ಶಿಕ್ಷಕರೇ ನಿಜವಾದ ಶಿಲ್ಪಿ: ಪಾಂಡವಪುರ ಅಭಿಮತ

0
72

ಕಲಬುರಗಿ: ವಿದ್ಯಾರ್ಥಿಗಳನ್ನು ತಮ್ಮಲ್ಲಿರುವ ಅದ್ಭುತವಾದ ಜ್ಞಾನದ ಮೂಲಕ ಉತ್ತಮ ಪ್ರಜೇಗಳನ್ನಾಗಿ ನಿರ್ಮಾಣ ಮಾಡುವ ಶಿಕ್ಷಕನೆ ನಿಜವಾದ ಶಿಲ್ಪಿ ಎಂದು ಚಲನಚಿತ್ರರಂಗದ ನಿರ್ದೇಶಕ-ಸಾಹಿತಿ ಮಂಜುನಾಥ ಪಾಂಡವಪುರ ಅಭಿಪ್ರಾಯಪಟ್ಟರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ನಗರದ ಆರಾಧನಾ ಪದವಿಪೂರ್ವ ಕಾಲೇಜಿನಲ್ಲಿಂದು ಏರ್ಪಡಿಸಿದ್ದ ಸಿರಿನುಡಿ ಸಂಭ್ರಮ-2019 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಕಟ್ಟುವ ಕಾರ್ಯದಲ್ಲಿ ಇಂದಿನ ವಿದ್ಯಾರ್ಥಿಗಳು ಮುಂದಾಗಬೇಕೆಂದು ಸಲಹೆ ನೀಡಿದರು.

Contact Your\'s Advertisement; 9902492681

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಈ ಭಾಗದ ಗಡಿಭಾಗದಲ್ಲಿ ಕನ್ನಡ ಜಾಗೃತಿ ಸಮ್ಮೇಳನಗಳನ್ನು ಹಮ್ಮಿಕೊಂಡು, ಕನ್ನಡ ಭಾಷೆಯ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದ ಅವರು, ಬೆಂಗಳೂರಿಗೆ ಸೀಮಿತವಾಗಿರುವ ಕಾರ್ಯಕ್ರಮಗಳನ್ನು ಕಲಬುರಗಿ ಗಡಿನೆಲಕ್ಕೆ ತರುತ್ತೇನೆಂದು ಮಾರ್ಮಿಕವಾಗಿ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಕನ್ನಡವೇ ನಮ್ಮ ಉಸಿರು, ಕನ್ನಡವೇ ನಮ್ಮ ಬದುಕು ಎಂಬ ಅಭಿಮಾನವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಅನ್ಯ ಭಾಷಿಕರು ಕನ್ನಡವನ್ನು ಕಲಿತು ಕನ್ನಡದ ವಾತಾವರಣದಲ್ಲಿ ಸುಲಭವಾಗಿ ಸಮ್ಮಿಲನಗೊಳ್ಳುವಂತೆ ಉತ್ತೇಜಿಸುವುದರೊಂದಿಗೆ ಕನ್ನಡದ ವಾತಾವರಣವನ್ನು ಶಾಶ್ವತವಾಗಿ ನೆಲೆಗೊಳ್ಳುವಂತೆ ಮಾಡಬೇಕಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಚೇತನಕುಮಾರ ಗಾಂಗಾಜೀ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಹಣಮಂತರಾಯ ಅಟ್ಟೂರ, ಕಥೆಗಾರತಿ ಜ್ಯೋತಿ ಕುಲಕರ್ಣಿ, ಪ್ರಮುಖರಾದ ಶಿವರಾಜ ಅಂಡಗಿ, ಪರಮೇಶ್ವರ ಶಟಕಾರ, ಸವಿತಾ ಪಾಟೀಲ, ಜಗದೇವಿ ಚೆಟ್ಟಿ, ಅಂಬಿಕಾ ದುರ್ಗಿ, ರವೀಂದ್ರಕುಮಾರ ಭಂಟನಳ್ಳಿ, ಪ್ರಭುದೇವ ಯಳವಂತಗಿ, ಬಸವರಾಜ ಹೀರಾಪುರ, ಶಿವಾನಂದ ಮಠಪತಿ ಇತರರಿದ್ದರು.

ಸಾಮಾಜಿಕ ಸೇವೆಯ ಜೊತೆಗೆ ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಾಗರಾಜ ಜಮದರಖಾನಿ, ಮಹ್ಮದ್ ಅಯಾಜುದ್ದೀನ್, ನರಸಿಂಹ ಮೆಂಡನ್, ಆರ್.ಜೆ.ವಾಣಿ, ಶ್ರವಣಕುಮಾರ ಮಠ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here