ಶಹಾಬಾದ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ, ರಾಜ್ಯ ಪರಿಷತ್, ಖಜಾಂಚಿ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಿವಪುತ್ರ ಕರಣಿಕ್, ರಾಜ್ಯ ಪರಿಷತ್ ಸ್ಥಾನದ ಅಭ್ಯರ್ಥಿ ಸಂಜಯ ರಾಠೋಡ , ಖಜಾಂಚಿ ಸ್ಥಾನದ ಅಭ್ಯರ್ಥಿ ಮಂಜುನಾಥ ಹಂದರಾಳ ಗೆಲುವು ಸಾಧಿಸಿದ್ದಾರೆ.
ಜಿದ್ದಾಜಿದ್ದಿನ ಚುನಾವಣೆಯಲ್ಲಿ ಪ್ರಜಾಸತ್ತಾತ್ಮಕ ಕ್ರಿಯಾಶೀಲ ಶಿಕ್ಷಕರ ಪ್ಯಾನಲ್‍ನಿಂದ ಶಿವಪುತ್ರ ಕರಣಿಕ್ ಹಾಗೂ ಸಂಜಯ ರಾಠೋಡ ಆಯ್ಕೆಯಾದರೆ, ಶಿಕ್ಷಕ ಮಿತ್ರ ಪ್ಯಾನಲ್‍ನಿಂದ ಮಂಜುನಾಥ ಹಂದರಾಳ ಮಾತ್ರ ಗೆಲುವು ಕಂಡಿದ್ದಾರೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ 27 ನಿರ್ದೇಶಕರು ಮತಗಟ್ಟೆಯಲ್ಲಿ ಶನಿವಾರ ಮತಗಳನ್ನು ಚಲಾಯಿಸಿದರು. ನಂತರ ನಡೆದ ಎಣಿಕೆಯಲ್ಲಿ ತಾಲೂಕಾಧ್ಯಕ್ಷರ ಸ್ಥಾನದ ಅಭ್ಯರ್ಥಿ ಶಿವಪುತ್ರ ಕರಣಿಕ್ 15 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದರೇ ಸಂತೋಷ ಸಲಗಾರ್ 12 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು.
ರಾಜ್ಯ ಪರಿಷತ್ ಸ್ಥಾನದ ಅಭ್ಯರ್ಥಿ ಸಂಜಯ ರಾಠೋಡ 14 ಮತಗಳನ್ನು ಪಡೆದು ಗೆಲವು ಕಂಡರೇ, ತಮ್ಮ ಸಮೀಪದ ಪ್ರತಿಸ್ಪರ್ಧಿ ಸೈಯದ್ ಮಜರ ಖಾದ್ರಿ ಯವರನ್ನು 12 ಮತಗಳ ಪಡೆದು ಸೋಲನ್ನು ಅನುಭವಿಸಿದರು. ಖಜಾಂಚಿ ಸ್ಥಾನಕ್ಕೆ ಮಂಜುನಾಥ ಹಂದರಾಳ 14 ಮತ ಪಡೆದು ವಿಜಯಶಾಲಿಯಾದರೆ, ಜಗಪ್ಪ ಹೊಸಮನಿ ಯವರು 12 ಮತ ಪಡೆದು ಸೋತು ನಿರಾಶೆಗೊಂಡರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕ ಅಧ್ಯಕ್ಷರಾಗಿ ಶಿವಪುತ್ರ ಕರಣಿಕ, ರಾಜ್ಯ ಪರಿಷತ್ ಸದಸ್ಯರಾಗಿ ಸಂಜಯ ರಾಠೋಡ ಖಜಾಂಚಿಯಾಗಿ ಮಂಜುನಾಥ ಹಂದರಾಳ ್ತ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ರಮೇಶ ಥಳಂಗೆ ಮತ್ತು ಹಾಜಪ್ಪ ಬಿಳಾರ ತಿಳಿಸಿದರು.
ವಿಜಯೋತ್ಸವ ಆಚರಣೆ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷರಾಗಿ ಆಯ್ಕೆಗೊಂಡ ಶಿವಪುತ್ರ ಕರಣಿಕ, ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಆರೋಗ್ಯ ಇಲಾಖೆಯ ಸಂಜಯ ರಾಠೋಡ ಅವರಿಗೆ ಸಂಘದ ನಿರ್ದೇಶಕರು ಹಾಗೂ ಅಭಿಮಾನಿಗಳು ಸನ್ಮಾನಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಿವಲಿಂಗಪ್ಪ ಹೆಬ್ಬಾಳಕರ್, ಬನ್ನಪ್ಪ ಸೈದಾಪೂರ,ದೇವರಾಜ ರಾಠೋಡ, ಹರೀಶ ಕರಣಿಕ್, ಸುಭಾಷ ಸಾಕ್ರೆ, ವೆಂಕಟೇಶ ಚವ್ಹಾಣ, ಹರೀಶ,ರವಿ ರಾಠೋಡ ಇತರರು ಇದ್ದರು.