ಡಾ. ಅಶೋಕ. ಎಂ. ಕಾಳೆಗೆ ದಾವಣಗೆರೆಯ ಕರ್ನಾಟಕ ಮುಕುಟ ಮಣಿ ರಾಜ್ಯ ಪ್ರಶಸ್ತಿಗೆ ಆಯ್ಕೆ

0
35

ಕಲಬುರಗಿ: ಡಾ: ಅಶೋಕ. ಎಂ. ಕಾಳೆ, [ಕಲಬುರ್ಗಿ ಕಲಾಂ] ಇವರು ದಾವಣಗೆರೆಯ ಕರ್ನಾಟಕ ಮುಕುಟ ಮಣಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಲಾ ಕುಂಚ ಸಾಂಸ್ಕøತಿ ಸಂಸ್ಥೆ ದಾವಣಗೆರೆಯಿಂದ ಕೊಡುವ ಕರ್ನಾಟಕ ಮುಕುಟು ಮಣಿ ರಾಜ್ಯ ಪ್ರಶಸ್ತಿಗೆ ಕಲಬುರಗಿ ನಗರದ ಡಾ:: ಅಶೋಕ. ಎಂ. ಕಾಳೆ ರವರು ಭಾಜನರಾಗಿದ್ದಾರೆ.

ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಶಾಖಾ ವ್ಯವಸ್ಥಾಪಕರಾಗಿ ಧಕ್ಷತೆಯಿಂದ ಸೇವೆ ಸಲ್ಲಿಸಿ ಜಯನಗರ ಶಾಖೆಯ ಪ್ರಗತಿಯಲ್ಲಿ ಮೊದಲನೇ ಸ್ಥಾನ ಪಡೆದಿರುತ್ತಾರೆ. ಡಾ. ಅಶೋಕ. ಎಂ. ಕಾಳೆ ರವರು ತಮ್ಮ ಸುಧೀರ್ಘ ಸೇವೆಯಲ್ಲಿ ಬಡವರು ಮತ್ತು ಬ್ಯಾಂಕಿನ ವ್ಯವಹಾರ ಗೊತ್ತಿರದ ಜನರಿಗೆ ವಿಶೇಷ ಕಾಳಜಿವಹಿಸಿ ಮಾನವಿಯತೆ ಮೆರೆದಿದ್ದಾರೆ.
ಇವರು ಸಂಘಟಕರು, ಸಾಮಾಜಿಕ ನ್ಯಾಯದ ಚಳುವಳಿಗಾರರು, ಸಾಮಾಜಿಕ ಚಿಂತಕರು, ದಕ್ಷ ಹಾಗೂ ಪ್ರಾಮಾಣಿಕ ಬ್ಯಾಂಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿವೃತ್ತಿ ಹೊಂದಿರುತ್ತಾರೆ.

Contact Your\'s Advertisement; 9902492681

ಇವರು ನೋಡಲು ದಿವಂತ ಡಾ: ಎ.ಪಿ.ಜೆ ಅಬ್ದುಲ್ ಕಲಾಂ ರವರನ್ನು ಹೋಲುವ ಇವರು ಕಲಬುರಗಿ ಕಲಾಂ ಎಂದು ಪ್ರಖ್ಯಾತಿ ಹೊಂದಿರುತ್ತಾರೆ. ಇವರು ದಿನಾಂಕ: 24-09-2004 ರಲ್ಲಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರನ್ನು ಮುಖಾ ಮುಖಿ ಭೇಟಿ ಆದಾಗ ಕಲಾಂ ರವರು ಇವರಿಗೆ ಹೇಳಿದ ಮಾತು ” ಯು ಲುಕ್ಸ್ ಲೈಕ್ ಮಿ ಎಂದು ಹೇಳಿ ಇವರನ್ನು ಅಪ್ಪಿಕೊಂಡಿರುತ್ತಾರೆ.

ಇವರು ಹಲವು ಕನ್ನಡ ಚಲನ ಚಿತ್ರಗಳಲ್ಲಿ ನಟಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಇಲ್ಲಿಯವರೆ ಸುಮಾರು 34 ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಪಡೆದುಕೊಂಡಿರುತ್ತಾರೆ. ಹಾನರರಿ ಡಾಕ್ಟೇಟ್ ಅವಾರ್ಡ್ ಏಷಿಯಾ ಇಂಟರ್ ನ್ಯಾಷನಲ್ ಕಲ್ಟರ್ ರಿಸರ್ಚ ಯುನಿವರ್ಸಿಟಿ, ತಮಿಳನಾಡು ರವರಿಂದ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ಚಲನ ಚಿತ್ರ ಕ್ಷೇತ್ರದಲ್ಲಿ ಸಲ್ಲಿಸಿದ ಕ್ರೀಯಾತ್ಮ ಕಾರ್ಯ ತತ್ಪರತೆ ಹಾಗೂ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಡಾ. ಅಶೋಕ. ಎಂ. ಕಾಳೆ ರವರನ್ನು ಕರ್ನಾಟಕ ಮುಕುಟ ಮಣಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಬರುವ ಡಿಸೆಂಬರ್-1 ರಂದು ದಾವಣೆಗೆರೆ ನಗರದ ಗಡಿಯಾರ ಕಂಬದ ಬಳಿಯ ಚನ್ನಗಿರಿ ವೀರುಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ ಶೆಣೈ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here