ಸುರಪುರ: ನಗರದ ಮುಜುಂದಾರಗಲ್ಲಿಯಲ್ಲಿನ ಐತಿಹಾಸಿಕ ಪ್ರಸನ್ನ ವೆಂಕಟೇಶ್ವರ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ನವರಾತ್ರಿ ಮಹೋತ್ಸವ ಹಾಗೂ ಕಲ್ಪವೃಕ್ಷ ವಾಹನ ಪೂಜಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ಅರ್ಚಕರಾದ ಕೃಷ್ಣಾಚಾರ್ಯ ದೇವರು ನೇತೃತ್ವದಲ್ಲಿ ಪ್ರಸನ್ನ ವೆಂಕಟೇಶ್ವರ ಹಾಗೂ ಹನುಮಾನ ಮೂರ್ತಿಗೆ ಅಲಂಕಾರಗೊಳಿಸಿ ಪೂಜೆ ಕೈಂಕರ್ಯ ನೆರವೇರಿಸಲಾಯಿತು.ಅಲ್ಲದೆ ದೇವಸ್ಥಾನದಲ್ಲಿ ಆಗಮಿಸಿ ಎಲ್ಲ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.
ದೇವಸ್ಥಾನಕ್ಕೆ ಮುಖಂಡರಾದ ರಾಜಾ ಪಾಮ ನಾಯಕ,ತಾಲ್ಲೂಕ ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ವ್ಯವಸ್ಥಾಪಕ ಯಲ್ಲಪ್ಪ ನಾಯಕ,ಎಇಇ ಶಾಂತಪ್ಪ ಸೇರಿದಂತೆ ನಗರಸಭೆಯ ಸಿಬ್ಬಂದಿಗಳು ಹಾಗೂ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು,ಅಲ್ಲದೆ ಎಲ್ಲ ಮುಖಂಡರಿಗೆ ಕೃಷ್ಣಾಚಾರ್ಯ ದೇವರು ನೇತೃತ್ವದಲ್ಲಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ,ಗುರುರಾಜ ಅಗ್ನಿಹೋತ್ರಿ,ಜಿತೇಂದರ್ ಸಿಂಗ್ ಠಾಕೂರ್,ಅನಂತ ಕೃಷ್ಣ,ಈಶ್ವರ ನಾಯಕ,ಕೋಟಯ್ಯ ಚಿದಳ್ಳಿ,ರಾಘವೇಂದ್ರ ಭಕ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರಸನ್ನ ವೆಂಕಟೇಶ್ವರ ದೇವರ ಮೂರ್ತಿಗೆ ಬೆಳ್ಳಿ ಕವಚ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದ್ದು.ದಿ.ಮಲ್ಲಯ್ಯ ಶೆಟ್ಟಿ ಚಿದಳ್ಳಿ,ದಿ.ಶೇಷಮ್ಮ ಹಾಗೂ ಗುಂಡಮ್ಮ ಇವರಿಂದ ಒಂದು ಕೆ.ಜಿ ಬೆಳ್ಳಿ ಹಾಗೂ ಶ್ರೀಮತಿ ಶಾಂತಾಬಾಯಿ ಚಂದ್ರಕಾಂತ ಪಂಚಮಗಿರಿ ಇವರಿಂದ 250 ಗ್ರಾಂ ಬೆಳ್ಳಿ ದಾನವಾಗಿ ನೀಡುವುದಾಗಿ ಘೋಷಿಸಿದ್ದಾರೆ.ಇತರೆ ಯಾರೆ ಭಾಕ್ತರು ದೇವರ ಮೂರ್ತಿಗೆ ಕವಚ ನಿರ್ಮಾಣಕ್ಕೆ ಬೆಳ್ಳಿ ದಾನ ನೀಡಹಬುದು ಎಂದು ಮುಖಂಡರು ತಿಳಿಸಿದರು.