ಯಡ್ರಾಮಿ: ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

0
316

ಯಡ್ರಾಮಿ: ಕಾಟಾಚಾರಕ್ಕಾಗಿ ಯಡ್ರಾಮಿಯನ್ನು ನೂತನ ತಾಲೂಕ ಎಂದು ಘೋಷಣೆ ಮಾಡಿˌ ಮೂಲಭೂತ ಸೌಕರ್ಯ ಒದಗಿಸದ ರಾಜ್ಶ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ) ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸರ್ಧಾರ್ ಶರಣಗೌಡ ವ್ರತ್ತದಿಂದ ಡಾ.ಅಂಬೇಡ್ಕರ್ ವ್ರತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರಕಾರದ ವಿರುದ್ಧ ಘೋಷಣಿ ಕೂಗಿದರು. ತಾಲೂಕಿನಲ್ಲಿ ಎಲ್ಲ ಕಚೇರಿಗಳ ಸ್ಥಾಪನೆ. ಖಜಾನೆ ಕಾರ್ಯಾಲಯˌ ಪಟ್ಟಣ ಪಂಚಾಯಿತಿ ಘೋಷಣಿˌ ಕಡಕೋಳ ಮಡಿವಾಳೇಶ್ವರ ಅಧ್ಶಯನ ಪೀಠ ಸ್ಥಾಪನೆˌ ಒಳಚರಂಡಿˌ ವ್ರತ್ತ ನಿರೀಕ್ಷಕರ ಕಾರ್ಯಾಲಯˌ ಬಸ್ ಘಟಕˌ ಮಳ್ಳಿ ಸಕ್ಕರೆ ಕಾರ್ಖಾನೆಯ ಬಾಕಿ ಬಿಲ್ ಪಾವತಿˌ ಉತ್ತಮ ರಸ್ತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಸರಕಾರಕ್ಕೆ ಒತ್ತಾಯಿಸಿದರು.

Contact Your\'s Advertisement; 9902492681

ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರವೇ ವಿಭಾಗೀಯ ಅಧ್ಶಕ್ಷ ಶರಣು ಬಿ ಗದ್ದಗಿˌ ವಿಜಯಕುಮಾರ ಕೇದಾರಲಿಂಗಯ್ಯ ಹಿರೇಮಠˌ ತಾಲೂಕ ಉಸ್ತುವಾರಿ ವಿಶ್ವನಾಥ ಜಿ ಪಾಟೀಲˌ ಸಾಹೇಬಗೌಡ ದೇಸಾಯಿ ಹಂಗರಗಾˌ ಅಫ್ರೋಜ ಯಡ್ರಾಮಿˌ ಪ್ರಕಾಶ ಕಿರಣಗಿˌ ಸಂತೋಷ್ ಪಾಟೀಲ, ರೈತ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಈರಣ್ಣ ಭಜಂತ್ರಿ, ಅಲ್ಲಾ ಪಟೇಲ ಇಜೇರಿ, ರಾಜಶೇಖರ ಬಂಟನೂರ, ಪ್ರಕಾಶ ಪಾಟೀಲ ಅರಳಗುಂಡಗಿ, ಶಫೀಹುಲ್ಲಾ ದಖನಿ, ಲಾಳೇಸಾ ಮನಿಯಾರ, ದೇವಾನಂದ್ ಗುತ್ತೆದಾರ, ಅನಿಲ್ ಗುತ್ತೆದಾರ, ಎಂ ಆರ್ ಸೌದಗರ್ವಿ, ವಿನೋದ ರಾಠೋಡˌ ಸಂತೋಷ ಪವಾರ್ˌ ರೀಯಾಜ್ ಇಜೇರಿˌ ಮಡಿವಾಳ ದೊರೆˌ ಪ್ರಮೋದ್ ನಿಲೂರˌ ನಿಖಿಲ್ˌ ಮೈಬೂಬ ಇಜೇರಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here