ಸುರಪುರ: ಜಯ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯಿಂದ ನವಂಬರ್ 12ನೇ ತಾರೀಕು ಸುರಪುರ ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ತಾಲೂಕ ಅಧ್ಯಕ್ಷ ಮಲ್ಲಪ್ಪ ನಾಯಕ ತಿಳಿಸಿದರು.
ಭಾನುವಾರ ಸುರಪುರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ 500 ಅಡಿ ಉದ್ದದ ಬೃಹತ್ ಕನ್ನಡ ಬಾವುಟ ಮೆರವಣಿಗೆ,ನಂತರ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಲಕ್ಷ್ಮಿಪುರ ಶ್ರೀಗಿರಿ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ,ಶಾಸಕ ರಾಜಾ ವೇಣುಗೋಪಾಲ ನಾಯಕ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಸಂಘಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಲಪ್ಪನೋರ್ ವಹಿಸುತ್ತಾರೆ, ತಾಲೂಕ ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೆರ, ಜಿಲ್ಲಾ ಕಾರ್ಯಕ್ಷ ಶರಣು ಬೈರಿಮರಡಿ, ತಾಲೂಕು ಕಾರ್ಯಧ್ಯಕ್ಷ ಶಿವರಾಜ್ ವಗ್ಗರ್ ನೇತೃತ್ವ ಹೊಯ್ಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ),ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಯಲ್ಲಪ್ಪ ಕುರಕುಂದಿ, ಖ್ಯಾತ ಉದ್ಯಮಿ ಜ್ಞಾನ ಚಂದ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ್ ಗುತ್ತೇದಾರ್, ಕಸಾಪ ತಾಲೂಕ ಅಧ್ಯಕ್ಷ ಶರಣಬಸಪ್ಪ ಯಾಳವಾರ, ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗೂರೇಶ್ವರ ವಾರದ, ನಗರಸಭೆ ಅಧ್ಯಕ್ಷರಾದ ಹೀನ ಕೌಸರ್ ಶಕೀಲ್ ಅಹ್ಮದ್, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಕರ ಭಟ್ಟ ಜೋಶಿ ಹಾಗೂ ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಸಿದ್ದರಾಮಯ್ಯ ರೆಡ್ಡಿ ಪಾಟೀಲ್ ಸೇರಿದಂತೆ ಟಿ ಹೆಚ್ ಓ ಪಿ ಐ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅನೇಕ ಮುಖಂಡರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಹಿತ್ಯ ಕ್ಷೇತ್ರದಿಂದ ಶ್ರೀನಿವಾಸ ಜಾಲವಾದಿ, ಕ್ರೀಡಾ ಕ್ಷೇತ್ರದಿಂದ ಮೌನೇಶ ದೇವಾಪುರ, ಕನ್ನಡಪರ ಹಿರಿಯ ಹೋರಾಟಗಾರ ವೆಂಕಟೇಶ ನಾಯಕ ಬೈರಿಮರಡಿ, ರಂಗಭೂಮಿ ಕ್ಷೇತ್ರದಿಂದ ಮಲ್ಲೇಶ್ ಕೋನಾಳ ಹಾಗೂ ಸಂಗೀತ ಕ್ಷೇತ್ರದಿಂದ ರಮೇಶ ಝಂಡದಕೇರಾ ಸಾಧಕರಿಗೆ ಸನ್ಮಾನ ಸಮಾರಂಭವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಸಂಘದ ತಾಲೂಕು ಕಾರ್ಯಾಧ್ಯಕ್ಷ ಶಿವರಾಜ್ ವಗ್ಗಾರ ಮಾತನಾಡಿದರು. ಜಿಲ್ಲಾ ಕಾರ್ಯಧ್ಯಕ್ಷ ಶರಣು ಬೈರಿಮರಡಿ, ಕೃಷ್ಣ ಹಾವಿನ ಬಾದ್ಯಾಪುರ, ಮುಕ್ತಿಯಾರ್, ಹನುಮಂತ ಭಂಡಾರಿ ರತ್ತಾಳ, ರವಿ ನಾಯಕ ಬಿಚ್ಚಗತ್ತಿಕೇರಾ, ಶಿವಕುಮಾರ ದೀವಳಗುಡ್ಡ, ಹುಸೇನ್ ರಂಗಂಪೇಟ, ತಿಮ್ಮಯ್ಯ ದೀವಳಗುಡ್ಡ, ರವಿ ಟರ್ಕಿ ದೀವಳಗುಡ್ಡ, ನಾಗರಾಜ್ ಹಸನಾಪುರ, ಶರಣು ಕೃಷ್ಣಾಪುರ್, ಮಲ್ಲಪ್ಪ ಕೊಂಗಂಡಿ, ಮಹಾಂತೇಶ್ ಮಂಡಗಳ್ಳಿ, ಗಣಪತಿ ರತ್ತಾಳ, ರಾಜು ಕೃಷ್ಣಾಪುರ, ನಿಂಗಪ್ಪ ದೀವಳಗುಡ್ಡ, ಗಂಗೂ ಗಂಗಾನಗರ ಸುರಪುರ ಸೇರಿ ಅನೇಕರು ಭಾಗವಹಿಸಿದ್ದರು.