ಕಲಾವಿದ ಮಹಮ್ಮದ್ ಆಯೋಜುದ್ದೀನ್ ಪಟೇಲ್ ಸನ್ಮಾನ
ಕಲಬುರಗಿ: ಅಂತರಾಷ್ಟಿçÃಯ ಕಲಾವಿದರ ದಿನಾಚರಣೆ ನಿಮಿತ್ಯ ಅಂತರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡಿದ ಕಲಬುರಗಿ ಕಲಾವಿದ ಮಹಮ್ಮದ್ ಆಯೋಜುದ್ದೀನ್ ಪಟೇಲ್ ಅವರಿಗೆ ಟೆಂಗಳಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿಯವರು ಸನ್ಮಾನಿಸಿದರು.
ನಂತರ ಮಾತನಾಡಿದ ಶಿವರಾಜ ಅಂಡಗಿ ಮಹಮ್ಮದ್ ಆಯೋಜುದ್ದೀನ್ ಪಟೇಲ್ ಸನ್ಮಾನ ಅವರು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯರಾಗಿ ಕಲಾ ಸೇವೆ ಮಾಡಿದ ಇವರು ಅಮೇರಿಕಾ, ರಷ್ಯಾ, ಲಂಡನ್, ನ್ಯೂಯಾರ್ಕ್, ಚೀನಾ, ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ಟರ್ಕಿ ಹೀಗೆ ಅನೇಕ ವಿದೇಶಗಳಿಗೆ ಭೇಟಿ ನೀಡಿ ನಮ್ಮ ದೇಶದ ಐತಿಹಾಸಿಕ ಮತ್ತು ಸಾಹಿತ್ಯಿಕ ಕಲಾಕೃತಿಗಳನ್ನು ಪ್ರದರ್ಶಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಷ್ಟೆ ಅಲ್ಲ ೩೫ಕ್ಕಿಂತ ಹೆಚ್ಚು ದೇಶಗಳಿಗೆ ಭೇಟಿ ನೀಡಿದ ಕರ್ನಾಟಕದ ಏಕೈಕ ಕಲಾವಿದ ಅಂದರೂ ತಪ್ಪಿಲ್ಲ ಎಂದರು.
ನಾಡಿನ ಭಾಷೆ, ನೆಲ, ಜಲ, ಸಂಸ್ಕೃತಿ, ವ್ಯಕ್ತಿತ್ವ ಬಗ್ಗೆ ಇರುವ ಅಭಿಮಾನ ಎಲ್ಲಕ್ಕಿಂತ ದೊಡ್ಡದು. ನಾವು ಮರೆಯಾದಾಗ ನಮ್ಮನ್ನು ನೆನಪಿಸಿಕೊಳ್ಳುವುದೇ ನಮ್ಮಲ್ಲಿರುವ ಕಲೆ, ಸಾಹಿತ್ಯ, ಸಂಸ್ಕೃತಿ ವ್ಯಕ್ತಿತ್ವದಿಂದಲೇ ಹೊರತು ಹಣ ಆಸ್ತಿಗಳಿಂದಲ್ಲ ಹಾಗಾಗಿ ನಮಗೆ ಎಲ್ಲಾದರೂ ಎಂದಾದರೂ ಅಧಿಕಾರ ಅವಕಾಶ, ಸವಲತ್ತು ಸಿಕ್ಕರೇ ನಾಡಿನ ಭಾಷೆ, ಕಲೆ, ವ್ಯಕ್ತಿತ್ವ ಹೊಂದಿದ ವ್ಯಕ್ತಿಯ ಬಗ್ಗೆ ಅಭಿಮಾನ ಪಡುವುದು, ಗೌರವಿಸುವುದು ನಮ್ಮೇಲ್ಲರ ಕರ್ತವ್ಯವಾಗಬೇಕೆಂದು ಸನ್ಮಾನಿಸಿ ಮಾತನಾಡಿದರು.
ಈ ಸನ್ಮಾನ ಸಮಾರಂಭದಲ್ಲಿ ಡಾ. ರೆಹಮಾನ್ ಪಟೇಲ್, ಡಾ. ಶಿವಶಂಕರ್ ಚಟ್ಟಿ, ಕಮಲಾಕರ್ ಸಂಗೊಳಿಗಿ, ವಿನೋದಕುಮಾರ ಜನೇವರಿ, ಶ್ರೀವತ್ಸ್ ಸಂಗೋಳಗಿ, ನಾಗಭೂಷಣ್, ಶಂಕರ್ ಸಂಗೋಳಗಿ, ಶ್ರೀಮತಿ ಲಲಿತಾ, ಶ್ರೀಮತಿ ಕಸ್ತೂರಿ, ಸಂಧ್ಯಾ ಮಾಲಿಪಾಟೀಲ, ಸಂಗಮೇಶ ಹೆಬ್ಬಾಳ ಹಾಗೂ ಇತರರು ಉಪಸ್ಥಿತರಿದ್ದರು.