ವಿಶ್ವ ವಿಕಲಚೇತನರ ದಿನಾಚರಣೆ: ವಿಶೇಚೇತನರಿಗೆ ಅನುಕಂಪ ಬೇಡ ಅವಕಾಶ ಕೊಡಿ: ಅಲ್ಲಮಪ್ರಭು ಪಾಟೀಲ

0
17

 

ಕಲಬುರಗಿ: ಡಿ.3 ವಿಕಲಚೇತನರನ್ನು ಇತರರಂತೆ ಕಾಣಬೇಕು. ಅನುಕಂಪಕ್ಕೆ ಸೀಮಿತವಾಗಿಸದೆ ಅವರಿಗೆ ಅವಕಾಶ ನೀಡಿ ಸಬಲರನ್ನಾಗಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

Contact Your\'s Advertisement; 9902492681

ಮಂಗಳವಾರ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಎಲ್ಲಾ ಸಂಘ/ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಎಂ.ಆರ್.ಡಬ್ಲ್ಯೂ/ಯು.ಆರ್.ಡಬ್ಲ್ಯೂ/ವಿ.ಆರ್.ಡಬ್ಲ್ಯೂರವರ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟಿನಿಂದ ಅಥವಾ ಆಕಸ್ಮಿಕ ಘಟನೆಯಿಂದ ಅಂಗವಿಕಲರಾದರು ಜೀವನದ ಉತ್ಸಾಹ ಬಿಡದೆ ಅನೇಕ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿರುವ ವಿಶೇಷಚೇತನರೇ ನಮಗೆಲ್ಲ ಸ್ಪೂರ್ತಿದಾಯಕರಾಗಿದ್ದಾರೆ. ಯಾವುದೇ ಕಾರಣಕ್ಕೂ ಅಂಗವಿಕಲ ನೆಪದಿಂದ ಅವರ ಆತ್ಮ ವಿಶ್ವಾಸ ಕುಂದಿಸುವ ಕೆಲಸ ಯಾರು ಮಾಡಬಾರದೆಂದರು.

ಬಿದಿರು ಕಟ್ಟಿಗೆ ಯಾವ ಕೆಲಸಕ್ಕೂ ಬರೋದಿಲ್ಲ ಎಂದು ಮನಸೋತು ಕುಳಿತಿತ್ತು. ಮುಂದೆ ಅದು ಕೃಷ್ಣನ ಕೈಯಲ್ಲಿ ಕೊಳಲಾಗಿ, ಮಕ್ಕಳ ತೊಟ್ಟಿಲಾಗಿ ಹಾಗೂ ಮುತ್ತೈದೆ ಮಹಿಳೆಯರಿಗೆ ಬಾಗಿನ ಕೊಡಲು ಬಳಸುವ ಮರವಾಯಿತು ಎಂದು ಹೇಳಿದ ಶಾಸಕರು, ಮನುಷ್ಯ ಯಾವಾಗಲ್ಲೂ ಪ್ರಯೋಜನಕಾರಿ ಆಗಿದ್ದಾನೆ. ಹೀಗಾಗಿ ವಿಶೇಷ ಚೇತನರು ಜೀವನದಲ್ಲಿ ಜಿಗುಪ್ಸೆ ಮಾಡಿಕೊಳ್ಳದೆ ಆತ್ಮವಿಶ್ವಾದಿಂದ ಜೀವನ ನಡೆಸಬೇಕೆಂದು ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

ಅಮಗವಿಕಲತೆ ನಡುವೆಯೂ ಕೆ.ಎಸ್. ರಾಜಣ್ಣ ಅವರು ಬಂಗಾರದ ಪದಕದ ವಿಜೇತರಾಗಿ ಹೊರಹೊಮ್ಮಿದರು. ಹೀರಾ ಸಿಂಗಲ್ ಐ.ಎ.ಎಸ್. ಫಸ್ಟ್ ರ‍್ಯಾಂಕ್ ಪಡೆದರು. ಒಂದು ಕೈ ಇರದಿದ್ದರು ಶರತ್ ಗಾಯಕವಾಡ ಇವರು ಈಜು ಸ್ಪರ್ಧೆಯಲ್ಲಿ ತಮ್ಮದೆಯಾದ ಛಾಪು ಮೂಡಿಸಿದವರು. ಇನ್ನು ಪುಟ್ಟರಾಜ ಗವಾಯಿಗಳ ಸಾಧನೆ ಹೇಳತೀರದಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಶಾಸಕ ಡಾ. ಸಾಬಣ್ಣಾ ತಳವಾರ ಮಾತನಾಡಿ, ಜಿಲ್ಲೆಯಲ್ಲಿ 60 ಸಾವಿರ ಜನರು ವಿಕಲಚೇತರಿದ್ದಾರೆ. ಅವರಿಗಾಗಿಯೇ ಅನೇಕ ಯೋಜನೆಗಳಿವೆ. ವಿಶೇಷವಾಗಿ ಶೇ.5 ಅನುದಾನ ನಿಮ್ಮ ಕಲ್ಯಾಣಕ್ಕೆ ಮೀಸಲಿದೆ. ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಲಾಗಿದೆ. ಇದನ್ನು ನೀವು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಶೇಷ‌ಚೇತನರಿಗೆ ಕರೆ ನೀಡಿದ ಅವರು, ಸಮಾಜ ಇವರನ್ನು ನೋಡುವ ದೃಷ್ಟಿ ಬದಲಾಯಿಸಬೇಕಿದೆ. ಅಯ್ಯೋ ಪಾಪ ಎನ್ನುವುದನ್ನು ಬಿಟ್ಟು ಸಮನಾಗಿ ಕಾಣಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್. ಜಿಲ್ಲಾ ಅ‌ಂಗವಿಕಲ‌ರ ಕಲ್ಯಾಣಾದಿಕಾರಿ ಸಾದಿಕ್ ಹುಸೇನ್, ಹೈದ್ರಾಬಾದ ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ದತ್ತು ಅಗರವಾಲ, ದಕ್ಷೀಣ ಭಾರತ ದಲಿತ ಎಜುಕೇಷನ್ ಸೋಸೈಟಿ ಅಧ್ಯಕ್ಷ ರಾಜೇಶ್ ಶಿವಶರಣ್ಣಪ್ಪ, ವಿನಾಯಕ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಶ್ರೀಮಂತ ರೇವೂರ, ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅನಂತರಾಜ, ದಿ. ಅಸೋಸಿಯೆಷನ್ ಆಫ್ ಪೀಪಲ್ ವಿತ್ ಡಿಸ್ಸೇಬಿಲಿಟಿ (ಎ.ಪಿ.ಡಿ) ಅಧ್ಯಕ್ಷ ಶಿವಶಂಕರ, ಲುಂಬಿಣಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಗುರುನಂದೇಶ ಕೊಣಿ, ಸೇವಾ ಸಂಗಮ ಸಂಸ್ಥೆ ಅಧ್ಯಕ್ಷ ದೀಪಕ, ಶ್ರೀಯಾಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜು ಶಾಕಾಪೂರ, ಕರ್ನಾಟಕ ರಾಜ್ಯ ಅಂಗವಿಕಲರ ಆರ್.ಪಿ.ಡಿ ಟಾಸ್ಕ್ ಫೋರ್ಸ್ ಸಂಸ್ಥೆಯ ಗಾಯತ್ರಿ ಸುತಾರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here