ಶೀಘ್ರ ಬೆಂಗಳೂರು- ಕಲಬುರಗಿ- ತಿರುಪತಿ ನಡುವೆ ವಿಮಾನ ಹಾರಾಟ

0
284

ಕಲಬುರಗಿ: ಜಿಲ್ಲೆಯ ಜನರಿಗೆ ಸ್ಟಾರ್ ಏರ್ ಸಿಹಿ ಸುದ್ದಿ ಕೊಟ್ಟಿದೆ. ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸಂಚಾರಕ್ಕೆ ನವೆಂಬರ್ ಒಂದರಂದು ಒಪ್ಪಿಗೆ ಸಿಕ್ಕಿತ್ತು.

ಸ್ಟಾರ್ ಏರ್ ಬೆಂಗಳೂರು- ತಿರುಪತಿ ನಡುವೆ ಶೀಘ್ರದಲ್ಲಿಯೇ ವಿಮಾನ ಸೇವೆಯನ್ನು ಆರಂಭಿಸಲಿದೆ. ಉಡಾನ್ ಯೋಜನೆಯಡಿ ಕಲಬುರ್ಗಿ ವಿಮಾನ ನಿಲ್ದಾಣ ಸೇರ್ಪಡೆಗೊಂಡಿದೆ. ಈ ಮಧ್ಯೆ, ಬೆಂಗಳೂರು- ಕಲಬುರ್ಗಿ- ತಿರುಪತಿ ನಡುವಿನ ವಿಮಾನ ಸೇವೆಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ ಎಂದು ಸ್ಟಾರ್ ಏರ್ ಸಂಸ್ಥಾಪಕ ಸಂಜಯ್ ಘೋಡಾವತ್ ಅವರು ಹೇಳಿದ್ದಾರೆ.

Contact Your\'s Advertisement; 9902492681

ಸುಮಾರು ೧೭೫.೫೭ ಕೋಟಿ ರೂ.ಗಳ ವೆಚ್ಚದಲ್ಲಿ ಕಲಬುರ್ಗಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ನವೆಂಬರ್ ಒಂದರಿಂದಲೇ ವಾಣಿಜ್ಯ ಸಂಚಾರ ಆರಂಭಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಿಗೆ ನೀಡಿತು.
ಕಳೆದ ೨೦೧೮ರ ಆಗಸ್ಟ್ ೨೬ರಂದು ಪ್ರಾಯೋಗಿಕವಾಗಿ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಹಾರಾಟ ನಡೆಸಲಾಗಿತ್ತು. ೭೪೨.೨೩ ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ.
ಏರ್ ಬಸ್‌ನಂತಹ ಬೃಹತ್ ವಿಮಾನಗಳು ಸಹ ಬಂದಿಳಿಯಲು ಅನುಕೂಲ ಆಗುವಂತೆ ೩,೭೨೫ ಉದ್ದದ ರನ್‌ವೇಯನ್ನು ಸಹ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿದೆ. ಸ್ಟಾರ್ ಏರ್ ವಿಮಾನ ಮೊದಲ ಬಾರಿಗೆ ಇಲ್ಲಿಂದ ಸಂಚಾರ ನಡೆಸುವ ಸಾಧ್ಯತೆ ಇದೆ.

ಸಂಸದರ ಚರ್ಚೆ: ಗುರುವಾರ ಕಲಬುರ್ಗಿ ವಿಮಾನ ನಿಲ್ದಾಣದ ಉದ್ಘಾಟನೆ ಕುರಿತು ನಾಗರಿಕ ವಿಮಾನಯಾನ ಕಾರ್ಯದರ್ಶಿ ಪ್ರದೀಪ್‌ಸಿಂಗ್ ಕರೋಲಾ ಅವರೊಂದಿಗೆ ಸಂಸದ ಡಾ. ಉಮೇಶ್ ಜಾಧವ್ ಅವರು ಚರ್ಚೆ ನಡೆಸಿದರು.

ಕಲಬುರ್ಗಿಯಲ್ಲಿ ವಿಮಾನ ಹಾರಾಟ ಮಾಡುವ ಕುರಿತು ಇಂಡಿಗೋ ಏರ್‌ಲೈನ್ಸ್ ಅಧ್ಯಕ್ಷ ರಾಹುಲ್ ಭಾಟಿಯಾ ಅವರೊಂದಿಗೆ ಸಂಸದ ಡಾ. ಉಮೇಶ್ ಜಾಧವ್ ಅವರು ಚರ್ಚೆ ನಡೆಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here