ಕಲಬುರಗಿ: ಹೈ.ಕ ಭಾಗದ ಪ್ರಮುಖ ಹೋರಾಟಗಾರರಲ್ಲಿ ಹಿರಿಯ ಹೋರಾಟಗಾರರಾದ ವೈಜನಾಥ್ ಪಾಟೀಲ ಶಾಸಕ, ವಿಧಾನಪರಿಷತ್ ಸದಸ್ಯ ಮತ್ತು ಸಚಿವರಾಗಿ ತಮ್ಮ ಜೀವನ ಊದ್ದಕ್ಕೂ ಹೋರಾಟಗಳನ್ನು ನಡೆಸುವ ಮೂಲಕ ಹೈ.ಕ ಭಾಗದ ಜನರ ಮನಸ್ಸನ್ನು ಆಳಿದ ಹೋರಾಟಗಾರರ.
29 ಜುಲೈ 1938 ಜನಿಸಿದ ಪಾಟೀಲ ಚಿಂಚೋಳಿ ತಾಲ್ಲೂಕಿನಲ್ಲಿ ಜನಿಸಿದರು.1964ರಲ್ಲಿ ಬೀದರ್ ಜಿಲ್ಲೆಯ ಆಲಮಾ ಪದವಿ ಕಾಲೇಜಿನಿಂದ ಬಿವಿಬಿ ಪದವಿ ಪಡೆದು, 1968ರಲ್ಲಿ ಎಸ್.ಎಸ್.ಲಾ ಕಾಲೇಜಿನಿಂದ ಕಾನೂನು ಪದವಿ ಪಡೆದರು.
ವಿದ್ಯಾಭ್ಯಾಸದ ನಂತರ ವಿವಿಧ ಹೋರಾಟಗಳಲ್ಲಿ ಗುರುತಿಸಿಕೊಂಡ ಅವರು 1984ರಲ್ಲಿ ಪ್ರಥಮ ಬಾರಿ ವಿಧನ ಪರಿಷತ್ ಸದಸ್ಯರಾಗಿ ಆಯ್ಕೆ ಯಾದರು.
1994 ಹಾಗೂ 2004ರಲ್ಲಿ ಎರಡು ಬಾರಿ ಚಿಂಚೋಳಿ ಮತ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಹೈ,ಕ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371(ಜೆ) ಹೋರಾಟವನ್ನು ಗಟ್ಟಿಯಾಗಿ ಕಟ್ಟಿ ಕಟ್ಟಿದರು.