ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮ ವಿಚಾರವಾಗಿ ಗೃಹ ಸಚಿವರ ಹೆಸರಲ್ಲಿ ನಕಲಿ ಪತ್ರ ವೈರಲ್ ಆರೋಪಕ್ಕೆ ಸಂಬಂಧಿಸಿದಂತೆ ಪೋಸ್ಟ್ಕಾರ್ಡ್ ವೆಬ್ ಪೋರ್ಟಲ್ ಸಂಪಾದಕರನ್ನು ಪೊಲೀಸರು ಬಂಧಿಸಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ ಎಂದು ನಕಲಿ ಪತ್ರವನ್ನು ವೈರಲ್ ಮಾಡಿದ ಆರೋಪದ ಮೇಲೆ ಪೋಸ್ಟ್ ಕಾರ್ಡ್ ವೆಬ್ ಪೋರ್ಟಲ್ ಸಂಪಾದಕ ಮಹೇಶ್ ಹೆಗ್ಡೆ ಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧ ಗೃಹ ಸಚಿವ ಎಂ.ಬಿ.ಪಾಟೀಲ ಅವರು ವಿಜಯಪುರದ ಅದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ದೂರು ಆಧರಿಸಿ, ಸಿಐಡಿ ಸೈಬರ್ ವಿಂಗ್ ಪೊಲೀಸರು ಆರೋಪಿ ಮಹೇಶ್ ಹೆಗ್ಡೆನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
2018ರ ಮಾರ್ಚ್ 29ರಂದು ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಕಟಿಸಿದ ಆರೋಪದಲ್ಲಿ ಜೈಲು ಸೇರಿದ್ದರು. ಕೋಮು ಗಲಭೆ ಸೃಷ್ಠಿಸುವ ಸುದ್ದಿ ಪ್ರಕಟ ಮಾಡಿದ್ದ ಆರೋಪದ ಮೇಲೆ ಮಹೇಶ್ ಹೆಗ್ಡೆ ಒಮ್ಮೆ ಜೈಲುವಾಸ ಅನುಭವಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲಾ ಬಿಜೆಪಿ ಗ್ರಾಮೀಣ ಉಪಾಧ್ಯಕ್ಷ ಪರಮೇಶ ಉಳವಣ್ಣನವರ್ ಪತ್ನಿ ಶ್ರುತಿ ಬೆಳ್ಳಕ್ಕಿಯವರನ್ನು ಬಂಧಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಕಪಿಲ್ ಸಿಬ್ಬಲ್ ಪತ್ರಿಕಾ ಗೋಷ್ಠಿ ಕರೆದು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರತಿಷ್ಠಿತ ಪತ್ರಿಕೆ ಮತ್ತು ಚಾನಲ್ ವಿರುದ್ಧ ನಕಲಿ ದಾಖಲೆ ಪ್ರಸರಾದ ಆರೋಪ ಚುನಾವಣೆ ಆಯೋಗಕ್ಕೆ ಅವರು ದೂರು ನೀಡಿ ಕ್ರಿಮಿನಲ್ ಮುಕದ್ದಮೆ ದಾಖಲಿಸುವಂತೆ ಅವರು ಆಗ್ರಹಸಿದ್ದರು.