ಏರ್‌ಪೋರ್ಟ್‌ಗೆ ಜಿಲ್ಲಾಧಿಕಾರಿ ಶರತ್ ಬಿ. ಭೇಟಿ

0
62

ಕಲಬುರಗಿ: ಇದೇ ನವೆಂಬರ್ ೨೨ ರಂದು ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆ ನಡೆಯಲಿರುವ ಹಿನ್ನೆಲೆಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಸುವ ಸ್ಥಳ ವೀಕ್ಷಿಸಲು ಜಿಲ್ಲಾಧಿಕಾರಿ ಶರತ್ ಬಿ. ರವಿವಾರ ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಮಾನ ನಿಲ್ದಾಣದ ಟರ್ಮಿನಲ್ ಕಾಂಪ್ಲೆಕ್ಸ್ ಎದುರುಗಡೆ ನಡೆಯುವ ಉದ್ಘಾಟನೆ ಕಾರ್ಯಕ್ರಮ ಸ್ಥಳ ಪರಿಶೀಲಿಸಿದ ಅವರು ಮುಖ್ಯಮಂತ್ರಿಗಳು, ಸಚಿವರು, ಜನಪ್ರತಿನಿಧಿಗಳು, ಗಣ್ಯರು, ಹಿರಿಯ ಅಧಿಕಾರಿಗಳು ಸೇರಿದಂತೆ ಸುಮಾರು ೫೦೦೦ಕ್ಕೂ ಹೆಚ್ಚಿನ ಜನಸಂಖ್ಯೆ ಅಂದು ಸೇರುವುದರಿಂದ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ವೇದಿಕೆ ನೆಲವನ್ನು ಸಂಪೂರ್ಣವಾಗಿ ಸಮತಳದಲ್ಲಿ ಇರುವಂತೆ ನೋಡಿಕೊಳ್ಳಬೇಕು.

Contact Your\'s Advertisement; 9902492681

ಗಣ್ಯರಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದ ಅವರು ವಿಮಾನ ನಿಲ್ದಾಣದ ಆವರಣವನ್ನು ಸಂಪೂರ್ಣವಾಗಿ ಸ್ವಚ್ಛತಾ ಕಾರ್ಯಕ್ಕೆ ಮಹಾನಗರ ಪಾಲಿಕೆ ಸಹಕರಿಸಬೇಕು. ಎಲ್ಲಿಯೂ ಪ್ಲಾಸ್ಟಿಕ್ ಬಳಸದಂತೆ ಕಟ್ಟೆಚ್ಚರ ವಹಿಸಬೇಕು. ಅಲ್ಲಲ್ಲಿ ಗಿಡ-ಮರಗಳನ್ನು ನೆಡಬೇಕು ಮತ್ತು ಸೌಂದರ್ಯೀಕರಣ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಜ್ಯದ ಮುಖ್ಯಮಂತ್ರಿಗಳು ಅಂದು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಹಾಗೂ ಸುಮಾರು ೫೦೦೦ ಜನಸಂಖ್ಯೆ ಸೇರುವುದರಿಂದ ಸೂಕ್ತ ಭದ್ರತೆ ವ್ಯವಸ್ಥೆ, ವಾಹನಗಳ ಪಾಕಿಂಗ್ ವ್ಯವಸ್ಥ ಮಾಡಬೇಕು. ವೇದಿಕೆ ಸ್ಥಳಕ್ಕೆ ಗಣ್ಯರಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಪ್ರವೇಶವಕಾಶ ನೀಡಬೇಕು. ನವೆಂಬರ್ ೨೨ ರಿಂದ ಪ್ರಯಾಣಿಕರ ವಿಮಾನಗಳ ಸಂಚಾರ ಆರಂಭವಾಗುವುದರಿಂದ ಅಂದು ವಿಮಾನ ಲ್ಯಾಂಡಿಂಗ್ ಮತ್ತು ಟೇಕಾಫ್‌ನಿಂದ ಆಗಮಿಸುವ ಪ್ರಯಾಣಿಕರ ಆಗಮನ, ನಿರ್ಗಮನ ತಪಾಸಣೆ ಕೈಗೊಳ್ಳಬೇಕು. ವಿಮಾನ ಲ್ಯಾಂಡಿಂಗ್ ಮತ್ತು ವೇದಿಕೆ ಸ್ಥಳದಲ್ಲಿ ಅಗ್ನಿಶಾಮಕ ಸೇವೆ ಹಾಗೂ ೧೦೮ ಅಂಬುಲೆನ್ಸ್ ಸೇವೆ ಇಲ್ಲಿ ತೈನಾತಿಸಿರಬೇಕು ಎಂದರು.

ವಿಮಾನ ನಿಲ್ದಾಣವನ್ನು ಎಎಐಗೆ ಹಸ್ತಾಂತರಿಸಿರುವಿದರಿಂದ ಅಂದು ತಪಾಸಣೆ, ಭದ್ರತಾ ವ್ಯವಸ್ಥೆ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಹೆಚ್ಚಿನ ಕಟ್ಟೆಚ್ಚರ ವಹಿಸಬೇಕು ಎಂದು ಶರತ್ ಬಿ. ಅವರು ನಿಲ್ದಾಣದ ಸಹಾಯಕ ಮಾನ್ಯೇಜರ್ ಶ್ರೀಕಾಂತ ಅವರಿಗೆ ಸೂಚಿಸಿದರು. ಕಲಬುರಗಿ ವಿಮಾನ ನಿಲ್ದಾಣದ ಕೆ.ಎಸ್.ಎಸ್.ಐ.ಡಿ.ಸಿ. ನಿರ್ದೇಶಕ ಸುಶೀಲಕುಮಾರ ಶ್ರೀವಾಸ್ತವ ಅವರು ವಿಮಾನ ನಿಲ್ದಾಣ ಉದ್ಘಾಟನೆ ಕುರಿತು ಕೈಗೊಳ್ಳಲಾಗುತ್ತಿರುವ ಪೂರ್ವಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಡಿಸಿಪಿ ಕಿಶೋರ ಬಾಬು, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಸ್.ಇ.ಲಕ್ಕಪ್ಪ, ಕಲಬುರಗಿ ತಹಶೀಲ್ದಾರ ಮಲ್ಲೇಶಾ ತಂಗಾ, ಲೋಕೋಪಯೋಗಿ ಇಲಾಖೆಯ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here