ಯಾದಗಿರಿ: ಇಲ್ಲಿನ ನಗರಸಭೆ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಜಾಹಿದ್ ಪಟೇಲ್ ಅವರನ್ನು ಪೌರಾಡಳಿತ ಸಚಿವ ರಹಿಮ್ ಖಾನ್ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸನ್ಮಾನಿಸಿದ್ದರು.
ಸೋಮವಾರ ಕ್ಲಾಸ್ 1 ಗುತ್ತಿಗೆದಾರಾಗಿ ನೂತನ ನಗರಸಭೆಯ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿ ಮತ್ತು ನಗರಸಭೆ ವತಿಯಿಂದ ಮುಜಾಹಿದ್ ಪಟೇಲ್ ಮತ್ತು ಹಣಮಂತ ರೆಡ್ಡಿ ಮುದ್ನಾಳ ಅವರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಲೀತಾ ಅನಪುರ, ಉಪಾಧ್ಯಕ್ಷೆರಾದ ರುಕಿಯಾ ಬೇಗಂ, ಸಹಾಯಕ ಕಾರ್ಯಾಪಾಲಕ ಅಭಿಯಂತಕ ಉಮೇಶ್, ಜಿಲ್ಲಾ ನಗರಾಭಿವೃದ್ಧಿ ಯೋಜನೆಯ ನಿರ್ದೇಶಕ ಲಕ್ಷ್ಮೀಕಾಂತ ಸೇರಿದಂತೆ ನಗರಸಭೆಯ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.