ನೆರೆಹಾವಳಿ: ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಶಾಸಕ ಖರ್ಗೆ ನಿರ್ಧಾರ

0
61

ಕಲಬುರಗಿ: ನೆರೆ ಹಾವಳಿಯಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಒಳಗಾದ ಈ ಸಂದರ್ಭದಲ್ಲಿ ನಾನು ನನ್ನ ಹುಟ್ಟುಹಬ್ಬವನ್ನು ಈ ಬಾರಿ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಹಾಗಾಗಿ ಕಾರ್ಯಕರ್ತರು ಈ ಬಾರಿ ನನ್ನ ಹುಟ್ಟುಹಬ್ಬವನ್ನು ಆಚರಿಸಬೇಡಿ ಎಂದು ಮಾಜಿ ಸಚಿವ ಹಾಗೂ ಚಿತ್ತಾಪೂರ್ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಮನವಿ ಮಾಡಿದ್ದಾರೆ.

ನವೆಂಬರ್ ೨೨ರಂದು ಪ್ರಿಯಾಂಕ್ ಖರ್ಗೆ ಅವರ ಹುಟ್ಟುಹಬ್ಬವಾಗಿದ್ದು, ಪ್ರತಿ ವರ್ಷ ಬೆಂಗಳೂರಿನ ಅವರ ನಿವಾಸದಲ್ಲಿ ಹಬ್ಬದ ವಾತಾವರಣ ಇರುತ್ತಿತ್ತು. ಈ ಬಾರಿಯು ಹಲವಾರು ಮುಖಂಡರು, ಕಾರ್ಯಕರ್ತರು, ಅಧಿಕಾರಿಗಳು, ಹಿತೈಷಿಗಳು, ಸಂಬಂಧಿಕರು ಹಾಗೂ ಬೆಳೆಯರು ಬೆಂಗಳೂರು ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದರು. ಈಗ ಪ್ರಿಯಾಂಕ್ ಖರ್ಗೆ ಅವರ ನಿರ್ಧಾರದಿಂದಾಗಿ ಅವರೆಲ್ಲ ತೀವ್ರ ನಿರಾಸೆಗೆ ಒಳಗಾಗಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಅವರು ತಮ್ಮ ಫೇಸ್ ಬುಕ್ ಮೂಲಕ ನಾನು ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ ಎಂದು ಸಂದೇಶ ನೀಡಿದ್ದಾರೆ.

Contact Your\'s Advertisement; 9902492681

ಪ್ರತಿ ವರ್ಷ ದೂರದ ಊರಿನಿಂದ ಬಂದು ತಮ್ಮದೇ ಮನೆಮಗನ ರೀತಿಯಲ್ಲಿ ಹುಟ್ಟುಹಬ್ಬದಂತೆ ತಮ್ಮ ಸ್ವಂತ ಖರ್ಚಿನಲ್ಲಿ ನನ್ನ ಜನ್ಮದಿನವನ್ನು ಅಚರಿಸಿದ್ದೀರಿ. ಆದರೆ ಈ ಬಾರಿ ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿಂದಾಗಿ ರಾಜ್ಯದ ಜನರು ಸಾಕಷ್ಟು ಸಂಕಷ್ಟದಲ್ಲಿದ್ದು, ಈ ಸಂಕಷ್ಟದ ನಡುವೆ ಹುಟ್ಟುಹಬ್ಬ ಆಚರಿಸುವ ಇರಾದೆ ನನಗಿಲ್ಲ. ಈ ಬಾರಿ ನನ್ನ ಹುಟ್ಟುಹಬ್ಬದ ಆಚರಣೆಗೆ ಯಾವುದೇ ರೀತಿಯ ಸಿದ್ಧತೆ ಮಾಡಿಕೊಳ್ಳಬೇಡಿ ಎಂದು ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶವನ್ನು ಅವರು ರವಾನಿಸಿದ್ದಾರೆ.

ಆಡಂಬರದ ಆಚರಣೆಯ ಬದಲಾಗಿ ಮೂರು ದಿನಗಳ ಕಾಲ ವಿಪಾಸನ ಧ್ಯಾನದಲ್ಲಿ ತೊಡಗಿಕೊಳ್ಳುವುದರಿಂದ ನವೆಂಬರ್ ೨೧ರಿಂದ ೨೫ರವರೆಗೆ ನಾನು ಬೆಂಗಳೂರು ಅಥವಾ ಕಲಬುರ್ಗಿಯಲ್ಲಿ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಶಾಸಕರ ಈ ನಿರ್ಧಾರದಿಂದ ಹುಟ್ಟುಹಬ್ಬ ಆಚರಣೆಯ ತಯಾರಿಯಲ್ಲಿದ್ದ ಕಾರ್ಯಕರ್ತರಿಗೆ ತೀವ್ರ ನಿರಾಸೆಯುಂಟಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here