ಕಲಬುರಗಿ: ರಾಜ್ಯ ಗಂಗಾಮತ ನೌಕರರ ಸಂಘದಿಂದ ಕೊಡಮಾಡುವ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗಂಗಾ ವಿದ್ಯಾಸಿರಿ ಯೋಜನೆಯ ಅನುಷ್ಠಾನದ ಮಹತ್ವಪೂರ್ಣ ಕಾರ್ಯಕ್ರಮವನ್ನು ದಿ. 24 ರಂದು ಬೆಳಗ್ಗೆ 10: 30 ಗಂಟೆಗೆ ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಕೆಇಬಿ ಇಂಜಿನಿಯರ್ಸ್ ಭವನದಲ್ಲಿ ನಡೆಯಲಿದೆ.
2023-24 ನೇ ಸಾಲಿನಲ್ಲಿ ಎಸ್.ಎಸ್. ಎಲ್.ಸಿ/ ಸಿಬಿಎಸ್ಸಿ ಮತ್ತು ದ್ವಿತೀಯ ಪಿ.ಯು.ಸಿ (ಕಲಾ, ವಾಣಿಜ್ಯ, ವಿಜ್ಞಾನ) ಕೋರ್ಸ್‍ನಲ್ಲಿ ಅತಿಹೆಚ್ಚು ಅಂಕ ಪಡೆದಿರುವ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳಿಗೆ ನಗದು, ಪ್ರಶಸ್ತಿ ಪತ್ರ ನೀಡಲು ನಿರ್ಧರಿಸಲಾಗಿದೆ.
ಅದೇ ಸಾಲಿನ ವೈದ್ಯಕೀಯ, ಪಶು ವೈದ್ಯಕೀಯ, ಎಂಜಿನಿಯರಿಂಗ್, ಬಿ.ಎಸ್ಸಿ ಅಗ್ರಿ, ತೋಟಗಾರಿಕೆ ಸೇರಿ ವೃತ್ತಿಪರ ಪದವಿ ಕೋರ್ಸ್‍ಗಳಿಗೆ ಆಯ್ಕೆಯಾಗಿರುವ ಬಿ.ಪಿ.ಎಲ್.ಕಾರ್ಡ್ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ನೌಕರರ ಮಹತ್ವಪೂರ್ಣ ಯೋಜನೆಯಾದ ಗಂಗಾ ವಿದ್ಯಾಸಿರಿಯಿಂದ ಪೆÇ್ರೀತ್ಸಾಹಧನ ನೀಡಲಾಗುತ್ತಿದೆ.
ಕೋಲಿ, ಕಬ್ಬಲಿಗ, ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಬಿ.ಪಿ.ಎಲ್ ಕಾರ್ಡ್ ಹಾಗೂ ವೃತ್ತಿಪರ ಕೋರ್ಸ್‍ಗಳಿಗೆ ಆಯ್ಕೆಯಾದವರು ತಮ್ಮ ಆಯ್ಕೆ ಪತ್ರಗಳನ್ನು ಪಿ.ಡಿ.ಎಫ್. ಮೂಲಕ ನನ್ನ ಮೊ. 9901572091 ಗೆ ದಿ. 15 ರೊಳಗೆ ಕಳುಹಿಸಿಕೊಡಬೇಕು ಎಂದು ಕೋಲಿ ಕಬ್ಬಲಿಗ ನೌಕರರ ಸಂಘದ ಜಿಲ್ಲಾಧ್ಯಕ್ಷ ನೀಲಕಂಠ ಎಂ. ಜಮಾದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.