ಕಲಬುರಗಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡುವಂತೆ ಆಗ್ರಹ

0
163

ಕಲಬುರಗಿ: ಉತ್ತರ ಕರ್ನಾಟಕದ ಯಾದಗಿರಿ, ಸುರಪುರ ತಾಲ್ಲೂಕಿನಲ್ಲಿ ಹಲವಾರು ಕಡೆ ಮಳೆಯಿಂದಾಗಿ ನಮ್ಮ ಭಾಗದ ಜನರು ಕಷ್ಟದಲ್ಲಿರುವಾಗ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ಸರಿಯಲ್ಲ, ಈ ಬಾರಿ ಸಮ್ಮೇಳನ ಮುಂದೂಡಿ ಮುಂದಿನ ವರ್ಷ ಸಮ್ಮೇಳನ ಅದ್ದೂರಿಯಾಗಿ ನಡೆಸಬೇಕೆಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ ಆಗ್ರಹಿಸಿದ್ದಾರೆ.

ಕಲಬುರಗಿಯಲ್ಲಿ ನಡೆಯುತ್ತಿರುವುದು ಸಂತೋಷದ ವಿಚಾರ ಆದರೆ ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಯಾದಗಿರಿ ಜಿಲ್ಲೆಯಲ್ಲಿ ಸುರಪುರ ತಾಲ್ಲೂಕಿನಲ್ಲಿ ಹಲವಾರು ಕಡೆ ಮಳೆಯಿಂದಾಗಿ ನಮ್ಮಜನರು ಕಷ್ಟದಲ್ಲಿರುವಾಗ ಈ ಉದ್ದೇಶದಿಂದಲೇ ಈ ವರ್ಷದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಹಲವಾರು ಜಯಂತಿಗಳು ಕೂಡ ಸರಳವಾಗಿ ಆಚರಿಸಿ ಅದರ ಖರ್ಚನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ.

Contact Your\'s Advertisement; 9902492681

ಸಮ್ಮೇಳನ ಆಚರಿಸುವ ಮೂಲಕ ಕಷ್ಟದಲ್ಲಿರುವ ಜನರಿಗೆ ನಾವು ತಪ್ಪು ಸಂದೇಶ ನೀಡಿದಂತಾಗಬಹುದೆಂದು ಅವರು ಕಳವಳ ವ್ಯಕ್ತಪಡಿಸಿ ಕನ್ನಡದ ಹಬ್ಬ ಎಲ್ಲರೂ ಖುಷಿಯಿಂದ ಸಮ್ಮೇಳನ ಮಾಡಬಹುದೆಂದು ಕರೆ ನೀಡಿದರು.
ಸಮಂಜಸವಲ್ಲ ಎನ್ನುವ ದೃಷ್ಟಿಯಿಂದ ನಾಳೆ ಎಲ್ಲ ಕನ್ನಡಪರ ಜನಪರ ಸಂಘಟನೆಗಳ ಮುಖಂಡರು ಮತ್ತು ಚಿಂತಕರು, ಸಾಹಿತಿಗಳ ಜೊತೆ ಚರ್ಚಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಸಮ್ಮೇಳನ ಮುಂದೂಡುವ ಕುರಿತು ಮನವಿ ಮಾಡಲಾಗುವುದೆಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರವಿಚಂದ್ರ ಪಾಟೀಲರ ಹರಸೂರ, ಮುಖಂಡ ತಾತ ಗೌಡ ಪಾಟೀಲ, ಮಹೇಶ್ ಕೆ ಪಾಟೀಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here