ಕಲಬುರಗಿ:. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ನೂತನ ಜಿಲ್ಲಾ ಆರ್ ಸಿ ಎಚ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ. .ಸಿದ್ರಾಮಪ್ಪ ಪಾಟೀಲ್ ಅವರನ್ನು ಜಿಲ್ಲಾ ಎನ್ ಹೆಚ್ ಎಂ ಒಳಗುತ್ತಿಗೆ ನೌಕರರ ಸಂಘದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಡಾ. ವಿಶಾಲ್ ಸಜ್ಜನ್, ಗೌರವ ಅಧ್ಯಕ್ಷರಾದ ಡಾ. ಪ್ರಮೋದ ಗುಂಡಗುರ್ತಿ, ಉಪಾಧ್ಯಕ್ಷರಾದ ಡಾ. ಮತೀನ್ ಅಲಿ, ಮಂಜುನಾಥ್ ಕಂಬಾಳಿಮಠ, ಅಬ್ದಲ್ ಜಬ್ಬರ್, ಡಾ. ಶರಣಬಸಪ್ಪ ಸಜ್ಜನ್, ಜ್ಞಾನನಂದ ಪಾಟೀಲ್, ಶಶಿಧರ್, ಹಾಗೂ ಮುಂತಾದವರು ಇದ್ದರು.