ಸುರಪುರ: ದೇಶದಲ್ಲಿ ಇಂದು ನಿತ್ಯವು ದೀನ ದಲಿತರ ಮೇಲೆ ಹಲ್ಲೆಗಳು ಕೊಲೆ ಅತ್ಯಾಚಾರಗಳು ನಡೆಯುತ್ತಿವೆ, ಇವುಗಳನ್ನು ತಡೆಯಲು ದಲಿತರಾದ ನಾವುಗಳು ಸಂಘಟಿತರಾಗದಿರುವುದೆ ಕಾರಣವಾಗಿದೆ.ಆದ್ದರಿಂದ ಇಂದು ನಾವೆಲ್ಲರು ಸಂಘಟಿತರಾಗುವುದು ಅವಶ್ಯವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಜವಳಿ ಮಾತನಾಡಿದರು.
ಸಮಿತಿಗೆ ನೂತನ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆಗಾಗಿ ನಗರದ ಟೈಲರ್ ಮಂಜಿಲನಲ್ಲಿ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ರಾಜ್ಯದಲ್ಲಿ ಎಲ್ಲಿಯೆ ಆಗಲಿ ದೀನ ದಲಿತರ ಮೇಲೆ ಹಲ್ಲೆಗಳು ನಡೆದರೆ ತಕ್ಷಣಕ್ಕೆ ಸ್ಪಂದಿಸುವ ಸಂಘಟನೆಯಾಗಿದೆ ಎಂದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲಕ್ಷ್ಮಣ ಕಟ್ಟಿಮನಿ ಮಾತನಾಡಿ,ದಲಿತ ಸಮುದಾಯ ಸಂವಿಧಾನದಲ್ಲಿ ಹೆಸರಿಸಿರುವ ಅನೇಕ ಸೌಲಭ್ಯಗಳು ದೊರೆಯದೆ ಹಿಂದುಳಿದಿವೆ.ಆದ್ದರಿಂದ ಬಾಬಾ ಸಾಹೇಬರು ಹೇಳಿದಂತೆ ಪ್ರತೊಯೊಬ್ಬರು ಮೊದಲು ಶಿಕ್ಷಣ ಕಲಿತು ನಂತರ ಸಂಘಟನೆ ಹಾಗು ಹೋರಾಟಕ್ಕೆ ಅಣಿಯಾಗಬೇಕೆಂದರು.
ನಂತರ ಸಮಿತಿಯ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಪದಾಧಿಕಾರಿಗಳು ವೀರಭದ್ರ ತಳವಾರಗೇರಾ ತಾಲ್ಲೂಕು ಸಂಚಾಲಕರು,ಶೇಖರ ಬಡಿಗೇರ ಸಂಘಟನಾ ಸಂಚಾಲಕರು,ಗೌತಮ್ ಬಡಿಗೇರ ಸಂಘಟನಾ ಸಂಚಾಲಕರು,ವೆಂಕಟೇಶ ದೇವಾಪುರ ಸಂಘಟನಾ ಸಂಚಾಲಕರು,ಆಕಾಶ ಕಟ್ಟಿಮನಿ ಸಂಘಟನಾ ಸಂಚಾಲಕ,ಖಾಜಾ ಅಜ್ಮೀರ್ ಖಜಾಂಚಿ ಹಾಗು ಎಂ.ಪಟೇಲ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು.
ಸಭೆಯಲ್ಲಿ ಚಂದಪ್ಪ ಮುನಿಯಪ್ಪನವರ್,ಹಣಮಂತಪ್ಪ ರೋಜಾ,ಶಿವಲಿಂಗ ಹಸನಾಪುರ,ಅಂಬ್ರೇಶ ಶೆಳ್ಳಿಗಿ,ಯಲ್ಲಾಲಿಂಗ ಹಸನಾಪುರ,ಮಲ್ಲಿಕಾರ್ಜುನ ಹುರುಸಗುಂಡಿಗಿ,ಬಾಲರಾಜ ಖಾನಾಪುರ,ತಾಯಪ್ಪ ಭಂಡಾರಿ,ಮರೆಪ್ಪ ಕಕ್ಕೇರಿ ಉಪಸ್ಥಿತರಿದ್ದರು.