ಯಾದಗಿರಿ: ಭತ್ತ, ಹತ್ತಿಗೆ ಬೆಂಬಲ ಬೆಲೆ ನೀಡಲು ಆಗ್ರಹ

0
15

ಯಾದಗಿರಿ: ಕೇಂದ್ರ ಸರ್ಕಾರ ಭತ್ತದ ಬೆಂಬಲ ಬೆಲೆ 2320 ನಿಗದಿ ಮಾಡಿರುವುದು ರೈತರಿಗೆ ನ್ಯಾಯ ಸಮ್ಮತವಲ್ಲ. ರಾಜ್ಯ ಸರ್ಕಾರ ಹೆಚ್ಚುವರಿ 500 ರೂ ಪ್ರೋತ್ಸಾಹ ದನ ನೀಡಿ. ತಕ್ಷಣ ಖರೀದಿ ಕೇಂದ್ರಗಳ ಆರಂಭಿಸಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ,ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ಪತ್ರಿಕಾ ಗೋಷ್ಥಿಯಲ್ಲಿ ಒತ್ತಾಯಿಸಿದ್ದಾರೆ

ಸುರಪುರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಪಕ್ಕದ ಕಲಬುರ್ಗಿ ಜಿಲ್ಲೆಯಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಿಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಕುಂಟಾಲ್ಗೆ 7200 ಖರೀದಿ ಮಾಡುತ್ತಾರೆ ಈ ಜಿಲ್ಲೆಯಲ್ಲಿಯೂ ಕೂಡಲೇ ಆರಂಭಿಸಲಿ. ದಳ್ಳಾಳಿಗಳು ರೈತರ ಶೋಷಣೆ ನಿಲ್ಲಿಸಲಿ. ಎಪಿಎಂಸಿಗಳಲ್ಲಿ ಮಾರಾಟ ಮಾಡುವ ರೈತರ ಉತ್ಪನ್ನಗಳಿಗೆ ದಳ್ಳಾಳಿಗಳು 10ರಷ್ಟು ಕಮಿಷನ್ . ವೇಸ್ಟೇಜ್ ಎಂದು ಎರಡು ಮೂರು ಕೆಜಿ ತೆಗೆದುಕೊಳ್ಳಬಾರದು ಎಂದು ಕಾನೂನು ನಿಯಮವಿದೆ ದಳ್ಳಾಳಿಗಳು ಉಲ್ಲಂಘನೆ ಮಾಡಿದರೆ ರೈತರು ಎಪಿಎಂಸಿ ಕಾರ್ಯದರ್ಶಿಗೆ ದೂರು ಕೊಡಬಹುದು. ರೈತರ ಜಮೀನುಗಳನ್ನು ವಕ್ಫ ಬೋರ್ಡ್ ಆಸ್ತಿಗೆ ಪರಭಾರೆ ಮಾಡಿದರೆ ರಾಜ್ಯಾದ್ಯಂತ ಹೋರಾಟ ಸರ್ಕಾರಕ್ಕೆ ಎಚ್ಚರಿಕೆ ನೋಟಿಸ್ ನೀಡಿದ ತಹಸಿಲ್ದಾರ್ ಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿಗೆ ಒತ್ತಾಯ.ಅಲ್ಲದೆ ಕೂಡಲೇ ಸರಕಾರ ಮೊಬೈಲ್ಗಿಳಲ್ಲಿ ಬರುವ ಆನ್ಲೈನ್ ಗೇಮ್ಗಲಳನ್ನು ರದ್ದುಗೊಳಿಸಬೇಕು.ಇದರಿಂದ ರೈತರ ಮಕ್ಕಳು ತುಂಬಾ ಹಾಳಾಗುತ್ತಿದ್ದಾರೆ ಜನರ ಒಳಿತಿಗಾಗಿ ರದ್ದು ಮಾಡಬೇಕು ಎಂದರು.

Contact Your\'s Advertisement; 9902492681

ಪತ್ರಿಕಾಗೋಷ್ಟಿಯಲ್ಲಿ ತಾಲೂಕ ಅಧ್ಯಕ್ಷ ಮರಿಲಿಂಗಪ್ಪಗೌಡ ಆಡೂಡಗಿ .ಕೊಟ್ರೇಶ್ ಚೌದರಿ. ಶಿವಶರಣಪ್ಪ ಸಾಹುಕಾರ್ ಹೈಯಾಳ ಮಲ್ಲನಗೌಡ. ಹತ್ತಳ್ಳಿ ದೇವರಾಜ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here