ಕೊಳೆಗೇರಿಯಲ್ಲಿ ನಿರ್ಮಿಸಿದ ಮನೆಗಳು ಕಳಪೆ ಎಂದು ಜಯಕರ್ನಾಟಕ ಆರೋಪ

0
34

ಸುರಪುರ: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಗರದಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳು ಕಳಪೆಯಾಗಿವೆ ಎಂದು ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ರವಿಕುಮಾರ ನಾಯಕ ಬೈರಿಮಡ್ಡಿ ಆರೋಪಿಸಿದರು.

ಕಳಪೆ ಮನೆಗಳ ನಿರ್ಮಾಣದ ತನಿಖೆಗೆ ಆಗ್ರಹಿಸಿ ನಗರದ ತಹಸೀಲ್ದಾರ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಕೊಳೆಗೇರಿ ಮನೆ ಟೆಂಡರ್ ಪಡೆದ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಶಿಥಿಲಗೊಂಡ ಹಾಲೋಬ್ಲಾಕ್ ಉಪಯೋಗಿಸುತ್ತಿದ್ದಾರೆ. ಸಿಮೆಂಟ್‍ನಲ್ಲಿ ಹೆಚ್ಚು ಮರಳು ಬಳಸುತ್ತಾರೆ. 8ಎಂಎಂ ಕಬ್ಬಿಣ ಬದಲಿಗೆ 6ಎಂಎಂ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

Contact Your\'s Advertisement; 9902492681

ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ಕಬಾಡಗೇರಾ ಮಾತನಾಡಿ, ಒಂದು ಮನೆಗೆ ರೂ. 4.98 ಹಣ ನಿಗದಿಪಡಿಸಲಾಗಿದೆ. ಅದರಲ್ಲಿ ಸಾಮಾನ್ಯ ಫಲಾನುಭವಿಗಳು ರೂ. 75 ಸಾವಿರ, ಪರಿಶಿಷ್ಟ ಫಲಾನುಭವಿಗಳು ರೂ. 49 ಹಣ ಕಟ್ಟಬೇಕು. ಕೆಲವು ಫಲಾನುಭವಿಗಳಿಗೆ ಹಣ ತುಂಬಿಸಿಕೊಂಡು ಇದುವರೆಗೂ ಕಾಮಗಾರಿ ಆರಂಭಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳಪೆ ಕಾಮಗಾರಿ ಮಾಡುತ್ತಿರುವುದರಿಂದ ಮನೆಗಳ ಬಾಳಿಕೆ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಯೋಜನೆಯ ಉದ್ದೇಶ ಈಡೇರುವುದಿಲ್ಲ. ಕಾರಣ ಶೀಘ್ರದಲ್ಲಿ ಈ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಎಲ್ಲ ಫಲಾನುಭವಿಗಳಿಗೆ ಗುಣಮಟ್ಟದ ಮನೆ ನಿರ್ಮಿಸಿಕೊಡಬೇಕು. ನಿರ್ಲಕ್ಷ್ಯ ತೋರಿದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಸುಫಿಯಾ ಸುಲ್ತಾನ್ ಅವರಿಗೆ ಸಲ್ಲಿಸಲಾಯಿತು.
ಶರಣಪ್ಪ ಡಿಬಾಸ್, ಯಲ್ಲಪ್ಪ ಕಲ್ಲೋಡಿ, ರಾಘವೇಂದ್ರ ಗೋಗಿಕರ್, ಯಲ್ಲಪ್ಪ ಶಿಬರಬಂಡಿ, ಭೀಮನಗೌಡ ಅಮ್ಮಾಪುರ, ಬಸವರಾಜ ಕವಡಿಮಟ್ಟಿ, ರವಿಕಿರಣ ಸಿದ್ದಾಪುರ, ರವಿ ಹೊಸಮನಿ, ಹಣಮಂತ ಶಿಬರಬಂಡಿ, ಭೀಮರಾಯ ಮೂಲಿಮನಿ, ಮಹ್ಮದ ಅಲಿ, ಹಣಮಂತ ಕೊಲ್ಲೂರ, ವಾಸುದೇವನಾಯಕ, ಸುಭಾಷ ಹುಲಕಲ್, ದೇವು ದೇವಕೇರಿ, ಕಾಸಿಮ ಸುರಪುರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here