ಪಿ.ಎಮ್ ವಿಶ್ವಕರ್ಮ ಫಲಾನುಭವಿಗಳಿಗೆ ಹಣ ನೀಡಲು ಕರವೇ ಮನವಿ

0
26

ಯಾದಗಿರಿ: ಕೇಂದ್ರ ಸರಕಾರ ಯೋಜನೆಯಾದ ಪಿ.ಎಮ್ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿ ತಮ್ಮ ಬ್ಯಾಂಕ್‍ಗೆ ಬಂದಿದ್ದು ಕೂಡಲೇ ಆ ಫಲಾನುಭವಿಗಳಿಗೆ ಹಣ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಮುಖಂಡರು ಸುರಪುರ ರಂಗಂಪೇಟೆಯ ಎಡಿಬಿ ಎಸ್.ಬಿ.ಐ ಬ್ಯಾಂಕ್ ವ್ಯವಸ್ಥಾಪಕರಿಗೆ ಒತ್ತಾಯಿಸಿದ್ದಾರೆ.

ಬ್ಯಾಂಕ್ ವ್ಯವಸ್ಥಾಪಕರಿಗೆ ಸಂಘಟನೆ ತಾಲ್ಲೂಕ ಅಧ್ಯಕ್ಷ ನಿಂಗಪ್ಪ ನಾಯಕ ಬಿಜಾಸಪುರ ನೇತೃತ್ವದಲ್ಲಿ ಭೇಟಿ ಮಾಡಿದ ಮುಖಂಡರು,ಫಲಾನುಭವಿಗಳು ಹಣಕ್ಕಾಗಿ ಎಂದರು.

Contact Your\'s Advertisement; 9902492681

ನೋಡುತ್ತಿದ್ದಾರೆ.ಕೂಡಲೇ ಎಲ್ಲಾ ಫಲಾನುಭವಿಗಳಿಗೆ ಹಣ ನೀಡಬೇಕು ಹಾಗೂ ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತ ಹಾಗೂ ರಂಗಂಪೇಟೆಯ ದೊಡ್ಡ ಬಜಾರದಲ್ಲಿ ಬ್ಯಾಂಕ್‍ನ ಎಟಿಎಮ್ ತೆರೆಯುವಂತೆ ಆಗ್ರಹಿಸಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆ ತಾಲ್ಲೂಕ ಉಪಾಧ್ಯಕ್ಷ ವಿರೇಶ ರುಮಾಲಮಠ,ಮಹ್ಮದ್ ಶಫಿಕ್,ಮಹ್ಮದ್ ಹುಸೇನ್,ಹಸನ್ ಪಟೇಲ್,ಎಮ್.ಡಿ ಸರ್ವರ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here