ಅನ್ಯಾಯದ ವಿರುದ್ಧ ನಡೆಯುವ ಎಲ್ಲಾ ಹೋರಾಟಗಳಿಗೆ ನವೆಂಬರ್ ಕ್ರಾಂತಿ ಸ್ಪೂರ್ತಿ: ಹೆಚ್. ದಿವಾಕರ್

0
96

ಕಲಬುರಗಿ: 1917 ರಲ್ಲಿ ನವೆಂಬರ್ 7 ರಿಂದ 17 ರವರೆಗೆ ನಡೆದ ರಷ್ಯಾದ ಸಮಾಜವಾದಿ ಕ್ರಾಂತಿ ಇಡೀ ವಿಶ್ವವನ್ನು ಬೆಬ್ಬೆರಗಾಗಿಸಿತ್ತು. ಮಹಾನ್ ಮಾರ್ಕ್ಸ್‌ವಾದಿ ಚಿಂತಕರು ಹಗೂ ನಾಯಕರಾದ ಕಾಮ್ರೆಡ್ ಲೆನಿನ್ ರ ನಾಯಕತ್ವದಲ್ಲಿ ಕಾರ್ಮಿಕ ವರ್ಗ ಕ್ರಾಂತಿ ನೆರವರಿಸಿತ್ತು ಎಂದು ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೆಡ್ ಹೆಚ್. ವಿ.ದಿವಾಕರ್ ತಿಳಿಸಿದರು.

ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯು ನವೆಂಬರ್ ಕ್ರಾಂತಿಯ ಅಂಗವಾಗಿ ಸಾರ್ವಜನಿಕ  ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಮ್ಮ ದೇಶದ ಮಹಾನ್ ಮಾರ್ಕ್ಸವಾದಿ ನಾಯಕ ಕಾ ಶಿವದಾಸ್ ಘೋಷ್ ರ ಸಮಾಜವಾದಿ ರಾಷ್ಟ್ರ ಸ್ಥಾಪಿಸುವ ಕನಸು ನೆರವೇರಿಸಲು ರಷ್ಯಾ ಕ್ರಾಂತಿಯ ಪಾಠಗಳನ್ನು ಕಲಿಯುವ ಅವಶ್ಯಕತೆ ಇದೆ. ಅಮೋಘವಾದ ಯಶಸ್ಸು ಸಾಧಿಸಿದ ರಷ್ಯಾದ ಕ್ರಾಂತಿ ಸ್ಟಾಲಿನ್ ರ ನಂತರ ವಿನಾಶದ ಹಾದಿ ಹಿಡಿಯಿತು. ಸರಿಯಾದ ಮಾರ್ಕ್ಸವಾದಿ ಚಿಂತನೆಯ ಆಧಾರದ ಮೇಲಯೇ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಅತ್ಯಂತ ಹಿಂದುಳಿದ ರಷ್ಯಾದಲ್ಲಿ, ಮಾರ್ಕ್ಸವಾದಿ ನಾಯಕ ಕಾ. ಲೆನಿನ್ ಆ ದೇಶಕ್ಕೆ ಅನುಗುಣವಾಗಿ ಮಾರ್ಕ್ಸವಾದವನ್ನು  ಅಳವಡಿಸಿ, ಅಂದಿನ ಪ್ರಶ್ನೆಗಳಿಗೆ ಉತ್ತರಿಸಿ ಸಮಾಜವಾದಿ ಕ್ರಾಂತಿ ನೆರವೇರಿಸಿದರು ಎಂದರು.

Contact Your\'s Advertisement; 9902492681

ನಂತರ ಸ್ಟಾಲಿನ್ ರು ನಂತರದಲ್ಲಿ ಬಂದ ಪ್ರಶ್ನೆಗಳಿಗೆ ಉತ್ತರಿಸಲು ಮಾರ್ಕ್ಸವಾದವನ್ನು ಹಾಗೂ ಲೆನಿನ್‌ವಾದ ವನ್ನು ಅಭಿವೃದ್ಧಿಗೊಳಿಸಿದರು. ಹಿಟ್ಲರ್ ನ ಅಟ್ಟಹಾಸವನ್ನು ಕೊನೆಗಾಣಿಸಿದರು. ಇಡೀ ಜಗತ್ತನ್ನು ಹಿಟ್ಲರ್ ನ ಫ್ಯಾಸಿವಾದದಿಂದ ಉಳಿಸಿದ ಶ್ರೇಯ ಸ್ಟಾಲಿನ್ ನೇತೃತ್ವದ ರಷ್ಯಾಗೆ ಸಲ್ಲಿಸಿತ್ತು. ಆದರೆ ಸ್ಟಾಲಿನ್ ರ ನಂತರ ಬಂದ ಪರಿಷ್ಕರಣಾವಾದಿ ನಾಯಕತ್ವ, ರಷ್ಯಾದಲ್ಲಿ ಪರಿಷ್ಕರಣಾವಾದನ್ನು ಪ್ರಾರಂಭಿಸಿತ್ತು. ಮಾರ್ಕ್ಸ್‌ವಾದನ್ನು ತಿರುಚುವುದರ ಮೂಲಕ ಅನೇಕ ಗೊಂದಲಗಳನ್ನು ಸೃಷ್ಟಿಮಾಡಿ ಸಮಾಜವಾದವನ್ನು ರಷ್ಯಾದಲ್ಲಿ ಕೊನೆಗಾಣಿಸಿತು. ನಂತರ ಅಂತರಾಷ್ಟ್ರೀಯ ಕಮ್ಯುನಿಸ್ಟ್ ಚಳುವಳಿಯಲ್ಲಿ ಸ್ಟಾಲಿನ್ ನಂತರ ಬಂದ ಅನೇಕ ಪ್ರಶ್ನೆಗಳಿಗೆ ನಮ್ಮ ದೇಶದ ಮಹಾನ್ ಮಾರ್ಕ್ಸವಾದಿ ಚಿಂತಕರಾದ ಕಾ ಶಿವದಾಸ್ ಘೋಷ್ ರವರು ಮಾರ್ಕ್ಸವಾದದ ಆಧಾರದ ಮೇಲೆ ಉತ್ತರಿಸುವುದರೊಂದಿಗೆ ಮಾರ್ಕ್ಸವಾದವನ್ನು ಅಭಿವೃದ್ಧಿಗೊಳಿಸಿದರು ಹಾಗೂ ನಮ್ಮ ಪಕ್ಷ, ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪ್ರಾರಂಭಿಸಿದರು.

ಮಾರ್ಕ್ಸವಾದವು ಮಾತ್ರವೇ ಇಂದಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯ. ಮಾರ್ಕ್ಸವಾದದ ಆಧಾರದ ಮೇಲೆ, ರಷ್ಯಾ ಕ್ರಾಂತಿಯ ಪಾಠಗಳೊಂದಿಗೆ ನಾವು ಭಾರತದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ಸಾಕಾರಗೊಳಿಸಬೇಕಿದೆ. ಇಂದು ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷ ಮಾತ್ರವೇ ಸರಿಯಾದ ನಾಯಕತ್ವ ನೀಡಲು ಸಾಧ್ಯ. ಇಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರು ಸಿದ್ಧಗೊಂಡು ಜನರನ್ನು ಸಂಘಟಿಸಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದ ಭಾಷಣಕಾರರಾಗಿ ಆಗಮಿಸಿದ್ದ ಕಲಬುರಗಿ ಸ್ಥಳೀಯ ಸಮಿತಿ ಕಾರ್ಯದರ್ಶಿಗಳಾದ ಕಾ. ಮಹೇಶ್ ಎಸ್. .ಬಿ ರವರು ಮಾತನಾಡುತ್ತ, ಇಂದು ದೇಶದಲ್ಲಿ ನೋಡುತ್ತಿರುವ ಅನೇಕ ಸಮಸ್ಯೆಗಳ ವಿರುದ್ಧ ದೇಶವ್ಯಾಪಿ ಹೋರಾಟ ಜರುಗಬೇಕಾಗಿದೆ. ರಷ್ಯಾದಲ್ಲಿ ನಡೆದ ಕ್ರಾಂತಿಯು, ಸಮಾಜವಾದಿ ರಾಷ್ಟ್ರವನ್ನು ಸ್ಥಾಪಿಸುವ ನಮ್ಮೆಲ್ಲರ ಹೋರಾಟಕ್ಕ ಸ್ಪೂರ್ತಿ ನೀಡುತ್ತದೆ. ಈ ದಿನವನ್ನು ನೆನೆಯುವುದ ಬರೀ ಆಚರಣೆ ಅಲ್ಲ. ಬದಲಾಗಿ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಬಲಿಷ್ಠ ಹೋರಾಟ ಕಟ್ಟಲು ಸ್ಪೂರ್ತಿ ಪಡೆಯುವ ದಿನ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಕ್ಷದ ವಾಡಿ ಸಮಿತಿಯ ಕಾರ್ಯದರ್ಶಿಗಳಾದ ಕಾ. ಆರ್.ಕೆ.ವೀರಭದ್ರಪ್ಪ ರವರು ಮಾತನಾಡುತ್ತ, ಬಂಡವಾಳಶಾಹಿ ವರ್ಗವು ಇಂದು ಜನರ ಬಂಡವಾಳಶಾಹಿ ವಿರೋಧಿ ಹೋರಾಟಗಳನ್ನು ಹತ್ತಿಕ್ಕಲು ಸರ್ವ ಪ್ರಯತ್ನ ನಡೆಸುತ್ತಿದೆ. ಜಾತಿ, ಮತ, ಧರ್ಮಗಳ ಆಧಾರದ ಮೇಲೆ ಜನರ ಒಗ್ಗಟ್ಟನ್ನು ಮುರಿಯುತ್ತಿದೆ. ಬಂಡವಾಳಶಾಹಿಗಳ ಹಾಗೂ ಅವರ ಕೈಗೊಂಬೆ ರಾಜಕಾರಣಿಗಳ ಈ ಹುನ್ನಾರವನ್ನು ಮುರಿಯಬೇಕೆದೆ. ಎಂದರು.

ವೇದಿಕೆಯ ಮೇಲೆ ಜಿಲ್ಲಾಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಕ್ಷದ ಸಂಘಟನಾಕಾರರು, ಹಿತೈಶಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here