ಕಲಬುರಗಿ: ರಾಜ್ಯದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಐ.ಟಿ.ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ಚಿತ್ತಾಪುರ ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಗಳಡಿಯಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಿದರು.
2024-25ನೇ ಸಾಲಿನ ವಿವಿಧ ಯೋಜನೆ ಅಡಿಯಲ್ಲಿ ರಿಯಾಯತಿ ದರದಲ್ಲಿ ಹೈಟೆಕ್ ಕೃಷಿ ಯಂತ್ರೋಪಕರಣಗಳು, ಕೃಷಿ ಸಂಸ್ಕರಣ ಘಟಕಗಳು ಹಾಗೂ ತುಂತುರು ನೀರಾವರಿ ಘಟಕಗಳನ್ನು ಸಾಂಕೇತಿಕವಾಗಿ ಆಯ್ದ ಫಲಾನುಭವಿಗಳಿಗೆ ಇಂದಿಲ್ಲಿ ವಿತರಿಸಲಾಯಿತು.
ಚಿತ್ತಾಪುರ, ಶಹಾಬಾದ ಹಾಗೂ ಕಾಳಗಿ ತಾಲೂಕಿನ 6 ಜನ ರೈತರಿಗೆ ಬಹು ಬೆಳೆ ಒಕ್ಕಣೆ ಯಂತ್ರ (ರಾಶಿ ಯಂತ್ರ), 5 ಜನ ರೈತರಿಗೆ ಬಿತ್ತುವ ಕೂರಿಗೆ, ಇಬ್ಬರಿಗೆ ಭೂಮಿ ಸಿದ್ದತೆ ಉಪಕರಣ (ರೋಟೋವೇಟರ್), 4 ಜನ ರೈತರಿಗೆ ಭೂಮ್ ಸ್ಪೇಯರ್ (ಕೀಟನಾಶಕ ಸ್ಪಿಂಪರಣೆ ಯಂತ್ರ) ಹಾಗೂ ತಲಾ ಒಬ್ಬ ರೈತರಿಗೆ ಕ್ರಮವಾಗಿ ನೇಗಿಲು ಮತ್ತು ಬೆಳೆ ಕಾಳು ವಿಂಗಡಿಸುವ ಯಂತ್ರ (ದಾಲ್ ಗ್ರೇಡರ್) ಸಾಂಕೇತಿಕವಾಗಿ ವಿತರಿಸಲಾಯಿತು. ಇದಲ್ಲದೆ ಸೂಕ್ಷ್ಮ ನೀರಾವರಿ ಯೋಜನೆಯಡಿ 30 ಜನ ರೈತರಿಗೆ ತುಂತುರು ನೀರಾವರಿ (ಸ್ಪ್ರಿಂಕ್ಲರ್ ಸೆಟ್) ಸಹ ವಿತರಣೆ ಮಾಡಲಾಯಿತು.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದ ರಾಧಾಕೃ಼ಷ್ಣ ದೊಡ್ಡಮನಿ, ಶಾಸಕರಾದ ಅಲ್ಲಂಪ್ರಭು ಪಾಟೀಲ, ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಸೇಡಂ ವಿಭಾಗದ ಉಪ ಕೃಷಿ ನಿರ್ದೇಶಕಿ ಅನುಸೂಯಾ ಹೂಗಾರ, ಸಹಾಯಕ ಕೃಷಿ ನಿರ್ದೇಶಕ ಸಂಜೀವ ಕುಮಾರ ಮಾನಕಾರೆ, ಕೃಷಿ ಅಧಿಕಾರಿಗಳಾದ ಕರಣಕುಮಾರ , ಶ್ರೀನಿವಾಸ, ರವಿಂದ್ರಕುಮಾರ, ಸರೋಜಾ, ಮಲ್ಲಿಕಾರ್ಜುನ, ಸುರೇಖಾ, ಸುಷ್ಮಾ , ಬಸವರಾಜ ಬಂಗರಗಿ ಹಾಗೂ ಕೃಷಿ ಇಲಾಖೆಯ ಇತರೆ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.