ನಿರ್ಭೆಡೆ ಮತ್ತು ನಿಷ್ಠುರ ರಾಜಕಾರಣಿ ವೈಜನಾಥ ಪಾಟೀಲ ಅವರ ಸಂದರ್ಶನದ ನೆನಪು

0
134

ಶಾಸನ ಸಭೆಯಲ್ಲಿ ದಾಖಲೆಗಳಿಲ್ಲದೆ ಸುಳ್ಳು ಆರೋಪ ಮಾಡುವ ಶಾಸಕರಿಗೆ ಶಿಕ್ಷೆ ವಿಧಿಸುವ ಮಸೂದೆಯನ್ನು ತರಲು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮುಂದಾದಾಗ ಸಿಡಿದೆದ್ದ ಶಾಸಕರಲ್ಲಿ ಅಗ್ರಗಣ್ಯ ನಾಯಕರು ವೈಜನಾಥ ಪಾಟೀಲರು. ಹೆಗಡೆಯವರ ಕ್ರಮವನ್ನು ಖಂಡಿಸುವುದರ ಜೊತೆಗೆ ಇಂಥ ಮಸೂದೆಯನ್ನು ಒಪ್ಪಿಕೊಳ್ಳಲು “ಶಾಸಕರುಗಳೇನು ಕುರಿಗಳಾ?” ಎಂದು ಖಾರವಾಗಿ ಪ್ರಶ್ನಿಸಿ ಅವರಿಗೆ ಕಠುವಾಗಿ ಪತ್ರ ಬರೆದವರು.

ಪಾಟೀಲರು ಆ ಸಮಯದಲ್ಲಿ ಅವರು “ಮಾರ್ಧನಿ” ಎನ್ನುವ ಪತ್ರಿಕೆಗೆ ನೀಡಿದ ಸಂದರ್ಶನವನ್ನು ಅವಲೋಕಿಸಿದಾಗ ಅವರು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಶಾಸಕರುಗಳ ಹಕ್ಕುಭಾಧ್ಯತೆಗಳನ್ನು, ಪತ್ರಿಕಾರಂಗದ ಸ್ವಾತಂತ್ರವನ್ನು ಮತ್ತು ಲೋಕಾಯುಕ್ತ ಸಂಸ್ಥೆಯನ್ನು ದುರ್ಭಲಗೊಳಿಸುವ ಪ್ರಯತ್ನದ ವಿರುದ್ಧ ಸಿಡಿದೇಳುವುದರ ಜೊತೆಗೆ ಭ್ರಷ್ಟಚಾರ, ವಚನಭ್ರಷ್ಟತೆ, ಮುಂತಾದ ವಿಷಯಗಳ ಬಗ್ಗೆ ಯಾವ ನಿಲುವನ್ನು ತಳೆದಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ:

Contact Your\'s Advertisement; 9902492681

ಪ್ರ: ಹೆಗಡೆಯವರು ಶಾಸಕರಿಗೆ ಶಿಕ್ಷೆ ವಿಧಿಸುವ ಮಸೂದೆಯನ್ನು ತರುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ?

ಪಾಟೀಲ: ಈ ಸರ್ಕಾರಕ್ಕೆ ಯಾರು ಇಂಥ ಮೂರ್ಖ ಸಲಹೆಗಳನ್ನು ಕೊಡುತಿದ್ದಾರೆಯೋ ಎಂಬುದು ಇನ್ನೂ ನಿಗೂಢವಾಗಿದೆ. ಪ್ರಪಂಚ್ ಯಾವ ಪ್ರಜಾ ಪ್ರಭುತ್ವ ರಾಷ್ಟ್ರದಲ್ಲೂ ಇಂಥ ಬರ್ಭರ ಕಾನೂನು ಬಂದಿಲ್ಲ. ಶಾಸಕರ ಅಧಿಕಾರವನ್ನು ಸಂಪೂರ್ಣವಾಗಿ ಕಸಿದುಕೊಳ್ಳುವ  ಜೋಭದ್ರ ತಂತ್ರ ಇದು.

ಪ್ರ: ನಿಮ್ಮ ಪಕ್ಷದ ಶಾಸಕರು ಇದರ ಬಗ್ಗೆ ಏನು ಹೇಳುತ್ತಾರೆ?

ಪಾಟೀಲ: ಅಯ್ಯೋ ಈ ವಿಷಯ ವಿಧಾನ ಸಭೆಯಲ್ಲಿ ಮಂಡನೆಯಾಗುತ್ತದೆ ಅನ್ನೋದೆ ನಮ್ಮ ಶಾಸಕರಿಗೆ ಗೊತ್ತಿಲ್ಲ. ಈ ಹೆಗಡೆಯವರಿಗೆ ನಮ್ಮ ಶಾಸಕರ ಬಗ್ಗೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಕನಿಷ್ಠ ಗೌರವ ಇದ್ದದ್ದೇ ಆದರೆ ಕಡೇ ಪಕ್ಷ ಶಾಸನ ಸಭೆಯಲ್ಲಾದರೂ ಇಟ್ಟು ಚರ್ಚೆಗೆ ಬಿಡಬಹುದಾಗಿತ್ತು. ನಮ್ಮನ್ನೆಲ್ಲ ಲೆಕ್ಕಕ್ಕೆ ಇಟ್ಟುಕೊಳ್ಳದೆ ಇಷಟೋದು ಬೇಕಾಬಿಟ್ಟಿ ವರ್ತಿಸಿದ್ದು ನಿಜಕ್ಕೂ ನೋವು ತಂದಿದೆ.

ಪ್ರ: ಅದರಷ್ಟೆ ಮುಖ್ಯವಾಗಿ ನಿಮ್ಮ ಪಕ್ಷದ ಅಧ್ಯಕ್ಷ ಪ್ರಕಾಶ ಇದಕ್ಕೆ ಒಪ್ಪಿಗೆ ನೀಡಿದ್ದಾರೆಯೆ?

ಪಾಟೀಲ: ಪಕ್ಷದ ಶಾಸಕರ ಮುಂದೆಯೇ ಈ ವಿದೇಯಕ ಚರ್ಚೆಗೆ ಸಾಧ್ಯವಾಗದಿದ್ದಾಗ, ಇನ್ನು ಅಧ್ಯಕ್ಷರ ಒಪ್ಪಿಗೆ ಹೇಗೆ ಬರಲು ಸಾಧ್ಯ?

ಪ್ರ: ಹಾಗಾದೆರೆ ಪ್ರಕಾಶ ಸರ್ಕಾರಕ್ಕೆ ಪತ್ರ ಬರೆದಾದರೂ ಇದನ್ನು ಪ್ರತಿಭಟಿಸಬಹುದಿತ್ತು. ಮಾತ್ರವಲ್ಲ ಪಕ್ಷದವತಿಯಿಂದ ಹೆಗಡೆಯವರ ಮೇಲೆ ಕ್ರಮ ಕೈಗೋಳ್ಳಬಹುದಿತ್ತು?

ಪಾಟೀಲ: ಹೌದು ನಮ್ಮ ಅಧ್ಯಕ್ಷರು ಸ್ವತಂತ್ರ ಅಧ್ಯಕ್ಷರಾಗಿದ್ದರೆ ಆ ರೀತಿ ಮಾಡಬಹುದಿತ್ತೇನೋ?

ಪ್ರ: ಅಂದರೆ ಅಧ್ಯಕ್ಷರಿಗೆ ಸ್ವಾತಂತ್ರವಿಲ್ಲ, ಹೆಗಡೆಯವರ ರಬ್ಬರ್ ಸ್ಟಾಂಪ್ ಎಂದು ತಿಳಿದುಕೊಳ್ಳಬುದೇ?

ಪಾಟೀಲ: ಇದು ತುಂಬಾ ವಿವಾದದ ವಿಷಯ. ಪ್ರಕಾಶ ಸುಮ್ಮನಿರೋದು ನೋಡಿದರೆ ನಿಮ್ಮ ಊಹೆ ಸರಿಎನಿಸುತ್ತದೆ.

ಪ್ರ: ನೀವು ನೇರವಾಗಿ ಪಕ್ಷದ ಸಭೆಯಲ್ಲಿ ಪ್ರಕಾಶರವರನ್ನು ಪ್ರಶ್ನಿಸಬಹುದಲ್ಲವೆ?

ಪಾಟೀಲ: ನೋಡಿ ಸರ್ ನಮ್ಮಮಥವರಿಗೆಲ್ಲ ಅಲ್ಲಿ ಹೆಚ್ಚು ಮಾತನಾಡಲಿಕ್ಕೆ ಅವಕಾಶವಿರಲ್ಲ. ಅವಕಾಶವಿದ್ದರೂ ಎಲ್ಲೋ ಕಡೆ ಗಳಿಗೆಯಲ್ಲಿ ಮಾತಾಡೋಕೆ ಎದ್ದರೆ ಟೈಮ್ ಆಯ್ತು ಎಂದು ಸಭೆಯನ್ನು ಬರಖಾಸ್ತು (ರದ್ದು) ಗೊಳಿಸುತ್ತಾರೆ.

ಪ್ರ: ಸರಿ ಭ್ರಷ್ಟ ಮಂತ್ರಿಗಳ ವಿರುದ್ಧ ಮತ್ತು ಹೆಚ್ಚುವರಿ ಮಂತ್ರಿ ಮಂಡಲದ ವಿರುದ್ಧ ನಿಮ್ಮ ಗುಂಪಿನ ಪ್ರತಿಭಟನೆ ಎಲ್ಲಿ ತನಕ ಹೋಯ್ತು?

ಪಾಟೀಲ: ಅಯ್ಯೋ ನಾವು ಯಾರನ್ನು ನಂಬಲಿಕ್ಕೆ ಆಗಿತ್ತಿಲ್ಲ. ಇಲ್ಲಿ ವಿರೋಧಿಗಳಾಗಿ ಪತ್ರಿಕೆಗಳಲ್ಲಿ ಕಾಣೀಸಿಕೊಳ್ಳೋ ಜನಾನೆ ಪಕ್ಷದ ಸಭೆಗಳಲ್ಲಿ ಹೆಗಡೆಯವರನ್ನು ಇಂದ್ರ-ಚಂದ್ರ-ದೇವೇಂದ್ರ ಎಂದು ಹೊಗಳ್ತಾರೆ…

ಪ್ರ: ಅಂದರೆ ಸ್ವಲ್ಪ ಬಿಡಿಸಿ ಹೇಳಿ?

ಪಾಟೀಲ: ನೋಡಿ ಇವರೆ ಭ್ರಷ್ಟತೆ ತೊಲಗಬೇಕು, ಭ್ರಷ್ಟ ಮಂತ್ರಿಗಳನ್ನು ಮನೆಗೆ ಕಳುಹಿಸಬೇಕು. ನಮ್ಮನ್ನು ನಂಬಿದ ಜನಕ್ಕೆ ನಿರಮ್ಮೂಳವಾದ ಗಾಳಿ ಬೇಕು ಎನ್ನೋದು ನಮ್ಮ ಘೋಷಣೆ ನಿಜ. ಆದರೆ ಈ ಘೋಷಣೆಯನ್ನು ಮುಂದಿಟ್ಟುಕೊಂಡು ಹೋಗೋ ನಾವು ಹೆಗಡೆಯವರನ್ನು ಸಮರ್ಥಿಸಿಕೊಳ್ಳಬೇಕು ಎನ್ನೋದೇ ನಮಗೆ ಗೊತ್ತಾಗುತಿಲ್ಲ. ಏಕೆಂದರೆ ನಮ್ಮ ವಿರೋಧಿ ಲಾಭಿಯ ಕೆಲವು ಜನ “ಭ್ರಷ್ಟತೆ ತೊಲಗಬೇಕು” ಅಂತಾರೆ. ಆದರೆ “ಹೆಗಡೆ ನಾಯಕತ್ವನೂ ಬೇಕು” ಅಂತಾರೆ… ಇದು ಸಾಧ್ಯವೇ?

ಪ್ರ: ಅಂದರೆ ಘೋಷಣೆಗಳೆಲ್ಲ ಪ್ರಚಾರ ದೊರಕಿಸಿಕೊಳ್ಳುವ ಸ್ಟಂಟೇ?

ಪಾಟೀಲ: ಇರಬಹುದು. ಆದರೆ ನೋಡಿ ಭ್ರಷ್ಟತೆ ವಿರುದ್ಧ ದನಿ ಎತ್ತುವ ಈ ಜನ ಬಾಟ್ಲಿಂಗ್ ಖ್ಯಾತಿಯ ಹೆಗಡೆಯವರನ್ನು ಭ್ರಷ್ಟರಲ್ಲ ಅಂತ ಹೇಗೆ ತೀರ್ಮಾನಿಸುತ್ತಾರೆ? ಅದಕ್ಕೇನೆ ಈ ಭೀನ್ನಮತೀಯ ಲಾಬಿಯಲ್ಲಿ ನಿಜಕ್ಕೂ ಭ್ರಷ್ಟತೆಯ ವಿರುದ್ಧ ಛಲ ಇದ್ದರೆ, ಅವರು ಮೊದಲು ಹೆಗಡೆಯ ರಾಜೀನಾಮೆ ಕೇಳಬೇಕು.

ಪ್ರ: ಭ್ರಷ್ಟತೆ ತೊಲಗಬೇಕಾದರೆ, ಹೆಗಡೆ ರಾಜೀನಾಮೆ ಕೊಡಬೇಕು ಎಂದು ನಿಮ್ಮ ಅಭಿಪ್ರಾಯವೆ?

ಪಾಟೀಲ: ಖಂಡಿತ. ಇದು ಎಲ್ಲ ಪ್ರಾಮಾಣಿಕ ಶಾಸಕರ ಅಭಿಪ್ರಾಯವಾಗಬೇಕಾತ್ತದೆ. ನಮ್ಮನ್ನು ಆಯ್ಕೆಮಾಡಿದ ಜನರ ಹಿತಾಸಕ್ತಿಯ ಮುಂದೆ , ಹೆಗಡೆ ಕೂಡ ದೊಡ್ಡವರೇನಲ್ಲ.

ಪ್ರ: ಲೋಕಾಯುಕ್ತರ ಬಗ್ಗೆ ನೀವು ಏನು ಹೇಳ್ತೀರಿ?

ಪಾಟೀಲ: ಬಹುಪಾಲು ಇತ್ಯರ್ಥವಾಗದ ಪ್ರಕರಣಗಳನ್ನೆ ಉಳಿಸಿಕೋಂಡಿರೋದು ಒಂದು ಚೂರು ಅನುಮಾನ ಹುಟ್ಟಿಸ್ತೆ. ಲೋಕಾಯುಕ್ತ ನಿಜಕ್ಕೂ ಪ್ರಾಮಾಣಿಕವಾದ ಆಯೋಗದ ತರಹ ಕಾರ್ಯ ನಿರ್ವಹಿಸಬೇಕು.

ಪ್ರ: ಅಂದರೆ?

ಪಾಟೀಲ: ಶಿಕ್ಷೆ ನೀಡೋದಕ್ಕೆ, ದಂಡ ಹಾಕೋದಕ್ಕೆ ಲೋಕಾಯುಕ್ತಕ್ಕೆ ಅಧಿಕಾರ ಕೋಡೋದು, ಅದು ಮುಖ್ಯಮಂತ್ರಿಯವರಿಂದ ಆ ಅಧಿಕಾರ ಲೋಕಾಯುಕ್ತಕ್ಕೆ ಪ್ರಾಪ್ತವಾಗುವುದು, ಇವೆಲ್ಲ ಅಸಮಭದ್ದ ಸಂಗತಿಗಳು.

ಪ್ರ: ಅಂದರೆ ಬರೀ ವರದಿ ಕೊಡುವುದು ಮಾತ್ರ ಅದರ ಕೆಲಸವಾಗಬೇಕು?

ಪಾಟೀಲ: ಹೌದು, ಯಾವುದನ್ನೂ ಇತ್ಯರ್ಥಮಾಡೋದಕ್ಕೆ ನಮ್ಮ ಸಂವಿಧಾನ ನ್ಯಾಯಾಂಗವಿದೆ. ಇಲ್ಲಿ ಒಂಥರಹದ ಗೊಂದಲವಿದೆ!ಲೋಕಾಯುಕ್ತರ ಮುಂದೆ ಹೈಕೋರ್ಟ ಯಾಕೆ ಎಂಬ ವಾದ ನಾಲೆ ತಲೆ ಎತ್ತಿದರೆ ಏನು ಮಾಡೋದು ಹೇಳಿ?

ಪ್ರ: ಅಂದರೆ ಲೋಕಾಯುಕ್ತರ ವಿರುದ್ಧ ಕಾಂಗೈಗಳ ಪ್ರತಿಭಟನೆ ಸರಿಯೆ?

ಪಾಟೀಲ: ನೋಡಿ ಸ್ವಾಮಿ, ಒಂದು ಕಡೆ ಠಕ್ಕರ್-ನಟರಾಜ್ ಆಯೋಗಗಳನ್ನು ಪ್ರತಿಭಟಿಸುವ ಜನತಾ ಪಕ್ಷ ಲೋಕಾಯುಕತ್ವನ್ನು ಪ್ರತಿಭಟಿಸಬೇಡಿ ಎಂದು ಕಾಂಗೈನ ಜನಕ್ಕೆ ಹೇಗೆ ಹೇಳಬೇಕು?

ಪ್ರ: ನರಸಿಂಹಮೂರ್ತಿ, ಕಲ್ಮಣ್ ಕರ್ ರವರ ಸ್ಸಪೆನಷನ್ ಬಗ್ಗೆ ಏನು ಅನ್ನಿಸುತ್ತದೆ?

ಪಾಟೀಲ: ಇದು ಕೊಂಚ ತಣ್ಣಗಾಗಿರೋ ಸಂಗತಿ. ಸಭಾಧ್ಯಕ್ಷರು ಮನಸ್ಸು ಮಾಡಿದ್ರೆ ಈ ಜನರನ್ನು ಒಂದು ದಿನದಮಟ್ಟಿಗೆ ಹೊರಗೆ ಕಳುಹಿಸಬಹುದಾಗಿತ್ತು.

ಪ್ರ: ಅಂದರೆ ಈ ಸಸ್ಪೆನ್‌ಷನ್, ಈ ವಿದೇಯಕಗಳ ಮಂಡನೆ ಇವೆಲ್ಲ ಪೂರ್ವಯೋಜಿತವೆ?

ಪಾಟೀಲ: ನಾಗೇಗೌಡರು ಎನ್‌ಜಿಇಎಫ್ ಬಗ್ಗೆ ಮಾತನಾಡಲು ಶುರುಮಾಡಿದ ನಂತರ ಹೆಗಡೆಯವರಿಗೆ ಈ ವಿಧೇಯಕ ಮಂಡಿಸುವ ಮನಸ್ಸಾಯಿತೆ? ಗೊತ್ತಿಲ್ಲ… ಈ ಜನಗಳ ಕ್ರಮಗಳೇ ಅರ್ಥಹೀನವಾಗಿ ಗೊಂದಲ ಹುಟ್ಟಿಸಿವೆ…

ಪ್ರ: ಈ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಪಾಟೀಲ: ಹೌದು ಇದು ತುಂಬಾ ಮುಖ್ಯ. ಜನರ ಬಳಿ ಹೋಗುವಲ್ಲಿ ಹೆಗಡೆ ಸರ್ಕಾರ ಸೋತಿದೆ. ಜನರಿಗೆ ಭ್ರಮನಿರಸನವಾಗಿದೆ. ಹೀಗೆಯೇ ಮುಂದುವರೆದರೆ ಎಲ್ಲಾರೂ ಮನೆಗೆ ಹೋಗಬೇಕಾಗುತ್ತದೆ.

ಮೇಲಿನ ಸಂದರ್ಶನದಿಂದ ಮತ್ತು ಇತರ ಸಂಧರ್ಭದಲ್ಲಿ ಪಾಟೀಲರು ತಾಳಿದ ನಿಲುವುಗಳಿಂದ ಸಾಬೀತಾಗುದೇನೆಂದರೆ, ಪಾಟೀಲರು ರಾಮಕೃಷ್ಣ ಹೆಗಡೆ, ದೇವೇಗೌಡರನ್ನು ಅವರನ್ನು ತಮ್ಮ ನಾಯಕರೆಂದು ಪರಿಗಣಿಸಿದಾಗ್ಯೂ. ಅವರೆಂದೂ ಇಂದಿನ ಹಲವು ರಾಜಕಾರಣಿಗಳ ಹಾಗೆ ಅವರಿಗೆ “ಬಕೆಟ್ ಹಿಡಿಯುವ” ಕೆಲಸ ಮಾಡಲಿಲ್ಲ. ಅವರೆಂದೂ ತಮ್ಮನ್ನು ಅವರಿಗಿಂತ ಕೀಳು ಎಂದು ಭಾವಿಸಿ ಅವರು ಹೇಳಿದ್ದಕ್ಕೆಲ್ಲಾ ಅಥವಾ ಮಾಡಿದ್ದಕೆಲ್ಲಾ ಆತ್ಮವಂಚನೆ ಮಾಡಿಕೊಂಡು “ಹೂಂ” ಎನ್ನುತ್ತಿರಲಿಲ್ಲ. ಬದಲಾಗಿ ಪಾಟೀಲರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅವರನ್ನು ಪ್ರಶ್ನಿಸುವ ಧೈರ್ಯ ಪ್ರದರ್ಶಿಸುತಿದ್ದರು.

ನಿರೂಪಣೆ: ಕೆ.ಎನ್. ರಡ್ಡಿ, ಪತ್ರಕರ್ತರು, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here