23-24 ರಂದು ಬಸವಕಲ್ಯಾಣದಲ್ಲಿ ಅನುಭವ ಮಂಟಪ ಉತ್ಸವ: ಗುರುಬಸವ ಪಟ್ಟದ್ದೇವರು

0
160

ಕಲಬುರಗಿ: ಬಸವಕಲ್ಯಾಣದ ವಿಶ್ವಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ವತಿಯಿಂದ ಇದೇ ನ.೨೩ ರಿಂದ ೨೪ರವರೆಗೆ ೪೦ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ನಡೆಯಲಿದೆ ಎಂದು ವಿಶ್ವ ಬಸವ ಧರ್ಮ ಟ್ರಸ್ಟ್ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಭವ ಮಂಟಪ ಅಧ್ಯಕ್ಷರಾದ ಡಾ. ಬಸವಲಿಂಗಪಟ್ಟದ್ದೇವರ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಾಸಕ ಬಿ. ನಾರಾಯಣ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ಧನರಾಜ ತಾಳಂಪಳ್ಳಿ ಸೇರಿದಂತೆ ಇಡೀ ಸ್ವಾಗತ ಸಮಿತಿ ಉತ್ಸವದ ಯಶಸ್ಸಿಗೆ ಕೈ ಜೋಡಿಸಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಅನುಭ ಮಂಟಪ ಉತ್ಸವ ಉದ್ಘಾಟನೆ: ಕೇಂದ್ರ ಕಾನೂನು ಸಚಿವ ಪ್ರಹ್ಲಾದ ಜೋಶಿ ಉತ್ಸವ ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ದಿನದರ್ಶಿಕೆ ಲೋಕಾರ್ಪಣೆ ಮಾಡಲಿದ್ದಾರೆ. ಶಾಸಕ ಬಿ. ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಗೊ.ರು.ಚನ್ನಬಸವಪ್ಪ ಅನುಭಾವ ನೀಡಲಿದ್ದು, ಸಂಸದರಾದ ಭಗವಂತ ಖೂಬಾ, ಡಾ. ಉಮೇಶ ಜಾಧವ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ರಾಜಶೇಖರ ಪಾಟೀಲ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಶಾಸಕರಾದ ದತ್ತಾತ್ರೇಯ ಪಾಟೀಲ, ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮೂಡ, ರಘುನಾಥ ಮಲ್ಕಾಪುರೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಾಜಿ ಶಾಸಕರಾದ ಬಸವರಾಜ ಪಾಟೀಲ ಅಟ್ಟೂರ, ಮಲ್ಲಿಕಾರ್ಜುನ ಖೂಬಾ, ಮಾರುತಿರಾವ ಮೂಳೆ, ಪ್ರಕಾಶ ಖಂಡ್ರೆ ಸುಭಾಷ ಕಲ್ಲೂರ ಮತ್ತಿತರ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ.ಇದೇ ವೇಳೆಯಲ್ಲಿ ೭೭೦ ವಿದ್ಯಾರ್ಥಿಗಳಿಂದ ವಚನ ಹಾಗೂ ಗೀತ ಗಾಯನ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.

ಅನುಭವ ಮಂಟಪ ಪ್ರಶಸ್ತಿ ಪ್ರದಾನ: ೨೩ರಂದು ಬೆಳಗ್ಗೆ ೧೧ ಗಂಟೆಗೆ ಅನುಭವ ಮಂಟಪ ಉತ್ಸವ ಉದ್ಘಾಟನೆ ಹಾಗೂ ಡಾ. ಚನ್ನಬಸವ ಪಟ್ಟದ್ದೇವರ ಅನುಭವ ಮಂಟಪ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಸಾನ್ನಿಧ್ಯವನ್ನು ಬೆಂಗಳೂರು ಬೇಲಿಮಠ ಸಂಸ್ಥಾನದ ಶಿವರುದ್ರ ಸ್ವಾಮೀಜಿ ವಹಿಸಲಿದ್ದು, ಹಾರಕೂಡ ಡಾ. ಚನ್ನವೀರ ಶಿವಾಚಾರ್ಯರ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಮನಗಂಡಿಯ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು (೫೦ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ) ಎಂದರು.

ವಚನ ಸಂಗೀತೋತ್ಸವ: ಮಧ್ಯಾಹ್ನ ೩ ಗಂಟೆಗೆ ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ಹಾಗೂ ಧಾರವಾಡದ ಪಂಡಿತ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ವಚನ ಸಂಗೀತೋತ್ಸವ ಜರುಗಲಿದ್ದು, ಡಾ. ಹನುಮಣ್ಣ ನಾಯಕ ದೊರೆ, ಡಾ. ಮೃತ್ಯುಂಜಯ ಶೆಟ್ಟರ್, ಡಾ. ಕೃಷ್ಣಮೂರ್ತಿ ಭಟ್, ನವಲಿಂಗ ಪಾಟೀಲ, ಶಿವಾನಿ ಶಿವದಾಸ ಸ್ವಾಮಿ ಮತ್ತಿತರ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದರು. “ವಚನ ಸಂಗೀತ: ಪರಂಪರೆ ಮತ್ತು ಬೆಳವಣಿಗೆ” ಕುರಿತು ಗೋಷ್ಠಿ-೧ ಜರುಗಲಿದ್ದು, ಚಿತ್ರದುರ್ಗದ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು, ಖೇಳಗಿ ಶಿವಲಿಂಗ ಸ್ವಾಮಿಗಳು. ನಿರಂಜನ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಮದುರ್ಗದ ಸಿದ್ದಣ್ಣ ಲಂಗೋಟಿ ಅನುಭಾವ ನೀಡಲಿದ್ದು, ಸೋಮನಾಥ ಅಷ್ಟೂರೆ, ಶಿವಶರಣಪ್ಪ ವಾಲಿ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಡಾ. ಜಗನ್ನಾಥ ಹೆಬ್ಬಾಳೆ ಇತರರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

ನಾಟಕ ಪ್ರದರ್ಶನ: ಸಂಜೆ ಭಾಲ್ಕಿಯ ಗುರು ಚನ್ನಬಸವ ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾ ವೇದಿಕೆ ಮಕ್ಕಳು ಅಭಿನಯದ ವೈ.ಡಿ. ಬದಾಮಿ ನಿರ್ದೇಶನದ ಜಿ.ಎನ್. ಮಲ್ಲಿಕಾರ್ಜುನ ರಚನೆಯ ಮಹಾಕ್ರಾಂತಿ ನಾಟಕ ಪ್ರದರ್ಶನ ಜರುಗಲಿದೆ ಎಂದರು.

ಸಾಮೂಹಿಕ ಇಷ್ಟಲಿಂಗ ಪೂಜೆ: ಡಾ. ಬಸವಲಿಂಗಪಟ್ಟದ್ದೇವರ ಪ್ರಾತ್ಯೇಕ್ಷಿಕೆಯಲ್ಲಿ ೨೪ರಂದು ಬೆಳಗ್ಗೆ ೭.೩೦ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಜರುಗಲಿದೆ. ನಾಡಿನ ಹಿರಿ-ಕಿರಿಯ ಸ್ವಾಮೀಜಿಗಳು ಸಮ್ಮುಖ ವಹಿಸಲಿದ್ದಾರೆ. ಬೆಳಗ್ಗೆ ೯ ಗಂಟೆಗೆ ವಚನ ಸಂಗೀತ ಸುಧೆ ಹಾಗೂ ಶರಣರ ಸ್ವರ ವಚನ ಸಾಹಿತ್ಯ ಕುರಿತ ಗೋಷ್ಠಿ-೨ರಲ್ಲಿ ಬೇಲೂರ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಪಂಚಾಕ್ಷರಿ ಸಂಗೀತಾ ಕಟ್ಟಿ, ಡಾ. ಹನುಮಣ್ಣ ನಾಯಕ ದೊರೆ, ವಿಶ್ವರಾಜ ರಾಜಗುರು, ಶಿವಕುಮಾರ ಪಾಂಚಾಳ, ಮಹಾಸ್ವಾಮಿ, ಸಂಗಮೇಶ್ವರ ಸ್ವಾಮೀಜಿ, ಸಮ್ಮುಖ ವಹಿಸಲಿದ್ದಾರೆ. ಶಿವಾನಂದ ಮೇತ್ರೆ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಸೋಮನಾಥ ಯಾಳವಾರ ಅನುಭಾವ ನೀಡಲಿದ್ದಾರೆ. ಸಂಗೀತಾ ಕಟ್ಟಿ, ಹನುಮಣ್ಣ ನಾಯಕ ದೊರೆ, ವಿಶ್ವರಾಜ ರಾಜಗುರು, ಶಿವಕುಮಾರ ಪಾಂಚಾಳ ಮುಂತಾದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಬಹುಮಾನ ವಿತರಣೆ: ಇದೇವೇಳೆಯಲ್ಲಿ ಸುಶೀಲಾದೇವಿ ಬಿ. ಪಟೇಲ ಚಾರಿಟೇಬಲ್ ಟ್ರಸ್ಟ್ ದಾಸೋಹದ ರಾಜ್ಯ ಮಟ್ಟದ ಬಸವಣ್ಣನವರ ಕಂಠ ಪಾಠ ಸ್ಪರ್ಧೆಯಲ್ಲಿ ಬಸಮ್ಮ ಬೆಳಗಾವಿಯ ಗುರುಮ್ಮ ಮಠದ (ಪ್ರಥಮ ಬಹುಮಾನ), ಕುಂದಗೋಳದ ಮಹಾಲಕ್ಷ್ಮೀ( ದ್ವಿತೀಯ ಬಹುಮಾನ), ಬೀದರ್ ನ ಚನ್ನಬಸಣ್ಣ (ತೃತೀಯ ಬಹುಮಾನ) ಪಡೆದವರಿಗೆ ತಲಾ ಹತ್ತು ಸಾವಿರ, ಐದು ಸಾವಿರ ಹಾಗೂ ಎರಡುವರೆ ಸಾವಿರ ರೂಪಾಯಿ ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು.

ಡಾ. ಎಂ.ಎಂ. ಕಲ್ಬುರ್ಗಿ ಪ್ರಶಸ್ತಿ ಪ್ರದಾನ: ೨೪ರಂದು ಬೆಳಗ್ಗೆ ೧೧.೩೦ಕ್ಕೆ ವಚನ ಕಲ್ಯಾಣ-ತಾತ್ವಿಕ ಚಿಂತನೆ ಹಾಗೂ ಗ್ರಂಥ ಲೋಕಾರ್ಪಣೆ ಮತ್ತು ಡಾ. ಎಂ.ಎಂ. ಕಲ್ಬುರ್ಗಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಇಲಕಲ್ ಗುರುಮಹಾಂತ ಸ್ವಾಮೀಜಿ, ಭಾಲ್ಕಿ ಮಹಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಡಾ. ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸಲಿದ್ದು, ಡಾ. ಜಯಶ್ರೀ ದಂಡೆ ಹಾಗೂ ಡಾ. ವೀರಣ್ಣ ದಂಡೆ ಅವರಿಗೆ ಈ ಬಾರಿಯ ಡಾ. ಎಂ.ಎಂ. ಕಲ್ಬುರ್ಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಲಾತೂರಿನ ಡಾ. ಭೀಮರಾವ ಪಾಟೀಲ ಅನುಭಾವ ನೀಡಲಿದ್ದು, ಪ್ರೊ. ಬಾಲಚಂದ್ರ ಜಯಶೆಟ್ಟಿ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ತೆಲಂಗಾಣದ ಹಣಕಾಸು ಸಚಿವ ತನ್ನೀರು ಹರೀಶರಾವ, ಜಹೀರಾಬಾದ ಸಂಸದ ಬಿ.ಬಿ. ಪಾಟೀಲ, ಶಾಸಕ ಮಾಣಿಕರಾವ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಡಾ. ವಿಲಾಸವತಿ ಖೂಬಾ ಬಸವ ಗುರುಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಸಮಾರೋಪ ಸಮಾರಂಭ: ಮಧ್ಯಾಹ್ನ ೨ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಲಿದ್ದಾರೆ. ಬಸವ ಬೆಳವಿಯ ಶರಣ ಸಬವ ಸ್ವಾಮೀಜಿ ನೇಥೃತ್ವ, ಹರಳಯ್ಯ ಪೀಠದ ಡಾ. ಅಕ್ಕ ಗಂಗಾಂಬಿಕೆ ಅಧ್ಯಕ್ಷತೆ, ಮೈಸೂರಿನ ಭಾರತೀಯ ಸಂಸ್ಕೃತಿಕ ಕೇಂದ್ರದ ಅಕ್ಕ ಮಹಾದೇವಿ ಸಮ್ಮುಖ ವಹಿಸಲಿದ್ದಾರೆ. ಗೀತಾ ಪಂಡಿತ ಚಿದ್ರಿ, ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ, ರಹೀಮ್ ಖಾನ್, ಮಾಜಿ ಶಾಸಕ ಅಶೋಕ ಖೇಣಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಉಮಾಕಾಂತ ನಾಗಮಾರಪಳ್ಳಿ, ಶಿವರಾಜ ನರಶೆಟ್ಟಿ, ಜಯಶ್ರೀ ಸುಕಾಲೆ, ಮೇನಕಾ ಪಾಟೀಲ ಸೇರಿದಂತೆ ಹಲವರು ಅತಿಥಿಗಾಳಾಗಿ ಆಗಮಿಸಲಿದ್ದು, ನಂತರ ವಿವಿಧ ಲೇಖಕರು ರಚಿಸಿದ ಗ್ರಂಥ ಲೋಕಾರ್ಪಣೆ ಕಾ+-ರ್ಯಕ್ರಮ ಕೂಡ ಜರುಗಲಿದೆ ಎಂದು ವಿವರಿಸಿದರು.

ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಧನರಾಜ ತಾಳಂಪಳ್ಳಿ, ಟ್ರಸ್ಟ್ ಸದಸ್ಯ ಕುಪೇಂದ್ರ ಪಾಟೀಲ, ಯುವ ಮುಖಂಡ ಶರಣು ಸಲಗರ, ರವೀಂದ್ರ ಶಾಬಾದಿ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ನವಲಿಂಗ ಪಾಟೀಲ, ರಮೇಶ ಧುತ್ತರಗಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here