಂಪಡೆದು ಜಿಲ್ಲಾ ಮಟ್ಟದ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ಜಿಲ್ಲಾ ಮಟ್ಟದಲ್ಲಿಯೇ ಮಾಡಬೇಕು, ಗ್ರಾಮ ಪಂಚಾಯತ ನೌಕರರಾದ ಡಿಇಓ, ಬಿಲ್ ಕಲೆಕ್ಟರ್, ಪಂಪ ಆಪರೇಟರ್ ,ಸಿಪಾಯಿ, ಸ್ವಚ್ಛತಾಗಾರರಿಗೆ ಕನಿಷ್ಟ ವೇತನ ಕೈಬಿಟ್ಟು ಸರಕಾರಿ ನೌಕರರಾಗಿ ಮಾಡುವುದು,ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ ಗಳ ಬಡ್ತಿ ಕೋಟಾ ಹೆಚ್ಚಳ ಮಾಡಬೇಕು ಹಾಗೂ ಗ್ರಾಮ ಪಂಚಾಯತ ಸದಸ್ಯರಿಗೆ ಕೇರಳ ರಾಜ್ಯದಂತೆ ಅಧಿಕಾರ, ಗೌರವಧನ ಕೊಡುವ ಬಗ್ಗೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ ಮುಂದೆ ಕಪ್ಪು ಪಟ್ಟಿ ಧರಿಸಿ ಹೋರಾಟ ಮಾಡಲಾಗುತ್ತಿದೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಭಗವಂತರಾಯ ಮುರಡಿ, ಅನುಪಮ್ಮಾ, ಕು.ರಾಜೇಶ್ವರಿ ಸಾಹು, ಅನೀಲಕುಮಾರ ಮಾನಪಡೆ, ಬಸವರಾಜ ಪಾಟೀಲ, ಮಲ್ಲಿಕಾರ್ಜುನ ಗೀರಿ, ಶಿವಾನಂದ ಕವಲಗಾ ಬಿ, ಹಳ್ಳಿರಾಯ ದೇಸಾಯಿ, ಮಲ್ಲಿಕಾರ್ಜುನ ಕುಳಗೇರಿ, ರಾಮದಾಸ್, ಭಾರತಿ ಮಣ್ಣೂರ ಸೇರಿದಂತೆ ಸಾವಿರಾರು ನೌಕರರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here