ಹೃದಯ ಸಂಸ್ಕಾರ ಕಾವ್ಯದ ಪ್ರಮುಖ ಗುರಿಯಾಗಬೇಕು

0
33

ಕಲಬುರಗಿ:ಕಾವ್ಯಕ್ಕೂ ಒಂದು ಪ್ರಮುಖವಾದ ಗುರಿ ಇರುವುದು ಅವಶ್ಯ ಮತ್ತು ಅನಿವಾರ್ಯವಾಗಬೇಕು. ಜಾತಿ, ಧರ್ಮ, ಮತ ಪ್ರಚಾರದಂತಹ ಉದ್ದೇಶಗಳು ಕೆಲ ಕಾಲಾನಂತರದಲ್ಲಿ ಹಿನ್ನೆಲೆಗೆ ಸರಿಯುತ್ತವೆ ಎಂಬುದನ್ನು ಗಮನಿಸಬೇಕು. ಹೃದಯ ಸಂಸ್ಕಾರವೇ ಕಾವ್ಯದ ಪ್ರಮುಖ ಗುರಿಯಾಗಬೇಕು. ಅಂದರೇನೇ ಒಳ್ಳೆಯ ವ್ಯಕ್ತಿ, ಕುಟುಂಬ, ಸಮಾಜ, ದೇಶ ನಿರ್ಮಾಣವಾಗುವುದು. ಸ್ವಾರ್ಥ ಸಾಧನೆಗಾಗಿ ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಜಾತಿ, ಧರ್ಮ, ದೇಶ ಭಾಷೆಗಳ ಮಧ್ಯೆ ತಾರತಮ್ಯ ನಿರ್ಮಿಸುವಂತಹ ಸಾಹಿತ್ಯ ಸುತಾರಾಂ ಸೃಷ್ಟಿಸಬಾರದು ಎಂದು ಪ್ರಕಾಶಕ ಬಸವರಾಜ  ಕೊನೇಕ್  ಅಭಿಪ್ರಾಯಪಟ್ಟರು.

ನಗರದ ವಿಶ್ವನಾಥ್ ರೆಡ್ಡಿ ಮುದ್ನಾಳ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಮಾತೋಶ್ರೀ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡ ರಾಜ್ಯಮಟ್ಟದ ಒಂದು ದಿನದ ‘ಕನ್ನಡ, ಕವಿ – ಕಾವ್ಯ – ಕಥೆ – ಸಂಸ್ಕೃತಿ ಅಧ್ಯಯನ ಕಮ್ಮಟ’  ಉದ್ಘಾಟಿಸಿ  ನುಡಿಗನ್ನಡ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ ಕನ್ನಡ ನಾಡಿನಲ್ಲಿ ಆಗಿಹೋದ ಪ್ರಸಿದ್ಧ ಕವಿ. ಕೃತಿಗಳಿಗೆಲ್ಲ ಒಂದು ಭದ್ರವಾದ ದಾರ್ಶನಿಕ ಪರಂಪರೆಯ ಬುನಾದಿ ಇರುವುದನ್ನು ನಾವು ಗಮನಿಸಬಹುದು.

Contact Your\'s Advertisement; 9902492681

ಪಂಪ-ರನ್ನರಿಗೆ ಜೈನದರ್ಶನ; ಶರಣರಿಗೆ ವೀರಶೈವ ದರ್ಶನ; ದಾಸರಿಗೆ ವೈದಿಕದರ್ಶನ; ಆಧುನಿಕ ಕಾಲಕ್ಕೆ ಬಂದರೆ ಕುವೆಂಪು ಅವರಿಗೆ ರಾಮಕೃಷ್ಣ ಪರಮಹಂಸ, ವಿವೇಕಾನಂದರ ದರ್ಶನ, ದ.ರಾ.ಬೇಂದ್ರೆಯವರಿಗೆ ಮಹರ್ಷಿ ಅರವಿಂದರ ದರ್ಶನಗಳು ಪ್ರಮುಖ ಪ್ರೇರಣೆಯನ್ನು ಒದಗಿಸಿವೆ. ಹೊಸ ತಲೆಮಾರಿನ ಕವಿಗಳಿಗೂ ಕೂಡ ಗಾಂಧಿ, ಅಂಬೇಡ್ಕರ್, ಹೊಸದಾಗಿ ಕಾವ್ಯ ರಚಿಸುವವರು ಹಿಂದಿನ ಕಾವ್ಯಗಳ ಅಧ್ಯಯನ ಮಾಡುವುದು ಅವಶ್ಯಕವಾಗಿದ್ದು, ಬರಹಗಾರರು ಒಂದೇ ವಿಷಯದಲ್ಲಿ ಹಲವು ರೀತಿಯಲ್ಲಿ ತಮ್ಮ ಕಾವ್ಯವನ್ನು ತೆರೆದಿಡಬಹುದು. ಹೇಗೆ ರಾಮಾಯಣ ಮಹಾಕಾವ್ಯವು ವಿವಿಧ ಕವಿ, ಲೇಖಕರಿಂದ ನಾನಾ ವಿಷಯಗಳನ್ನು ಬಿಚ್ಚಿಟ್ಟಿದ್ದೆಯೋ, ಅದೇ ರೀತಿಯಾಗಿ ನವ ಕಾವ್ಯಗಳನ್ನು ಸೃಷ್ಟಿಸುವ ಕವಿಗಳಿಗೆ ಹಲವು ಚಿಂತನೆಗಳು ಬೇಕಾಗುವುದು ಅಗತ್ಯ ಎಂದರು.

ಕಾವ್ಯ ಕಟ್ಟುವಿಕೆ ಕುರಿತು ಡಾ. ಮಹಾದೇವ ಬಡಿಗೇರ ಮಾತನಾಡುತ್ತಾ ಕಾವ್ಯ ರಚಿಸುವವನ ಕಾವ್ಯವು ಕೇವಲ ಭಾಷೆಯಾಗಿರದೆ, ಅದರಲ್ಲಿ ರಸಜೀವ, ಅಲಂಕಾರ ಸೇರಿದಂತೆ ಸುಖ ನಿಲಯವು ಒಳಗೊಂಡಿರಬೇಕು. ಬರಹಗಾರನ ಸಾಹಿತ್ಯವು ಋಣಾತ್ಮಕ ಟೀಕೆಗಳಿಗೆ ಅನ್ವಯಿಸದೆ ವ್ಯಕ್ತಿ, ಕುಟುಂಬ, ಸಮಾಜ & ಇಡೀ ದೇಶಕ್ಕೆ ಒಳ್ಳೆಯದನ್ನು ಸೂಚಿಸಿದಾಗಿರಬೇಕು ಎಂದು ಶಿಬಿರಾರ್ಥಿಗಳಿಗೆ ಅವರು ಸಲಹೆ ನೀಡಿದರು.

ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಸುಮಾರು 37ಕ್ಕು ಹೆಚ್ಚು ರಾಜಮನೆತನಗಳು ಆಳಿವೆ. ಅವುಗಳ ಇತಿಹಾಸ ಬರೆದಿಟ್ಟವರು ಮಾತ್ರ ಬೆರಳಣಿಕೆಯ ಲೇಖಕರಷ್ಟೇ ಸಿಗುತ್ತಾರೆ. ಕಾವ್ಯಕ್ಕೆ ಮೂಲವೇ ಜನಪದ. ಇಂದಿನ ಕೇಳುಗನಷ್ಟೇ ನಾಳೆಯ ಹೇಳುಗನಾಗುತ್ತಾನೆ ಎಂದು ಹೇಳಿದರು.

ಸಮಾರಂಭದಲ್ಲಿ ಸಾಹಿತಿಗಳಾದ ಡಾ.ಶರಣಬಸಪ್ಪ ವಡ್ಡನಕೇರಿ, ಡಾ. ಬಸವರಾಜ ಮಠಪತಿ, ಡಾ.ಪ್ರೇಮಾ ಅಪಚಂದ ಸೇರಿದಂತೆ ಕಮ್ಮಟದ 150 ಕ್ಕೂ ಶಿಬಿರಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂಬರಾಯ ಮಡ್ದೆ ಕಾರ್ಯಕ್ರಮ ನಿರೂಪಿಸಿದರು.

ಭಾಷೆ ಬಳಕೆ ವಿವಿಧ ಆಯಾಮಗಳ ಮೊದಲ ಗೋಷ್ಟಿಯಲ್ಲಿ ಡಾ. ಕಾವ್ಯಶ್ರೀ ಮಹಾಗಾoವ್ಕರ್ ವಿಷಯ ಮಂಡಿಸಿದರೆ, ಡಾ. ಸುರೇಂದ್ರ ಕುಮಾರ ಕೆರಮಗಿ ಅಧ್ಯಕ್ಷತೆ ವಹಿಸಿದ್ದರು. ಡಾ.ನಾಗಪ್ಪ ಗೋಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಭಾಷಾಂತರ ಕಾವ್ಯ ಮತ್ತು ಕಥೆ ಎರಡನೇ ಗೋಷ್ಠಿಯಲ್ಲಿ ಡಾ ಬಸವಂತರಾವ ಜವಳಿ ವಿಷಯ ಮಂಡಿಸಿದರೆ,ಡಾ. ಚಂದ್ರಕಲಾ ಬಿದರಿ ಅಧ್ಯಕ್ಷತೆ ವಹಿಸಿದರು. ಡಾ.ರಾಮಚಂದ್ರ ಗಣಾಪುರ ಪ್ರತಿಕ್ರಿಯೆ  ನೀಡಿದರು.

ಕೊನೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸಿದ್ದರಾಮ ಹೊನಕಲ್ ಸಮಾರೋಪ ಭಾಷಣ  ಮಾಡಿದರು. ಅಪ್ಪಾರಾವ ಅಕ್ಕೋಣೆ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ. ಎಚ್. ನಿರಗುಡಿ ಅವರು ಗೌರವ ಉಪಸ್ಥಿತಿ ಹೊಂದಿದ್ದರು. ಎಂದು ಪತ್ರಿಕಾ ಪ್ರಕಟಣೆಯಲ್ಲಿ ಡಾ. ಶರಣಬಸಪ್ಪ ವಡ್ಡನಕೇರಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here