ಸುರಪುರ: ಭಕ್ತ ಕನಕದಾಸರ ಅದ್ಧೂರಿ ಜಯಂತಿ ಆಚರಣೆ

0
128

ಸುರಪುರ: ತಾಲ್ಲೂಕು ಆಡಳಿತ ದಿಂದ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು.ಬೆಳಿಗ್ಗೆ ಡಾ: ಬಿ.ಆರ್.ಅಂಬೇಡ್ಕರ ವೃತ್ತದ ಬಳಿ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಶಾಸಕರ ನರಸಿಂಹ ನಾಯಕ (ರಾಜುಗೌಡ) ಚಾಲನೆ ನೀಡಿದರು.ನಗರದ ಪ್ರಮುಖ ಬೀದಿಗಳ ಮೂಲಕ ಮಹರ್ಷಿ ವಾಲ್ಮೀಕಿ ಭವನದ ವರೆಗೆ ಮೆರವಣಿಗೆ ನಡೆಸಲಾಯಿತು.

ನಂತರ ನಡೆದ ಜಯಂತಿ ಕಾರ್ಯಕ್ರಮದ ಆರಂಭದಲ್ಲಿ ಕನಕ ದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ಡೊಳ್ಳು ಬಾರಿಸಿ ನಂತರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕು ಪಂಚಾಯತಿ ಅಧ್ಯಕ್ಷತೆ ಶಾರದಾ ಬಿ.ಬೇವಿನಾಳ ಮಾತನಾಡಿ,ಕನಕದಾಸರು ಮೊದಲು ತಿಮ್ಮಪ್ಪ ರಾಜನಾಗಿದ್ದವರು ತಮ್ಮ ದೇವರ ಅನುಗ್ರಹದಿಂದ ಭಕ್ತನಾಗಿ ಬದಲಾಗಿ ಕೀರ್ತನೆಯ ಸಾಹಿತ್ಯದ ಮೂಲಕ ಮನುಷ್ಯರೆಲ್ಲ ಒಂದೆ ಎಂದು ಮಹಾನ್ ಪುರುಷ ಕನಕದಾಸರು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಅಮರಯ್ಯ ಸ್ವಾಮಿ ಜಾಲಿಬೆಂಚಿ ಹಾಗು ಕಸಾಪ ಕಾರ್ಯದರ್ಶಿ ದೇವು ಹೆಬ್ಬಾಳ ಮಾತನಾಡಿ,ಕನಕದಾಸರಾದಿಯಾಗಿ ಎಲ್ಲಾ ಮಹಾತ್ಮರು ಒಂದು ಜಾತಿಗೆ ಅಥವಾ ಸಮುದಾಯಕ್ಕೆ ಸೀಮಿತವಾದವರಲ್ಲ,ಅವರು ಕೊಟ್ಟ ಸಂದೇಶಗಳು ಎಲ್ಲರಿಗೂ ಅನ್ವಯಿಸುತ್ತವೆ.ಕುಲ ಕುಲವೆಂದು ಹೊಡೆದಾಡದಿರಿ ಎಂದ ಕನಕದಾಸರು ರಚಿಸಿದ ಸಾಹಿತ್ಯ ಇಂದು ಎಲ್ಲ ಭಾಷೆಗಳ ಮೂಲಕ ಜಗತ್ತಿಗೆ ಪರಿಚಿತವಾಗಿದೆ ಎಂದರು.ಕನಕದಾಸರದು ಅಗಾಧವಾದ ಭಕ್ತಿಯಾಗಿದ್ದು ಉಡುಪಿಯ ಶ್ರೀಕೃಷ್ಣನನ್ನೆ ತನ್ನತ್ತ ತಿರುಗುವಂತೆ ಮಾಡಿದ ಭಕ್ತರಲ್ಲೆ ಶ್ರೇಷ್ಠರಾಗಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಮಾತನಾಡಿ,ನಾವೆಲ್ಲರು ಭಕ್ತ ಕನಕದಾಸರ ಆದರ್ಶವನ್ನು ಬದುಕಲ್ಲಿ ಅಳವಡಿಸಿಕೊಳ್ಳೋಣ.ನಮ್ಮ ಕುರುಬ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಐವತ್ತು ಲಕ್ಷ ಅನುದಾನ ನೀಡಿದ ಶಾಸಕ ರಾಜುಗೌಡರಿಗೆ ಅಭಿನಂದೆನೆ ಸಲ್ಲಿಸುವುದಾಗಿ ತಿಳಿಸಿದರು.ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ನಿಂಗಣ್ಣ ಬಿರೆದಾರ ಮಾತನಾಡಿದರು.ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ,ತಾಲೂಕು ಪಂಚಾಯತಿ ಇಒ ಅಂಬ್ರೇಶ ವೇದಿಕೆ ಮೇಲಿದ್ದರು.ಶಿಕ್ಷಕ ಗುರುನಾಥ ನಾವದಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ,ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪ ನಾಯಕ (ತಾತಾ),ಯಲ್ಲಪ್ಪ ಕುರಕುಂದಿ, ಬಿಇಒ ನಾಗರತ್ನ ಓಲೆಕಾರ,ಆರ್.ಐ ಗುರುಬಸಪ್ಪ,ಪಿಐ ಆನಂದರಾವ್,ಬಿಸಿಯೂಟದ ಅಧಿಕಾರಿ ಮೌನೇಶ ಕಂಬಾರ, ಬಲಭೀಮ ನಾಯಕ ಬೈರಿಮಡ್ಡಿ,ಮುಖಂಡರಾದ ಯಮನಪ್ಪ ಮಾಸ್ತರ ಬಪ್ಪರಗಿ,ರಂಗಣ್ಣಗೌಡ ದೇವಿಕೇರಾ,ಬೀರಣ್ಣ ಆಲ್ದಾಳ,ರವಿಚಂದ್ರ ಹುದ್ದಾರ,ಜಗದೀಶ ನಂಬಾ,ಶಂಕರ ಸಾಹುಕಾರ,ವನಕೇರೆಪ್ಪ,ಮಲ್ಲಣ್ಣ ಹುಬ್ಬಳ್ಳಿ, ಧರ್ಮರಾಜ ಬಡಿಗೇರ,ಉಸ್ತಾದ ವಜಾಹತ್ ಹುಸೇನ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here