ಕಲಬುರಗಿ: ನಗರದ ಟೌನ್ ಹಾಲ್ ಮುಂಭಾಗದಲ್ಲಿ ನ.10ರಂದು ಬೆಳಗ್ಗೆ 9ಕ್ಕೆ ಡಾ.ಬಾಬು ಜಗಜೀವನರಾಮ್ ಪುತ್ಥಳಿ ಆವರಣದಲ್ಲಿ ಮಾಜಿ ಮಂತ್ರಿ ಹಾಗೂ ಮಾದಿಗ ಸಮಾಜದ ಹಿರಿಯ ಮುಖಂಡ ದಿ.ಜಿ.ರಾಮಕೃಷ್ಣ ಅವರ 88ನೇ ಜನ್ಮದಿನ ನಿಮಿತ್ತ ಮಾದಿಗ ಸಮಾಜದಿಂದ ಆಚರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಮಾದಿಗ ಸಮಾಜದ ಎಲ್ಲ ಸಂಘ / ಸಂಘಟನೆಗಳ ಪದಾಧಿಕಾರಿಗಳು, ಸಮಾಜದ ಹಿರಿಯರು ಯುವಕರು, ಮಹಿಳೆಯರು, ನಿವೃತ್ತಿ ಹೊಂದಿರುವ ನೌಕರಸ್ಥರು, ವಿದ್ಯಾರ್ಥಿಗಳು, ಹಾಗೂ ರಾಮಕೃಷ್ಣರವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾದಿಗ ಸಮಾಜದ ಯುವ ಹೋರಾಟಗಾರ ರಾಜು ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.