2025ರ ಕೆಬಿಎನ್ ಪ್ರೀಮಿಯರ ಲೀಗ T20 ಜನೆವರಿ 21 ರಿಂದ ಆರಂಭ

0
16

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿನ ಕ್ರೀಡಾಪಟುಗಳಿಗೆ ಒಳ್ಳೆಯ ಅವಕಾಶ ನೀಡುವ ಸಲುವಾಗಿ ಕೆಬಿಎನ್ ಪ್ರಿಮಿಯರ್ ಲೀಗ್ ಆರಂಭಿಸಲಾಗಿದ್ದು ಪ್ರಸಕ್ತ ವರ್ಷದ ಪಂದ್ಯಾವಳಿ ಸಂಗತ್ರಾಸವಾಡಿಯ ಕೆಬಿಎನ್ ಟರ್ಫ್ ಮೈದಾನದಲ್ಲಿ ಹಗಲು ರಾತ್ರಿ ಪಂದ್ಯಗಳು ಜನವರಿ 21 ರಿಂದ ಫೆಬ್ರವರಿ 9 ರವರೆಗೆ ನಡೆಯಲಿದೆ.

ಈ ಪಂದ್ಯಾವಳಿಯ ಕ್ರಿಡಾಪಟುಗಳ ಆಯ್ಕೆ ಜನವರಿ 10ರಂದು ನಡೆದಿದ್ದು 6 ತಂಡಗಳು ತಮ್ಮ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ.ಆರ್ ಕೆ ಮಡಕಿˌ ಐವಾನ ಈ ಶಾಹಿˌ ರಾಯಲ್ಸ್, ಗಂಗಾವತಿ ಲಯನ್ಸ್, ಎಂ ಈ ಎಂˌ ಸ್ಟೇಷನ್ ಈಗಲ್ಸ್, ಎಂ ಎಸ್ ಬಿˌ ರೌಜಾ ಸ್ಟಾರ್ಸ್ˌ ಮೊಮೀನ್ ಪುರ ಮಾಸ್ಟರ್ಸ್, ಮಾಮೂಪುರಿ ಮಾರ್ಕೆಟ್ ಸೂಪರ್ ಕಿಂಗ್ಸ್ ತಂಡಗಳು ಭಾಗವಹಿಸಲಿವೆ.

Contact Your\'s Advertisement; 9902492681

ಚಾಂಪಿಯನಶಿಪಗಾಗಿ 6 ತಂಡಗಳ ನಡುವೆ 30 ಲೀಗ್ ಪಂದ್ಯಗಳು, 3 ಪ್ಲೆ ಆಫ್ ಮತ್ತು 1 ಫೈನಲ್ ಒಟ್ಟು 34 ಪಂದ್ಯಗಳು ನಡೆಯಲಿವೆ. ವಿಜೇತರಿಗೆ ಬಹುಮಾನ ಮತ್ತು ವೈಯಕ್ತಿಕ ಅತ್ಯಾಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಅಲ್ಲದೇ ಪ್ರೇಕ್ಷಕರ ಮನೋರಂಜನೆಗಾಗಿ ಪತ್ರಿಕೋದ್ಯಮ ವಿಭಾಗದಿಂದ ಪ್ರಕಟವಾಗುವ ಕೆಬಿಎನ್ ನ್ಯೂಸ್ ಲೇಟರ್ ನಲ್ಲಿ ಪಂದ್ಯಾವಳಿಯ ಪ್ರತಿ ಮ್ಯಾಚ್ ಬಗ್ಗೆ ಮಾಹಿತಿ ಹಾಗೂ ರಸಪ್ರಶ್ನೆಗಳನ್ನು ಆಯೋಜಿಸಲಾಗುತ್ತದೆ.
www.youtube.com/kbnhouseofsports/live ಲಿಂಕ ಬಳಸಿ ಎಲ್ಲ ಮ್ಯಾಚಗಳ ನೇರ ಪ್ರಸಾರ ವೀಕ್ಷಿಸಬಹುದು.

ಸೌಲಭ್ಯಗಳು: ಪ್ರತಿ ಮ್ಯಾಚ್ ನ ನೇರ ಪ್ರಸಾರ, ಮೈದಾನದಲ್ಲಿ ಎಲ್ ಈ ಡಿ ಸ್ಕ್ರೀನ್, ರಿಪ್ಲೇಸ್, ಥರ್ಡ್ ಅಂಪೈರ್ ಸೌಲಭ್ಯ, ಮರುಪಂದ್ಯಗಳು, ರನ್ನಿಂಗ್ ಕಾಮೆಂಟರಿ, DSR ( Decision Review System) ಈ ಪಂದ್ಯಾವಳಿಯಲ್ಲಿ ಅಳವಡಿಸಲಾಗುವುದು.

ತಂಡಗಳ ಮಾಲೀಕರು :
1) ರೌಜಾ ಸ್ಟಾರ್ಸ್: ಮೆಗಾ ಸ್ಪೀಡ್ ಬ್ರಾಡ್‌ಬ್ಯಾಂಡ,
ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಸಾಹೇಬ್ ಮತ್ತು ಡಾ ಮುಸ್ತಫಾ ಅಲ್ ಹುಸೇನಿ

2) ಐವೆನ್ ಇ ಶಾಹಿ ರಾಯಲ್ಸ್: ಮುದಭಿರ್ ಖಾನ್ ಮತ್ತು ಜೀಲಾನಿ.

3) ಸ್ಟೇಷನ್ ಈಗಲ್ಸ್:ಡಾ ಮುಜೀಬ್, ಡಾ ಅರ್ಷದ್, ಝಕಾ ಮತ್ತು ಇಂತೇಜಾರ FTC

4) ಮಾರ್ಕೆಟ ಸೂಪರ್ ಕಿಂಗ್ಸ್ : ಆಸಿಫ್ ಮತ್ತು ಡಾ ಖುಸ್ರೋ ಅನ್ಸಾರಿ

5) ಗಂಗಾವತಿ ಲಯನ್ಸ್: ಅಲಿ ಖಾನ್ ಮತ್ತು ಎಂಕೆ ಎಚ್ ಎಚ ಜೀಲಾನಿ

6) ಮೋಮಿನ್‌ಪುರ ಮಾಸ್ಟರ್ಸ್: ಎಂಜೆಸಿಸಿ ಗುಂಪು ಮತ್ತು
ಸೌರಭ್ ಭೀಮನ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here