ಕಲಬುರಗಿ: ವೀರಶೈವ ಲಿಂಗಾಯತ ಮಹಾ ವೇದಿಕೆ ಕಲಬುರ್ಗಿ (ರಿ )ಜಿಲ್ಲಾ ಸಮಿತಿವತಿಯಿಂದ ನವೆಂಬರ್ 14ರಂದು 8ನೇ ಪೀಠಾಧಿಪತಿಗಳು ಪೂಜ್ಯ ಡಾ. ಶ್ರೀ ಶರಣಬಸಪ್ಪ ಅಪ್ಪ ಅವರ ಹಾಗೂ ಪೂಜ್ಯ 9ನೇ ಪೀಠಾದೀಪತಿಗಳು ಶರಣಬಸವೇಶ್ವರ ಸಂಸ್ಥಾನ ಕಲಬುರ್ಗಿ ಪೂಜ್ಯ ಶ್ರೀ ಚಿರಂಜೀವಿ ದೊಡ್ಡಪ್ಪ ಅಪ್ಪ ಮತ್ತು ಶ್ರೀ ಶರಣಬಸವೇಶ್ವರ್ ವಿದ್ಯಾ ವರ್ಧಕ ಸಂಘದ ಚೇರ್ ಪರ್ಸನ್ಗಳಾದ ಮಾತೋಶ್ರೀ ಶ್ರೀ ಡಾ. ದಾಕ್ಷಾಯಣಿ ಶರಣಬಸವಪ್ಪಾ ಅಪ್ಪ ಜೀ ಪೂಜ್ಯರ ಜನ್ಮದಿನದ ಅಂಗವಾಗಿ ಕಲಬುರ್ಗಿ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ಗದ್ದುಗೆಗೆ ಲಕ್ಷ ಪುಷ್ಪ ಬಿಲ್ವಾರ್ಚನೆ, 1001ಇಷ್ಟಲಿಂಗ ಮಹಾಪೂಜೆ ಶ್ರದ್ದೆ ಭಕ್ತಿಯಿಂದ ಗುರುವಾರ ನೆರವೇರಿತು.
ಬೆಳಗುಂಪಿಯ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಪಾಳಾದ ಶ್ರೀ ಡಾ.ಗುರುಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಅಪ್ಪಾಜ್ಜಿ ಅವರ ಜನ್ಮದಿನ ಬಿಲ್ವಾರ್ಚನೆ, 1001ಇಷ್ಟಲಿಂಗ ವೀರಶೈವ ಮಹಾಪೂಜೆ, ‘ಶಿವದೀಕ್ಷೆ, ಲಿಂಗಾಯತ ಸುಮಾರು 25 ಜಂಗಮ ವಟುಗಳಿಗೆ ಅಯ್ಯಾಚಾರ ಆಯೋಜನೆ ನೆರವೇರಿಸಲಾಯಿತು.
ನಸುಕಿನ ಜಾವ ಐದು ಗಂಟೆಗೆ 50 ಪುರೋಹಿತರ ತಂಡದ ಮಂತ್ರಘೋಷಣೆಗಳೊಂದಿಗೆ ಬಿಲ್ವಾರ್ಚನೆಗೈದು, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿಯೊಂದಿಗೆ ಮಂಗಲ ಮಾಡಲಾಯಿತು.
ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಶ್ರೀ ಚಿ.ದೊಡ್ಡಪ್ಪ ಅಪ್ಪ ಮತ್ತು ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜ್ಜಿ ಸಾನ್ನಿಧ್ಯ ವಹಿಸಿದ್ದರು .
ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಯುವ ಮುಖಂಡರಾದ ಡಾ. ಅಲ್ಲಮ ಪ್ರಭು ದೇಶಮುಖ , ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾ ಅಧ್ಯಕ್ಷರಾದ ದಯಾನಂದ ಪಾಟೀಲ್ , ರಾಜ್ಯ ಸಮಿತಿಯ ಶ್ರೀಧರ ಎಮ್ ನಾಗನಹಳ್ಳಿ, ಈ ಸಂಧರ್ಭದಲ್ಲಿ ಪ್ರಧಾನ್ ಕಾರ್ಯದರ್ಶಿ ಸುನೀಲ್ ಮಹಾಗವಂಕರ್, ಕಾರ್ಯದರ್ಶಿ ಮಹೇಶ್ ಚಂದ್ರ ಪಾಟೀಲ್ ಕಣ್ಣಿ, ಸಹ ಕಾರ್ಯದರ್ಶಿ ಆನಂದ್ ಕಣಸೂರ್, ಪರಮೇಶ್ವರ್ ಯಳಮೆಲಿ, ಜಿಲ್ಲಾ ಸಂಚಾಲಕರಾದ ಗುರುರಾಜ್ ಅಂಬಾಡಿ, ಸತೀಶ್ ಮಾಹುರ್, ಸತೀಶ್ ಕೋಣಿನ್, ಶಿವುಕುಮಾರ್ ಸಾವಳಗಿ, ಗುರುರಾಜ್ ಸುಂಟಿನೂರ್, ಸುನೀಲ್ ಕೊಳ್ಕೊಂರ್ ಸದ್ಯಸರಾದ ಶರಣು ಕರೆಕಲ್, ಕಿರಣ್ ಕಣ್ಣಿ,ಪ್ರಜ್ವಲ್ ಕೊರಳ್ಳಿ , ಅಜಯ್ ರೆಡ್ಡಿ, ಅವಿನಾಶ್ ಗೊಬ್ಬುರಕರ್, ಮಲ್ಲು ಕೊಂಡೆದ, ವಿಜಯ ಪುರಾಣಿಕಮಠ್, ಅಣ್ಣಾರಾಯ ಹಿರೇಗೌಡ, ನಾಗಯ್ಯ ಮಾಲಾಗತ್ತಿ, ಆಕಾಶ್ ಕುಲಕರ್ಣಿ, ಸಚೀನ್, ನಿಖಿಲ್ ಬಿಲಗುಂದಿ , ಶ್ರೀಕಾಂತ್ ಬಿರಾದಾರ್, ನಾಗೇಶ್ ಹಾವನೂರ್ ಅವಿನಾಶ್ ಅರಳಿ , ಮಲ್ಲು ಗೋಲೆದ, ಮಹೇಶ್ ಬಾಳ್ಳಿ, ಆನಂದ್ ಕೇಶವ್, ಅಭಿಷೇಕ್ ಪಾಟೀಲ್, ಶ್ರೀಶೈಲ್ ಪಾಟೀಲ್, ಅಭಿಷೇಕ್ ನಾಗನಹಳ್ಳಿ ಉಪಸ್ಥಿತರಿದ್ದರು.