ಸಂಶೋಧನೆಗಳ ಪ್ರಮಾಣಿಕರಣದಿಂದ ಮಾತ್ರ ರಾಷ್ಟ್ರಾಭಿವೃದ್ಧಿ ಸಾಧ್ಯ

0
61

ಕಲಬುರಗಿ: ಸಂಶೋಧನೆಗಳ, ಆವಿಷ್ಕಾರಗಳ ಹಾಗೂ ಸಮಾಜ ಸುಧಾರಕ ಸಾಧನೆಗಳ ಪ್ರಮಾಣಿಕರಣ ಇಂದಿನ ಅತೀಅವಶ್ಯ ಮತ್ತು ಕಡ್ಡಾಯ ವ್ಯವಸ್ಥೆಯಾಗಿದ್ದು ಇದರಿಂದ ಬಳಕೆದಾರರಿಗೆ ಅನುಕೂಲದ ಜೊತೆಗೆ ಜಾಗೃತೆಯನ್ನು ಕೂಡಮಾಡಬಹುದಾಗಿದೆ. ಇದಕ್ಕಾಗಿ ಐಟಿಯು, ಐಎಸ್‌ಓ ಮತ್ತು ಐಇಸಿ ಎಂಬ ಮೂರು ಅಂತರಾಷ್ಟ್ರೀಯ ಸಂಸ್ಥೆಗಳು ಪ್ರತಿವರ್ಷ ೧೪ನೇ ಅಕ್ಟೋಬರ್ ದಂದು ಸಮಾಲೋಚನೇ ನಡೆಸಿ ಗುಣಮಟ್ಟ ಧೃಢಿಕರಣ ಮತ್ತು ಪ್ರಮಾಣಿಕರಣ ಕಾರ್ಯವನ್ನು ನಡೆಯಿಸಿಕೊಡುವರು ಎಂದು ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಶೋಕ ಪಾಟೀಲ ಅವರು ತಮ್ಮ ಅಭಿಮತ ವ್ಯಕ್ತಪಡಿಸಿದರು.

ಅವರು ಇಂದು ಇಲ್ಲಿನ ಇನಸ್ಟೀಟ್ಯೂಟ್ ಆಫ್ ಇಂಜಿನಿಯರ‍್ಸ ಏರ್ಪಡಿಸಿದ ವಿಶ್ವ ಪ್ರಮಾಣಿಕರಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ವಿಶ್ವ ಪ್ರಮಾಣಿಕರಣ ದಿನಾಚರಣೆ ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, ಇನಸ್ಟೀಟ್ಯೂಟ್ ಆಫ್ ಇಂಜಿನಿಯರ‍್ಸನಲ್ಲಿಯೂ ಕೂಡ ಹಮ್ಮಿಕೊಳ್ಳಲಾಗಿದ್ದು ಜನರಲ್ಲಿ ಪ್ರಮಾಣಿಕರಣದ ಬಗ್ಗೆ ಜಾಗೃತಿಮೂಡಿಸುವ, ಇದರಿಂದ ದೊರಕುವ ಅನೂಕೂಲತೆಗಳು, ಯುವ ಸಂಶೋಧಕರಿಗೆ ನೀಡುವ ಮಾರ್ಗದರ್ಶನ ಹಾಗೂ ಹೋಸದಾಗಿ ಆವಿಷ್ಕಾರವಾಗುವ ಸಾಧನೆಗಳ ಪ್ರಮಾಣಿಕರಣದ ಮಾಹಿತಿ ಕೊಡುವುದೇ ತಮ್ಮ ಕರ್ತವ್ಯವಾಗಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ ಇನಸ್ಟೀಟ್ಯೂಟ್ ಆಫ್ ಇಂಜಿನಿಯರ‍್ಸ್‌ನ ಚೇರಮನ್ ಇಂಜಿನಿಯರ್ ಬಿ.ಎಸ್. ಮೋರೆ ತಿಳಿಸಿದರು.

ಅಭಿವೃದ್ಧಿ ಪರ ರಾಷ್ಟ್ರಗಳು ತಾಂತ್ರಿಕವಾಗಿ ನೈಪುಣ್ಯತೆ ಹೊಂದಬೇಕು ಹಾಗೂ ಆ ನಿಟ್ಟಿನಲ್ಲಿ ತಮ್ಮ ಕಾರ್ಯಚಟುವಟಿಕೆಗಳು ಕ್ರೂಢಿಸಿಕೊಳ್ಳಬೇಕು. ಆರೋಗ್ಯ, ಕೃಷಿ, ವ್ಯವಹಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಮಾಣಿಕರಣತೆ ಮತ್ತು ಜಾಗೃತಿ ಮೂಡಬೇಕು ಎಂದು ಇನಸ್ಟೀಟ್ಯೂಟ್ ಆಫ್ ಇಂಜಿನಿಯರ‍್ಸ ನ ಗೌರವ ಕಾರ್ಯದರ್ಶಿಗಳಾದ ಡಾ. ಬಾಬುರಾವ ಶೇರಿಕಾರ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಭಾಷ ಸೂಗೂರ ಅವರು ಸರ್ವರಿಗೂ ಸ್ವಾಗತಿಸಿದರು, ಶಿವಪುತ್ರಪ್ಪ ಭಾವಿ ಅವರು ಮುಖ್ಯ ಉಪನ್ಯಾಸಕಾರನ್ನು ಪರಿಚಯಿಸಿದರು, ಇನಸ್ಟೀಟ್ಯೂಟ್ ಆಫ್ ಇಂಜಿನಿಯರ‍್ಸ ನ ಗೌರವ ಕಾರ್ಯದರ್ಶಿಗಳಾದ ಡಾ. ಬಾಬುರಾವ ಶೇರಿಕಾರ ವಂದಿಸಿದರು. ಹಾಗೂ ಕಾರ್ಯಕ್ರಮವನ್ನು ಆಕಾಶ ವಡಗೇರಿ ಅವರು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಇನಸ್ಟೀಟ್ಯೂಟ್ ಆಫ್ ಇಂಜಿನಿಯರ‍್ಸ್‌ನ ಸದಸ್ಯರುಗಳಾದ ಇಂಜಿನಿಯರ ಎಂ.ಎಂ. ಕಾಡಾದಿ, ಕಾಶಪ್ಪ ವಾಂಜರಖೇಡ, ಎಸ್.ಡಿ.ಸ್ವಾದಿ, ಎಮ್ಮಿಮಠ, ಕಾರ್ತಿಕ, ಜಗಧಿಶ ಮೂಲಗೆ, ಡಾ. ರಾಜಕುಮಾರ, ಪ್ರೊ. ಪಾಟೀಲ ಮತ್ತು ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here