ಸುರಪುರ ತಾಲ್ಲೂಕಿನ ವಿವಿಧೆಡೆ 64ನೇ ಕನ್ನಡ ರಾಜ್ಯೋತ್ಸವ ಆಚರಣೆ

0
72

ಸುರಪುರ: ನಗರದ ತಹಸೀಲ್ ರಸ್ತೆಯಲ್ಲಿರುವ ಕನ್ನಡ ಧ್ವಜಾಸ್ತಂಬದ ಬಳಿಯಲ್ಲಿ ನಾಡದೇವಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡುವ ಮೂಲಕ ಜಯಕರ್ನಾಟಕ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಸಂಘಟನೆ ತಾಲೂಕಾಧ್ಯಕ್ಷ ರವಿ ನಾಯಕ ಧ್ವಜಾರೋಹಣ ಮಾಡಿ ಮಾತನಾಡಿದರು,ಮುಖ್ಯ ಅತಿಥಿಗಳಾಗಿ ಮುಖಂಡ ಬಲಭೀಮ ನಾಯಕ ಬೈರಿಮಡ್ಡಿ,ನಗರಘಟಕದ ಅಧ್ಯಕ್ಷ ಮಲ್ಲಪ್ಪ ಕಬಡಗೇರಾ,ಶರಣಪ್ಪ,ರಾಮಕೃಷ್ಣ ಕಬಾಡಗೇರಾ,ಬಸವರಾಜ ಪಾಟೀಲ,ದೇವು ನಾಯಕ,ಮಾಳಪ್ಪ ಬನ್ನೆಟ್ಟಿ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಕರ್ನಾಟಕ ನವ ನಿರ್ಮಾಣ ವೇದಿಕೆ: ನಗರದ ಹಸನಾಪುರ ಕ್ರಾಸಲ್ಲಿರುವ ಸಂಘಟನೆ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷ ಶಿವರಾಜ ಕಲಿಕೇರಿ ನಾಡದೇವಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.ಪ್ರಕಾಶ ಅಂಗಡಿಯನ್ನು ಸನ್ಮಾನಿಸಲಾಯಿತು.ವೇದಿಕೆಯ ವಿಭಾಗಿಯ ಕಾರ್ಯದರ್ಶಿ ಆಕಾಶ ಕಟ್ಟಿಮನಿ,ವಾಸು ನಾಯಕ,ನಾಗಭೂಷಣ ಯಾಳಗಿ,ತಾಲೂಕು ಅಧ್ಯಕ್ಷ ದೇವು ನಾಯಕ,ಮಲ್ಲಿಕಾರ್ಜುನ ಸುಬೇದಾರ,ಆನಂದ ನಾಯಕ,ಮಧುಸೂದನ್ ಕಟ್ಟಿಮನಿ,ಭಾಗೇಶ ಕಾಳಗಿ,ಆನಂದ ಮಡ್ಡಿ,ಸಚಿನ,ಮಾದೇಶ ಇದ್ದರು.

ಬಸವೇಶ್ವರ ಕಾಲೇಜು: ನಗರದ ರಂಗಂಪೇಟೆಯಲ್ಲಿರುವ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ೬೪ನೇ ಕನ್ನಡ ರಾಜ್ಯೋತ್ಸವ ಆಅಚರಿಸಲಾಯಿತು.ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಅಂಗಡಿ ನಾಡದೇವಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.ಮುಖಂಡ ಶಿವಶರಣಪ್ಪ ಹೆಡಗಿನಾಳ,ಕಾಲೇಜಿನ ಪ್ರಾಂಶುಪಾಲ ವಿರೇಶ ಹಳಿಮನಿ,ಕಾಂತು ನಾಯಕ,ಬಲಭೀಮ ಪಾಟೀಲ,ಭಾರತಿ ಪೂಜಾರಿ,ಬಿರೇಶ ಕುಮಾರ,ಸಂತೋಷ ಬಿಶೆಟ್ಟಿ ಇತರರಿದ್ದರು.

ಸರಕಾರಿ ಪ್ರಾಥಮಿಕ ಶಾಲೆ ವೆಂಕಟಾಪುರ: ತಾಲ್ಲೂಕಿನ ವೆಂಕಟಾಪುರದಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಜ್ಯೋತ್ಸವ ಆಚರಿಸಲಾಯಿತು.ಎಪಿಎಫ್ ನ ಅನ್ವರ ಜಮಾದಾರ ಕಾರ್ಯಕ್ರಮದ ಕುರಿತು ಮಾತನಾಡಿದರು. ಮುಖ್ಯಗುರು ರಾಜಶೇಖರ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಸಂಗಮ್ಮ ಹಿರೇಮಠ, ಸಿದ್ದಣ್ಣ, ಶಿಕ್ಷಕಿಯರಾದ ನಳಿನಿ,ಶಿವಕುಮಾರ ಸಜ್ಜನ ಇತರರಿದ್ದರು.

ಸರಕಾರಿ ಪ.ಪೂ ಕಾಲೇಜು: ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೬೪ನೇ ರಾಜ್ಯೋತ್ಸವ ಆಚರಿಸಲಾಯಿತು.ಪ್ರಾಂಶುಪಾಲ ಸುವರ್ಣ ಅರ್ಜುಣಗಿ ಧ್ವಜಾರೋಹಣ ನೆರವೇರಿಸಿದರು.ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ ಉಪನ್ಯಾಸ ನೀಡಿದರು.ದೇವು ಹೆಬ್ಬಾಳ,ಶಿಕ್ಷಕರಾದ ಲಕ್ಷ್ಮಣ ಬಿರಾದಾರ, ವಸಂತಕುಮಾರ, ಜೈರಾಮ್, ಶಾರದ,ಸಂಗಮ್ಮ ನಾಗಾವಿ,ಲಕ್ಷ್ಮಣ ಬಿರಾದಾರ ಇದ್ದರು.

ಎಲೆಕ್ಟ್ರೀಕಲ್ ಕಾರ್ಮಿಕರ ಸಂಘ: ನಗರದ ಗಾಂಧಿ ವೃತ್ತದ ಬಳಿಯಿರುವ ಸಗರನಾಡು ಎಲೆಕ್ಟ್ರೀಕಲ್ ಕಾರ್ಮಿಕರ ಸಂಘದ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ಅಧ್ಯಕ್ಷ ಅಬ್ದುಲ್ ರೌಫ್,ಖಂಡೆಪ್ಪ ಪೂಜಾರಿ,ಅಬೀದ್ ಹುಸೇನ್,ಅಮ್ಜಾದ್ ಹುಸೇನ,ತಿಪ್ಪಣ್ಣ ಮಡಿವಾಳ,ಅಲ್ಲಾವುದ್ದೀನ್,ವಿಷ್ಣು ಟೋಣಪೆ,ಬಂದೇನವಾಜ್,ಶಾಕೀರ್,ಖಾಜಾ ಹುಸೇನ್,ಮಹಿಬೂಬ ಹಸನ್ ಇತರರಿದ್ದರು.

ಜಾನಕಿದೇವಿ ಶಾಲೆ: ನಗರದ ಶ್ರೀಮತಿ ರಾಣಿ ಜಾನಕಿದೇವಿ ಪ್ರೌಢ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ಮುಖ್ಯಗುರು ಹನುಮಂತರಾಯ ದೊರೆ ಧ್ವಜಾರೋಹಣ ನೆರವೇರಿಸಿದರು. ಜಿ.ಸಂಪತಕುಮಾರ, ಶಂಕರ ಮುರಾಳ, ಅಲಕನಂದಾ,ನಾಗೇಶ ಗೌಳಿ,ಈಶ್ವರ,ಹಸೀನಾ,ಶಕೀರಾ,ಮಮತಾ,ನಸರೀನ್,ಶ್ರೀಕರ ಐ.ಜಿ,ಮಲ್ಲಿಕಾರ್ಜುನ ,ಸಂತೋಷ ಕುಲಕರ್ಣಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here