ಕಲಬುರಗಿ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾಹಿತಿ ಹಕ್ಕು ದಿನಾಚರಣೆ ಆಚರಿಸಲಾಯಿತು.
ಬೆಳ್ಳೆಗ್ಗೆ 11 ಗಂಟೆಗೆ ಹಸಿರು ಶಶಿ ಗಳು ನೀಡುವುದರ ಮೂಲಕ ಉದ್ಘಾಟಿಸಿ, ರಾಜ್ಯ ಮಾಹಿತಿ ಆಯುಕ್ತರುರಾದ ಆರ್.ಜಿ.ಧಾಕಪ್ಪ ಮಾತನಾಡುತ್ತ, ವಿಶ್ವಕ್ಕೆ ನ್ಯಾಯ ಶಾಸ್ತ್ರ ನೀಡಿದ ವಿಜ್ಞಾನೇಶ್ವರ ಮತ್ತು ವಚನ ಶಾಸ್ತ್ರ ಕೊಡ ಮಾಡಿದ ದಾಸಿಮಯ್ಯ ನವರ ಭೂಮಿಯಲ್ಲಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿ ಕೊಟ್ಟ ಸರಕಾರಕ್ಕೆ ಮತ್ತು ಈ ನಿಟ್ಟಿನಲ್ಲಿ 18 ವರ್ಷಗಳ ನಂತರ ಈ ದಿನಾಚರಣೆ ಮಾಡುತ್ತಿರುವ ಬಗ್ಗೆ ಹರ್ಷವ್ಯಕ್ತಪಡಿಸಿ ಮಹಾತಿ ಹಕ್ಕು ಶಾಶ್ವತ ಪೀಠ ಇದನ್ನು ಉಳಿಸಿ ಕೊಡು ಹೋಗುವ ಜವಾಬ್ದಾರಿ ನಿಮ್ಮೆಲ್ಲರದು ಎಂದು ತಿಳಿಸಿದರು,
3 ಕೆಲಸ ಬಾಕಿ ಇವೆ ಅದನ್ನು ಪಡೆದುಕೊಳ್ಳಲು ಕೋರುತ್ತೇನೆ. ಆಯೋಗಕ್ಕೆ ಕಾಯಂ ಸಿಬ್ಬಂದಿ ನೇಮಕ 371 j ಅಡಿಯಲ್ಲಿ, ಆಯೋಗಕ್ಕೆ ಕಾಯಂ ಸ್ಥಳ ಅದು, ಕೆ.ಎ.ಟಿ ಕಟ್ಟಡ ಮೇಲೆ ಶಾಶ್ವತವಾಗಿ ಪಡೆದುಕೊಂಡು ಕಾರ್ಯಾರಂಭ ಮಾಡುವುದು. ಪ್ರಸ್ತುತ ಆಯುಕ್ತರು ನಿವೃತ್ತಿ ಆಗುವ ಮೂರು ತಿಂಗಳ ಮೊದಲೇ ನೇಮಕ ಮಾಡಲು ಕೋರುವುದು. ಕಾರ್ಯಕ್ರಮದ ಮುಕ್ತಾಯದ ನಂತರ ಈ ಭಾಗದ ವಕೀಲರ ಬಳಗ ದೊಂದಿಗೆ ಬೆರೆತು ಕಾನೂನು ಆಯೋಗ, ಗ್ರಾಹಕ ಆಯೋಗ ಮತ್ತು ಮಾಹಿತಿ ಆಯೋಗಗಳು ಕೂಡಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ ಸಂಗಮ ದಂತೆ ಕೆಲಸ ಮಾಡಬೇಕೆಂದು ಕೋರಿ, ವಕೀಲರ ಸಮೂಹ ದೊಂದಿಗೆ ಭಾವ ಚಿತ್ರಕ್ಕೆ ಪಡೆದುಕೊಂಡರು.
ಮಾಲತಿ ರೇಷ್ಮಿ, ಸವಿತಾ ಗಿರಿ, ನ್ಯಾಯವಾದಿ ಜೇನವೆರಿ ವಿನೋದಕುಮಾರ, ಮಲ್ಲಿಕಾರ್ಜುನ ಸಿಂಪಿ, ವಿನೋದ, ಶಿವಲಿಂಗಪ್ಪಾ ಅಷ್ಟಗಿ, ಸಂತೋಷ ಗುರಮೀಟಕಲ, ಸದಾಶಿವ ಎಲ್ಗೊಡ್, ಈರಣ್ಣ ಝಲಕಿ ಇತರರು ಉಪಸ್ಥಿತರಿದ್ದರು.