ಕಲಬುರಗಿ: ಕರ್ನಾಟಕ ಮಾಹಿತಿ ಆಯೋಗ ಜಾರಿಗೆ ಬಂದಾಗಿನಿಂದ ಬೃಷ್ಟಾಚಾರಕ್ಕೆ ಒಂದಿಷ್ಟು ಕಡಿವಾಣ ಬಿದ್ದಿದೆ ಇದರ ಬಗ್ಗೆ ಇನ್ನಷ್ಟು ಜನರಲ್ಲಿ ಅರಿವು ಮೂಡಿಸಬೇಕು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ರವೀಂದ್ರ ಗುರುನಾಥ ಧಾಕಪ್ಪ ಅವರು ಹೇಳಿದರು.
ರವಿವಾರದಂದು ಕಲಬುರಗಿಯ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗ,ಕಲಬುರಗಿ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸಸಿ ನೀಡಿ ಮಾತನಾಡಿದ ಅವರು
ಮಾಹಿತಿ ಹಕ್ಕು ದಿನಚಾರಣೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹಮ್ಮಿಕೊಂಡಿರುವುದು ತುಂಬ ಸಂತೋಷ ತಂದಿದ್ದು, ಮಾಹಿತಿ ಆಯೋಗ ಪೀಠ ಸ್ಥಾಪನೆಯಿಂದ ಈ ಏಳು ಜಿಲ್ಲೆಗಳಿಗೆ ಇದರ ಪ್ರಯೋಜನವಾಗಲಿದೆ. ಈ ಪೀಠಕ್ಕೆ ಶಾಶ್ವತ ಕಟ್ಟಡ ಒದಗಿಸುವಂತೆ ಸರಕಾರದ ಮೇಲೆ ಪ್ರಭಾವ ಬಿರುವ ಕಾರ್ಯ ಮಾಡಬೇಕು ಎಂದು ಹೇಳಿದರು.
2019ರಲ್ಲಿ ಕಲಬುರಗಿಯಲ್ಲಿ ಪೀಠವು ಸ್ಥಾಪನೆಯಾಯಿತು ನಾನು ಬಂದ ಮೇಲೆ 10.000 ಇದ್ದಂತಹ ಕೇಸಗಳನ್ನ 15 ತಿಂಗಳಲ್ಲಿ 3.000 ಪ್ರಕರಣಗಳ ಇತ್ಯಾರ್ಥ ಮಾಡಿದ್ದೆನೆ
ಕಲಬುರಗಿ ಪೀಠದಲ್ಲಿ ಹುದ್ದೆಗಳ ಕೊರತೆಯಿದೆ 371 ಜೆ ಅಡಿಯಲ್ಲಿ ಹುದ್ದೆಗಳನ್ನ ಭರ್ತಿ ಮಾಡಬೇಕಾಗಿದೆ. ಈ ಹುದ್ದೆಗಳನ್ನ ತುಂಬಿದಲ್ಲಿ ಕೆಲಸ ನಿರ್ವಹಿಸುವಲ್ಲಿ ಸಹಕಾರ ಆಗುತ್ತದೆ. ಕರ್ನಾಟಕದಲ್ಲಿ 11 ಮಾಹಿತಿ ಹಕ್ಕು ಪೀಠಗಳಿದ್ದು ಅದರಲ್ಲಿ ಒಂದು ಬೆಳಗಾಂವ ಇನ್ನೊಂದು ಕಲಬುರಗಿಯಲ್ಲಿದೆ ಎಂದು ಹೇಳಿದರು.
ಅತಿಥಿಗಳಾಗಿ ಹಿರಿಯ ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಸಿರನೂರಕರ್ ಮಾತನಾಡಿ,ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪರಿಣಾಮಕಾರಿ ಅನುಷ್ಠಾನದಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯವಾಗಿದೆ ಓದುಗರ ವೀಕ್ಷಕರ ಕೇಳುಗರ ಪರವಾಗಿ ಮಾಧ್ಯಮ ಕಾರ್ಯಮಾಡಬೇಕಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ಜಗನಾಥ ಹಂಲಿಗೆ ಮಾತನಾಡಿ, ಕಲಬುರಗಿ ಪೀಠವು ಈ ಭಾಗದ ಜನರಿಗೆ ಅನುಕೂಲವಾಗಲಿ ಸಾರ್ವಜನಿಕರು ಈ ಇದರ ಒಂದು ಸದುಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಗ್ರಾಹಕರ ವೇದಿಕೆಯ ಸಂಘದ ಅಧ್ಯಕ್ಷೆ ಮಾಲತಿ ರೇಷ್ಮೆ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಎಂಬ ಪದನಾಮ ಬದಲು ಕಲ್ಯಾಣ ಕರ್ನಾಟಕ ಎಂಬ ಹೆಸರಿನಲ್ಲಿ ದಾಪುಗಾಲು ಇಡುತ್ತಿದ್ದೇವೆ. ಗ್ರಾಹಕರು ಬೆಂಗಳೂರಿಗೆ ಹೋಗುವುದರಿಂದ ತೊಂದರೆ ಅನುಭವಿಸುವಂತಾಗಿದೆ ಗ್ರಾಹಕರ ವೇದಿಕೆ, ಸಂಚಾರಿ ಪೀಠ, ಕೋರ್ಟ್, ಹೈಕೋರ್ಟ್ ಬಹಳ ಇಲಾಖೆಗಳನ್ನು ಇಲ್ಲಿಗೆ ತಂದಿದ್ದೆವೆ ಇದರಿಂದ ಈ ಭಾಗದ ಜನರು ಇದರ ಸದು ಉಪಯೋಗ ಪಡಿದುಕೊಳ್ಳಬೇಕು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪರಿಸರ ಪ್ರಜ್ಞೆ ಹಾಗೂ ಸಂರಕ್ಷಣೆ ಸಂಘಟನೆಯ ಅಧ್ಯಕ್ಷ ದೀಪಕ ಗಾಲಾ ಮಾತನಾಡಿ, ಭಾರತ ದೇಶದಲ್ಲಿ ಭ್ರಷ್ಟಚಾರ ಮುಕ್ತಮಾಡಲೆಂದು ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತರಲಾಗಿದೆ. ಮೊಟ್ಟ ಮೊದಲ ಬಾರಿಗೆ ಸ್ವಿಡನ್ ದೇಶದಲ್ಲಿ ಜಾರಿಗೆ ಬಂದಿದೆ ನಮ್ಮ ದೇಶದಲ್ಲಿ ಮೊದಲ ಬಾರಿಗೆ ತಮಿಳು ನಾಡಿನಲ್ಲಿ ಜಾರಿಗೆ ತರಲಾಯಿತು.
ನಂತರ ಕರ್ನಾಟಕದಲ್ಲಿ 2005 ರಲ್ಲಿ ಜಾರಿಗೆ ತರಲಾಯಿತು.ಈ ಕಾಯ್ದೆಯ ಬಗ್ಗೆ ಸಾಕಷ್ಟು ಹಳ್ಳಿಯ ಜನರಿಗೆ ಗೊತ್ತಿಲ್ಲ ಇದರ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕಾಗಿದೆ. ಭ್ರಷ್ಟಚಾರವನ್ನು ತಡೆಯಲು ಇದೊಂದು ಅಸ್ತ್ರವಾಗಿದೆ ಎಂದು ಹೇಳಿದರು.
ಎ.ಪಿ.ಸಿ.ಆರ್.ಸ್ಟೇಟ್ ಆರ್ ಟಿ ಐ ಕೋರ್ಡಿನೇಟರ್ ಶೇಖ ಶಫಿ ಅಹಮದ್ ಅವರು 4(1)ಎ,4(1)ಬಿ ಹಲವಾರು ಕಾಯ್ದೆಗಳ ಅನುಷ್ಠಾನ ಕುರಿತು ಸಂಕ್ಷಿಪ್ತವಾದ ವಿವರಣೆ ನೀಡಿದರು.
ಕಾರ್ಯಕ್ರಮದ ನಂತರ ಹದಿನೈದು ನಿಮಿಷಗಳ ಕಾಲ ಮಾಹಿತಿ ಹಕ್ಕಗಳ ಬಗ್ಗೆ ತಮ್ಮ ಅನಿಸಿಕೆಗಳ ಬಗ್ಗೆ ಮಾಹಿತಿ ಆಯುಕ್ತರಿಂದ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಸಂಘಟನೆಗಳ ಅಧ್ಯಕ್ಷರು ಆರ್.ಟಿ.ಐ. ಕಾರ್ಯಕರ್ತರು ಭಾಗವಹಿಸಿದ್ದರು.