ಕನ್ನಡದ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗರ ಭವ್ಯ ಮೆರವಣಿಗೆ ಚಾಲನೆ

0
40

ಕಲಬುರಗಿ: ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ಕಲಬುರಗಿ ನಗರದಲ್ಲಿ ಕನ್ನಡದ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗರ ಭವ್ಯ ಮೆರವಣಿಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಅಭಿನವ ಗುರುಬಸವ ಶಿವಾಚಾರ್ಯರು ವಹಿಸಿದ್ದು, ಭುವನೇಶ್ವರಿ ಭಾವಚಿತ್ರಕ್ಕೆ ಸುನೀಲ ಕುಲಕರ್ಣಿ ಮತ್ತು ಅಮೋಘವರ್ಷ ನೃಪತುಂಗರ ಭಾವಚಿತ್ರಕ್ಕೆ ಮಹಾನಗರ ಪಾಲಿಕೆ ಸದಸ್ಯ ಪ್ರಕಾಶ ಕಪನೂರ್ ಮಾಲಾರ್ಪಣೆ ಮಾಡಿದರು.

Contact Your\'s Advertisement; 9902492681

ಅಧ್ಯಕ್ಷತೆಯನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ವಹಿಸಿದ್ದು, ಕಾರ್ಯಕ್ರಮದ ಉದ್ಘಾಟನೆನೆಯನ್ನು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ ಅವರು ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಲಕ್ಷ್ಮಣ ದಸ್ತಿ ಅವರು ಮಾತನಾಡಿ ಅಮೋಘವರ್ಷರ ಆಳ್ವಿಕೆ ಕಾಲದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯದಲ್ಲಿ ಭೀಕರ ಬರಗಾಲ ಬಂದ್ ಸಮಯದಲ್ಲಿ ಕೋಲ್ಹಪುರ ಮಹಾಲಕ್ಷ್ಮಿ ದೇವಿಗೆ ಅಮೋಘವರ್ಷ ನೃಪತುಂಗರು ಬರಗಾಲ ಹೋಗಲಿ ಎಂದು ತಮ್ಮ ಕಿರು ಬೆರಳನ್ನು ಹರಕೆ ಕೊಟ್ಟಿದ್ದರು.

ಅಮೋಘವರ್ಷರ ಆಳ್ವಿಕೆ ಸಮಯದಲ್ಲಿ ಆಸ್ತಾನಕ್ಕೆ ಭೇಟಿ ನೀಡಿದ್ದ ಅರಬ್ ಪ್ರವಾಸಿ ಸುಲೇಮಾನ ಅವರು ವಿಶ್ವದ ನಾಲ್ಕು ಮಹಾನ ಸಾಮ್ರಾಜ್ಯಗಳಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವು ಒಂದಾಗಿತ್ತು ಎಂದು ಹೇಳಿದ್ದಾನೆ ರಾಷ್ಟ್ರಕೂಟ ಸಾಮ್ರಾಜ್ಯದ ವ್ಯಾಪ್ತಿಯು ಗುಜರಾತನಿಂದ ಪಶ್ಚಿಮ ಬಂಗಾಳ, ಕಾಶ್ಮೀರದಿಂದ ಶ್ರೀಲಂಕಾ ವರೆಗೂ ಇದ್ದಿತ್ತು ಎಂದು ತಿಳಿದು ಬರುತ್ತದೆ. ರಾಷ್ಟ್ರಕೂಟ ಸಾಮ್ರಾಜ್ಯವು ಕಲೆ, ವಾಸ್ತುಶಿಲ್ಪ, ಶಿಕ್ಷಣ, ಆಡಳಿತ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿ ಕರ್ನಾಟಕದ ಕೀರ್ತಿಯನ್ನು ವಿಶ್ವದ ಉದ್ದಕ್ಕೂ ಸಾರಿದ್ದರು ಎಂದು ಹೇಳಿದರು. ಪ್ರಸ್ತವಿಕವಾಗಿ ಕಲ್ಯಾಣ ನಾಡು ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಣ್ಣ ನಡಗೇರಿ ಮಾತನಾಡಿ ವಿಶ್ವದಲ್ಲಿ ೬೪ ವರ್ಷಗಳ ಕಾಲ್ ಆಳ್ವಿಕೆ ಮಾಡಿದ್ ಏಕೈಕ ಚಕ್ರವರ್ತಿ ಅಮೋಘವರ್ಷ ನೃಪತುಂಗರಾಗಿದ್ದಾರೆ.

ಇತಿಹಾಸದಲ್ಲಿ ಪ್ರಥಮ ಬಾರಿಗೆ ಚಕ್ರವರ್ತಿ ಅಮೋಘವರ್ಷ ನೃಪತುಂಗರ ಭವ್ಯ ಮೆರವಣಿಗೆಯನ್ನು ಮಾಡುತ್ತಿದ್ದೇವೆ. ಇಂತ ಮಹಾನ ಚಕ್ರವರ್ತಿ ಅಮೋಘವರ್ಷ ನೃಪತುಂಗ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯದ ಅಸ್ತಿತ್ವ ತವರು ಜಿಲ್ಲೆ ಕಲಬುರಗಿಯಲ್ಲಿ ಇಲ್ಲದಿರುವುದು ನಮ್ಮ ನಿಷ್ಕಾಳಜಿಗೆ ಹೀಡಿದ ಕನ್ನಡಿ ಮತ್ತು ನಾವು ಮಾಡುತ್ತಿರುವ ದೊಡ್ಡ ತಪ್ಪು ಹಾಗೂ ಅವರಿಗೆ ಮಾಡುತ್ತಿರುವ ಅಪಮಾನ ಎಂದು ತಿಳಿಯಬೇಕಾಗುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರವು ಪ್ರತಿ ವರ್ಷ್ ಅಮೋಘವರ್ಷ್ ನೃಪತುಂಗರ ಜಯಂತಿಯನ್ನು ಸರ್ಕಾರದಿಂದಲೇ ಆಯೋಜನೆ ಮಾಡಬೇಕು.

ಕಲಬುರಗಿ ವಿಮಾನ ನಿಲ್ದಾಣಕ್ಕೆ ಅಮೋಘವರ್ಷ ನೃಪತುಂಗರ ಹೆಸರನ್ನು ಇಡಬೇಕು, ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ರಾಷ್ಟ್ರಕೂಟ ವಿಶ್ವವಿದ್ಯಾಲಯ ಎಂದು ಹೆಸರಿಡಬೇಕು, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅಮೋಘವರ್ಷ ನೃಪತುಂಗರ ಅಧ್ಯಯನ ಪೀಠ ಆರಂಭ ಮಾಡಬೇಕು, ಮಳಖೇಡ ಕೋಟೆಯನ್ನು ಪ್ರವಾಸಿ ತಾಣವಾಗಿ ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಬಾಬು ಮದನಕರ, ಸಂಘಟಕರಾದ ಜೈಭೀಮ ಮಾಳಗೆ, ಅವಿನಾಶ್ ಕಪನೂರ್, ಮೋಹನ್ ಸಾಗರ, ನಾಗು ಡೊಂಗರಗಾAವ, ಮಲ್ಲಿಕಾರ್ಜುನ ದೊರೆ, ಅರುಣ್ ತವಡೆ, ದೇವು ದೊರೆ, ದತ್ತು ಜಮಾದಾರ, ಸುನೀಲ ಬಾಷಾ, ಸಿದ್ದಲಿಂಗ ಉಪ್ಪಾರ, ಶ್ರೀಶೈಲ ಪೂಜಾರಿ, ಸುಧಾಕರ್ ಸರಸಂಬಿ, ರಾಕೇಶ ಕೊರವಾರ ಸೇರಿದಂತೆ ಸಂಘಟನೆಯ ಪಧಾಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here