ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ನಿಯಂತ್ರಣಕ್ಕಾಗಿ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಸಭೆ

0
320

ಕಲಬುರಗಿ: ಜಿಲ್ಲಾ‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಮಾಧವರಾವ್ ಕೆ.ಪಾಟೀಲ್ , ಇವರು ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ನಿಯಂತ್ರಣ ಹಾಗೂ ಮುಂಜಾಗ್ರತೆಯ ಕ್ರಮವಾಗಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ವೈದ್ಯರುಗಳ ಸಭೆಯನ್ನು ಜಿಲ್ಲಾ ಸಮೀಕ್ಷಾ ಘಟಕದ ಸಭಾ ಭವನದಲ್ಲಿ ಜರುಗಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಯಾವುದೆ ಕಾರಣಕ್ಕೂ ಕಿಟ್ ಮೂಲಕ ಟೆಸ್ಟ್ ಮಾಡಿರುವ ಖಚಿತ ಪ್ರಕರಣಗಳನ್ನು ಜಿಲ್ಲಾ ಪ್ರಯೋಗಾಲಯದಲ್ಲಿ ಮತ್ತೊಂದು ರಕ್ತದ ಮಾದರಿಗಳನ್ನು ನೀಡುವುದರ ಮೂಲಕ ಖಚಿತ ಪಡಿಸಿಕೊಳ್ಳಬೇಕು ಹಾಗೂ ಟೆಸ್ಟ್ ಗಳಿಗಾಗಿ ಸಿಂಗಲ್ ಟೆಸ್ಟ್ ಗೆ ₹250 ಹಾಗೂ ಡೆಂಗ್ಯೂ ಎಲ್ಲ 3 ಟೆಸ್ಟ್ ಗೆ 500 ಗಳನ್ನು ಮಾತ್ರ ತೆಗೆದುಕೊಳ್ಳಬೇಕು.

Contact Your\'s Advertisement; 9902492681

ಆಸ್ಪತ್ರೆಗಳಲ್ಲಿ ದಾಖಲಾತಿಯಾದ ಪ್ರಕರಣಗಳನ್ನು ಜಿಲ್ಲಾ ಸಮೀಕ್ಷಾ ಘಟಕಕ್ಕೆ ದಿನಾಲು ಗಮನಕ್ಕೆ ತರಬೇಕು, ಯಾವುದೇ ಪ್ರಕರಣಗಳು ಮರಣ ಹೊಂದಿದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಗಮನಕ್ಕೆ ತರಬೇಕು, ಪ್ಲೇಟ್ಲೇಟ್ ಗಳಿಗಾಗಿ ಹೆಚ್ಚಿಗೆ ಹಣ ಪಡೆಯಬಾರದು ಎಂದು ಸೂಚಿಸಿದರು, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡಿದರೂ ಕೂಡಾ ಈ ಕಛೇರಿಗೆ ಮಾಹಿತಿಯನ್ನು ನೀಡಲು ಸೂಚಿಸಿದರು.

ಜನರಲ್ಲಿ ಯಾವುದೇ ಕಾರಣಕ್ಕೂ ರೋಗದ ಕುರಿತಂತೆ ಭಯ ಹುಟ್ಟಿಸಬಾರದೆಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳು ಡಾ.ಶರಣಬಸಪ್ಪ,ಎಪಿಡೆಮೋಲಾಜಿಸ್ಟ್ ಡಾ.ಚಂದ್ರಮೌಳಿ,ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡಮನಿ ,ಹಿರಿಯ ಆರೋಗ್ಯ ಸಹಾಯಕ ಗಣೇಶ ಚಿನ್ನಾಕಾರ,ಹಾಗೂ ಸಿದ್ದಣ್ಣ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here