ಕೃಷಿಗೆ ಒಲವು ತೋರಿಸಿದ ವಕೀಲ ನಾಗನಾಥರಾವ ಪಾಟೀಲ್

0
211

ಕಲಬುರಗಿ: ಒಕ್ಕಲುತನವೇ ತಮ್ಮ ಮುಖ್ಯ ಕಸಬಾಗಿದ್ದರು ಹಳ್ಳಿಗಳಲ್ಲಿ ಆ ಕ್ಷೇತ್ರದಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಎರಡೆರಡು ಪದವಿ ಪಡೆದುಕೊಂಡು ವಕೀಲ ವೃತ್ತಿಯೊಂದಿಗೆ ಒಕ್ಕಲುತನ ಕಡೆ ಆಸಕ್ತಿ ತೋರಿಸುತ್ತಾ ಅನೇಕ ಪೌಷ್ಟಿಕ ಆಹಾರ ಬೆಳೆಗಳಲ್ಲಿ ಬಾಳೆಯು ಒಂದು ಉತ್ತಮ ಬೆಳೆ ಅಂತಹ ಬೆಳೆಯನ್ನು ಬೆಳೆದು ದೇಶದ ಬಡತನ ರೇಖೆ ಹಾಗೂ ಅಪೌಷ್ಟಿಕತೆ ರೇಖೆಯಲ್ಲಿ ಸುದಾರಣೆ ತರುವಂತಹ ಇವರ ಸಾಮಾಜಿಕ ಆರ್ಥಿಕ ಸೇವೆ ಮಾಡಲು ಒಲವು ತೋರಿಸಿದ ವಕೀಲ ವಿಶ್ವನಾಥ ಹೊನ್ನಳ್ಳಿಯವ ಸೇವೆ ಶ್ಲಾಘನೀಯವಾದುದು ಎಂದು ತುಮಕುಂಟಾ ನಾಗನಾಥರಾವ ಪಾಟೀಲ್ ಹೇಳಿದರು.

ನಗರದ ನಿಲ್ದಾಣ ಹತ್ತಿರವಿರುವ ಬಿರಾದಾರ ಹೊನ್ನಳ್ಳಿಯವರ ತೋಟದಲ್ಲಿ ವಚನೋತ್ಸವ ಪ್ರತಿಷ್ಟಾನ ಯುವ ಘಟಕದ ವತಿಯಿಂದ ಹಮ್ಮಿಕೊಂಡ ’ವಿಶ್ವ ಆಹಾರ’ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ತುಮಕುಂಟಾ ನಾಗನಾಥರಾವ ಪಾಟೀಲ್ ಮಾತನಾಡಿದರು.

Contact Your\'s Advertisement; 9902492681

ಪ್ರಾರಂಭದಲ್ಲಿ ವಚನೋತ್ಸವ ಪ್ರತಿಷ್ಟಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿಯವರು ಮಾತನಾಡುತ್ತಾ ಹೊನ್ನಳ್ಳಿಯವರ ಸ್ವಂತ ಹೊಲವಾಗಿದ್ದರು ವಯ್ಯಕ್ತಿಕ ಲಾಭವಾಗಿದ್ದರು ಅವರು ಬೆಳೆಯುತ್ತಿರುವ ಬಾಳೆ ಬೆಳೆ ಆರೋಗ್ಯಕ್ಕೆ ಉತ್ತಮವಾದ ಮತ್ತು ಅಧಿಕವಾಗಿ ವಿಟಾಮಿನ್ ’ಸಿ’ ಇರುವ ಈ ಬಾಳೆ ಜನರ ಉತ್ತಮ ಆರೋಗ್ಯ ಬೆಳಗಿಸುವಂತಹ ಹಾಗೂ ಆಹಾರದಲ್ಲಿ ಪೌಷ್ಟಿಕತೆ ಕಡಿಮೆಯಾಗುತ್ತಿರುವ ಸಮಸ್ಯೆಗೆ ಸಹಕಾರಿಯಾಗಿರುತ್ತದೆ.

’ಹನಿ ಹನಿ ಗೂಡಿದರೆ ಹಳ್ಳ ತೆನೆ ತೆನೆ ಗೂಡಿದರೆ ರಾಶಿ’ ಎಂಬಂತೆ ಪ್ರತಿಯೊಬ್ಬ ರೈತರು ಹಾಗೂ ವಿಶೇಷವಾಗಿ ವಿದ್ಯಾವಂತರು ಈ ರೀತಿ ಒಕ್ಕಲುತನಕ್ಕೆ ಆಸಕ್ತಿ ತೋರಿಸಿದರೆ ಮುಂಬರುವ ದಿನಗಳಲ್ಲಿ ನಮ್ಮ ಬಡತನದ ರೇಖೆ ಸುಧಾರಣೆ ತರವುದು ಎರಡು ಮಾತಿಲ್ಲ ಎನ್ನುತ್ತಾ ಸ್ವತಃ ಹೊನ್ನಳ್ಳಿವರೆ ೩ವರ್ಷಗಳ ಹಿಂದೆ ೬ಲಕ್ಷ ರೂಪಾಯಿ ಖರ್ಚು ಮಾಡಿ ಇದೇ ಬಾಳೆ ಬೆಳೆಯಲು ಹೋದಾಗ ಪ್ರಕೃತಿಯ ಸಮಸ್ಯೆಯಿಂದಾಗಿ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಬೆಳೆ ಹಾಳಾಗಿದ್ದರು ಛಲ ಬಿಡದೆ ಹೊಸ ಹೊಸ ತಾಂತ್ರಿಕತೆಯಿಂದ ಮಳೆ ಬಾರದಿದ್ದರು ನೀರಿಗಾಗಿ ಬೋರವೆಲ್ಲ ಹೊಡೆಸಿ ಹೆಚ್ಚು ನೀರು ಹಾಳಾಗದಂತೆ ಡ್ರಿಪ್ಪ ಇರೀಗೇಷನ್ ಮಾಡಿ ಇವತ್ತು ಮತ್ತೆ ಇಂತಹ ಸಮೃದ್ದಿ ಬಾಳೆ ಬೆಳೆ ನೋಡುತ್ತಿರುವುದು ತುಂಬಾ ಸಂತೋಷದ ವಿಷಯವೆಂದು ಇಂತಹ ಸೂಕ್ತ ಸ್ಥಳ ಹಾಗೂ ವಾತಾವಣದಲ್ಲಿ  ವಿಶ್ವ ಆಹಾರ ದಿನಾಚರಣೆ ಆಚರಿಸುವುದು ಅವಶ್ಯಕವೆಂಧು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಶ್ವನಾಥ ಹೊನ್ನಳ್ಳಿಯವರು ಮಾತನಾಡುತ್ತಾ ಒಕ್ಕಲುತನದ ಕ್ಷೇತ್ರದಲ್ಲಿ ಇತ್ತೀಚೆಗೆ ಕೂಲಿಕಾರರ ಸಮಸ್ಯೆ ಎದುರಾಗಿದ್ದು ಕೂಲಿಕಾರರು ವೇತನಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಮೈಗಳ್ಳತನ ಹೆಚ್ಚಾಗಿದೆ ಸರ್ಕಾರದ ಅವೈಜ್ಞಾನಿಕ ಯೋಜನೆಗಳು ಕೂಡಾ ಕಾರಣವಾಗಿವೆ ಆದರೂ ಒಕ್ಕಲುತನದಲ್ಲಿ ಸ್ವಲ್ಪ ಕಷ್ಟಯಿದೆ ಆದರೆ ನಷ್ಟವಿಲ್ಲವೆಂಬುದು ಸ್ಪಷ್ಟವಾಗಿ ಹೇಳಬಹುದು ಎಂದು ತಮ್ಮ ಅನುಭವ ಹಂಚಿಕೊಂಡರು.

ಉಪನ್ಯಾಸಕರಾದ ಡಾ. ವಿಜಯಲಕ್ಷ್ಮಿ ಬಿರಾದಾರ, ಸುಜಾತಾ ಬಿರಾದಾರ, ರಾಜಶೇಖರ ದೇಶಮುಖ, ನಾಗಮ್ಮ ಬಿರಾದಾರ ಅಥಿತಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಡಾ. ಸಹನಾ ಹೊನ್ನಳ್ಳಿ ಸ್ವಾಗತಿಸಿದರು ವಿನೋದಕುಮಾರ ಜೆನೆವರಿ ವಂದಿಸಿದರು

ಹಿರಿಯ ವಕೀಲರಾದ ಸೇಡಂ ಚಂದ್ರರಾವ ದೇಶಮುಖ, ವಕೀಲರಾದ ಚಂದ್ರಕಾಂತ ಮಾಲಗತ್ತಿ, ಸುನೀಲ ವಂಟಿ, ಚನ್ನಪ್ಪ ಸುರಪೂರ, ವಿಶ್ವನಾಥ ಗೂಳಿ, ಶಂಕರ ಬಿರಾದಾರ, ಮಹೇಶ ನಾಟೀಕಾರ, ವಿಶ್ವನಾಥ ಪಾಳಾ, ಪ್ರತಿಭಾ ಬಿರಾದಾರ, ಶಿಲ್ಪಾ ದೇಶಮುಖ. ಶೈಲಜಾ ಗೂಳಿ, ರಾಜಮ್ಮ, ಲಲಿತಾ, ಶರಣಪ್ರಸಾದ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here