ಸುರಪುರ: ಕಲಬುರ್ಗಿಯ ಡಾ. ಶರಣಬಸಪ್ಪ ಅಪ್ಪಾ ಅವರ ೮೫ನೇ ಜನ್ಮ ದಿನದ ಅಂಗವಾಗಿ ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹವಿದ್ಯಾಲಯದಲ್ಲಿ ಉದ್ಯಮಶೀಲತೆ ಕುರಿತು ಒಂದು ದಿನದ ಕಾರ್ಯಗಾರವನ್ನು ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿರೇಶ ಪಾಲಿಕೊಂಡ ಮಾತನಾಡಿ,ಈ ಭಾಗದ ಜನರಿಗೆ ವಿವಿಧ ರಣಗದ ಉದ್ಯಮ ಶೀಲತೆ ಸಂಶೋಧನೆ ಮತ್ತು ಅವಿಷ್ಕಾರಗಳ ಕುರಿತು ಮಾಹಿತಿ ನೀಡಿದರು.ಎಮರ್ಜಿಂಗ್ ಟ್ರೇಡ್ ಇನ್ ಟೆಕ್ನಾಲಜಿ ಕಂಪನಿಯ ಜಮೀರ ಅಹ್ಮದ ಹಾಗು ಅಂಕುಶ ಪಾಟೀಲ ಮಾತನಾಡಿ,ಹೋಸ ಉದ್ಯಮಶೀಲತೆಯ ಬಗ್ಗೆ ಜನರು ಅರಿತುಕೊಳ್ಳಬೇಕು.ಇದರಿಂದ ಪ್ರತಿಯೊಬ್ಬನು ಉದ್ಯಮ ಶೀಲರಾಗಲು ಅವಕಾಶವಿದೆ.
ಇಲ್ಲಿಯ ಜನರು ಈ ಕಾರ್ಯಗಾರದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿ ಹೊಂದುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ: ರವೀಂದ್ರ ಕುಮಾರ ನಾಗರಾಳೆ,ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ದೊಡ್ಡಪ್ಪ ನಿಷ್ಠಿ ಮಾತನಾಡಿದರು.ಗಂಗಾಧರ ಹೂಗಾರ ನಿರೂಪಿಸಿ ವಂದಿಸಿದರು.