ಸುರಪುರ: ಟಿಪ್ಪು ಸುಲ್ತಾನ್ ಸೇವಾ ಸಂಘ ವತಿಯಿಂದ ಸುರಪುರದಲ್ಲಿ ಟಿಪ್ಪು ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಟಿಪ್ಪು ಸುಲ್ತಾನನಿಗೆ ದೇಶಿಯ ಅರಸರು ಸಹಾಯ ಮಾಡಿದರೆ ಬ್ರಿಟಿಷರು ಎರಡುನೂರು ವರ್ಷಗಳ ಮೊದಲೇ ಭಾರತ ಬಿಟ್ಟು ತೊಲಗಬೇಕಾಗಿತ್ತು. ಬ್ರಿಟಿಷರಿಗೆ ಬಗ್ಗದೆ ರಣರಂಗದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿ ಹುತಾತ್ಮನಾದ ವೀರಯೋಧ ಟಿಪ್ಪುಸುಲ್ತಾನ್ ಎಂದು ಅಧ್ಯಕ್ಷರಾದ ಖಾಜಾ ಖಲೀಲ್ ಅಹ್ಮದ ಅರಕೇರಿ ಮಾತನಾಡಿದರು.
ಟಿಪ್ಪುಸುಲ್ತಾನ್ ಸೇವಾ ಸಂಘದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಕೊಟ್ಟು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಶೇಕ್ ಲಿಯಾಕತ್ ಹುಸೇನ್ ಉಸ್ತಾದ್ , ಇಸತೇಯಾಕ್ ಹುಸೇನ್ ಸವಾರ್, ಅಬಿದ್ ಹುಸೇನ್ ಪಗಡಿಬಂದ್, ಮೊಹಮ್ಮದ್ ಆರಿಫ್ , ಸೈಯದ್ ಭಕ್ತಿಯಾರ್ ಹುಸೇನ್, ಅಜ್ಮೀರ್ ಖುರೇಶಿ, ದಾವುದ್ ಪಠಾಣ, ಮೊಹಮ್ಮದ್ ಷರೀಫಸಾಬ, ಅನ್ವರ್ ದಖನಿ ಶೇಕ್ , ಅಮ್ಜದ್ ಹುಸೇನ್ ಇತರರಿದ್ದರು.
ಮೆಹಬೂಬ್ ಪಟೇಲ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.