ಶರಣಬಸವ ವಿಶ್ವವಿದ್ಯಾಲಯದಲ್ಲಿ 27ರಂದು ಸ್ಟೂಡೆಂಟ್ ಚಾಪ್ಟರ್ ಗೆ ಚಾಲನೆ

0
66

ಕಲಬುರಗಿ; ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಕೆಮಿಕಲ್ ಇಂಜಿನಿಯರ್ಸ್ (IIಛಿhಇ) ಹಾಗೂ ಶರಣಬಸವ ವಿಶ್ವವಿದ್ಯಾಲಯದ ಎನರ್ಜಿ ಇಂಜಿನಿಯರಿಂಗ್ ವಿಭಾಗದ ಸಹಯೋಗದೊಂದಿಗೆ ಅಕ್ಟೋಬರ್ 27 ರಂದು ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‍ನಲ್ಲಿ IIಅhಇ-ಊಖಅಯ ಸ್ಟೂಡೆಂಟ್ ಚಾಪ್ಟರ್ ಉದ್ಘಾಟನೆಗೊಳ್ಳಲಿದೆ.

ಕಲಬುರಗಿ ನಗರದಲ್ಲಿ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಸಂಚಾಲಕ ಹಾಗೂ ಎನರ್ಜಿ ಇಂಜಿನಿಯರಿಂಗ್ ವಿಭಾಗದ ಚೇರ್‍ಪರ್ಸನ್ ಡಾ. ಬಸವರಾಜ ಎಂ. ಶ್ರೀಗಿರಿ, IIಅhಇನ ಹೈದರಾಬಾದ್ ಪ್ರಾದೇಶಿಕ ಕೇಂದ್ರವು ಈ ಸ್ಟೂಡೆಂಟ್ ಚಾಪ್ಟರ್‍ನ್ನು ಸ್ಥಾಪಿಸಲಿದ್ದು, ಎನರ್ಜಿ ಇಂಜಿನಿಯರಿಂಗ್ ವಿಭಾಗದ ಸಹಯೋಗದೊಂದಿಗೆ ಅದರ ಕಾರ್ಯಚಟುವಟಿಕೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಡಾ. ಶ್ರೀಗಿರಿ, ತಮ್ಮ ಪ್ರಕಟಣೆಯಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪಾ ಅಪ್ಪಾಜಿಯವರ ಸಮ್ಮುಖದಲ್ಲಿ IIಅhಇನ ಹೈದರಾಬಾದ್ ಪ್ರಾದೇಶಿಕ ಕೇಂದ್ರದ ಚೇರ್‍ಮನ್ ಪೆÇ್ರ. ಅಲ್ತಾಲ್ ಹುಸೇನ್ ವಿಧ್ಯುಕ್ತವಾಗಿ ಉದ್ಘಾಟನೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ IIಅhಇನ ಗೌರವ ಕಾರ್ಯದರ್ಶಿ ಸಿ. ಎಚ್. ಅಪ್ಪಾರಾವ್ ಮತ್ತು ಉಪಾಧ್ಯಕ್ಷ ಡಾ. ಎಸ್. ಇಲೈಹ್ ಸೇರಿದಂತೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ಕುಲಸಚಿವ ಎಸ್.ಜಿ. ಡೊಳ್ಳೇಗೌಡರ್, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್.ಎಚ್. ಹೊನ್ನಳ್ಳಿ ಹಾಗೂ ಇನ್ನಿತರರು ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.

ಶರಣಬಸವ ವಿಶ್ವವಿದ್ಯಾಲಯದಲ್ಲಿ IIಅhಇನ ಸ್ಟೂಡೆಂಟ್ ಚಾಪ್ಟರ್‍ನ ಸ್ಥಾಪನೆಯು ವಿಶ್ವವಿದ್ಯಾಲಯ ಮತ್ತು ಉದ್ಯಮಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಬಹಳ ದೂರ ಸಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಅವರ ಇಂಟರ್ನ್‍ಶಿಪ್ ಮತ್ತು ನಿಯಮಿತ ಉದ್ಯಮಗಳ ಭೇಟಿಗಳಿಗಾಗಿ ಸುಲಭ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ. ಸ್ಟೂಡೆಂಟ್ ಚಾಪ್ಟರ್ ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್‍ನ ಕೊನೆಯಲ್ಲಿ ಹೆಸರಾಂತ ಕೈಗಾರಿಕೆಗಳಲ್ಲಿ ಅವರ ನಿಯೋಜನೆಗೆ ಸಹಾಯ ಮಾಡುತ್ತದೆ. IIಅhಇಯೊಂದಿಗಿನ ಸಂಪರ್ಕವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿಯಮಿತವಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸಲು ವಿಶ್ವವಿದ್ಯಾಲಯವನ್ನು ಸಕ್ರಿಯಗೊಳಿಸುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here