ಸುರಪುರ: ಸೊಳ್ಳೆಗಳ ನಿಯಂತ್ರಣಕ್ಕೆ ನಗರದಾದ್ಯಂತ ಫಾಗಿಂಗ್ ಸಿಂಪಡಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಸಂಘಟನೆ ತಾಲ್ಲೂಕು ಸಂಚಾಲಕ ವೀರಭದ್ರಪ್ಪ ತಳವಾರಗೇರಾ ಮಾತಾನಾಡಿ,ಎಲ್ಲೆಡೆ ಚರಂಡಿ ಸ್ವಚ್ಛಗೊಳಿಸದೆ ಹಾಗೆ ಬಿಟ್ಟಿದ್ದರಿಂದ ಎಲ್ಲೆಡೆ ಸೊಳ್ಳೆಗಳು ಹೆಚ್ಚಾಗಿದ್ದು ಇದರಿಂದ ಜನರಲ್ಲಿ ಡೆಂಗ್ಯು ಮಲೇರಿಯಾ ಚಿಕನ್ ಗುನ್ಯಾ ದಂತ ಕಾಯಿಲೆಗಳು ಹರಡುತ್ತಿವೆ. ಅದರಿಂದ ನಗರಸಭೆಯಿಂದ ಕೂಡಲೇ ಎಲ್ಲೆಡೆ ಫಾಗಿಂಗ್ ಯಂತ್ರದ ಮೂಲಕ ಹೊಗೆ ಸಿಂಪಡಿಸಿ ಸೊಳ್ಳೆಗಳು ನಿಯಂತ್ರಿಸಬೇಕು ಮತ್ತು ಎಲ್ಲೆಡೆ ರಸ್ತೆಗಳ ಮೇಲೆ ಮನೆಗಳ ಶೌಚಾಲಯದ ನೀರು ಹರಿದಿದ್ದು ಅವುಗಳ ನಿಯಂತ್ರಣಕ್ಕಾಗಿ ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹನುಮಂತಪ್ಪ ರೋಜಾ ಅಂಬರೀಶ ದೊಡ್ಡಮನಿ ಶೇಖರ್ ಬಡಿಗೇರ ಆಕಾಶ ಕಟ್ಟಿಮನಿ ಗೌತಮ್ ಬಡಿಗೇರ್ ವೆಂಕಟೇಶ ದೇವಾಪುರ ಅಜ್ಮೀರ್ ಅಂಬೇಡ್ಕರ್ ದೊಡ್ಡಮನಿ ರಮೇಶ್ ಬಡಿಗೇರ್ ಎಂ ಪಟೇಲ್ ಅಶೋಕ ಕೋರಿ ರವಿಕುಮಾರ್ ದೊಡ್ಡಮನಿ ಹಸನಪ್ಪ ದೇವಾಪುರ್ ಗೋವರ್ಧನ್ ತೇಲ್ಕರ್ ಮಧುಸೂದನ ಮದನಲಾಲ್ ಕಟ್ಟಿಮನಿ ಮಹೇಶ ಕರಡಕಲ್ ಸೇರಿದಂತೆ ಅನೇಕರಿದ್ದರು.