ಮೈಸೂರು: ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರನ್ನು ಕರ್ನಾಟಕ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾದ ಜೆ.ಸಿ.ಮಾಧುಸ್ವಾಮಿ ರವರು ಶಾಂತಿ ಸಭೆಯಲ್ಲಿ ಸ್ವಾಮಿಜಿಯವರನ್ನು ಏಕವಚನದಲ್ಲಿ ನಿಂದಿಸಿ ಉದ್ಧಟನದಿಂದ ಏರುಧ್ವನಿಯಲ್ಲಿ ಹಿಂದುಳಿದ ವರ್ಗಗಳ ಸಮುದಾಯದ ಸ್ವಾಮೀಜಿಯವರನ್ನು ಅವಮಾನಿಸಿರುವುದು ಖಂಡಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿ ಸಚಿವರಿಗೆ ಸಂಪುಟದಿಂದ ಕೈಬಿಡಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿರುವ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಕೆ.ಎಸ್.ಶಿವರಾಂ ಸಚಿವರಿಂದ ಸ್ವಾಮೀಜಿಯ ವಿರೋಧ ಅನಾಗರೀಕ ವರ್ತನೆಯಿಂದ ಹಿಂದುಳಿದ ಸಮುದಾಯಕ್ಕೆ ಧಕ್ಕೆಯಾಗಿದ್ದು ಸಚಿವ ಸಂಪುಟ ದರ್ಜೆಯ ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಈ ರೀತಿಯ ವರ್ತನೆ ಖಂಡನೀಯ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ತೀಡಿ ಆಡಳಿತ ನಡೆಸಬೇಕಾಗಿರುವಂತಹ ಸಚಿವರಾಗಿ ಶಾಂತಿ ಸಭೆಯಲ್ಲಿ ಒಬ್ಬ ಜವಾಬ್ದಾರಿಯುತ ಸ್ವಾಮೀಜಿಯವರನ್ನು ಏಕವಚನದಲ್ಲಿ ನಿಂದಿಸಿ ಟತನದಿಂದ ವರ್ತಿಸಿರುವುದು ಖಂಡನಾರ್ಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರು ಸ್ವಾಮೀಜಿಯಲ್ಲಿ ಹಾಗೂ ಸಮುದಾಯದಕ್ಕೆ ಕ್ಷಮೆ ಕೇಳಬೇಕೆಂದು ತಪ್ಪಿದ್ದಲ್ಲಿ ಮುಖ್ಯಮಂತ್ರಿಗಳು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಸ್ವಾಮೀಜಿ ಮತ್ತು ಸಮುದಾಯದ ಆತ್ಮಗೌರವವನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿದರು.
ನಂತರ ವೇದಿಕೆಯ ಜಿಲ್ಲಾಧ್ಯಕ್ಷ ಜಾಕೀರ್ ಹುಸೇನ್ ಮಾತನಾಡಿ, ಇವರನ್ನು ಸಂಪುಟದಿಂದ ಕೈಬಿಡದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುವುದು ಮತ್ತು ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿರುದ್ಧ ಮತ ಚಲಾಯಿಸುವುದರ ಮೂಲಕ ತಮ್ಮ ಆತ್ಮಾಭಿಮಾನವನ್ನು ಬಿಜೆಪಿ ಪಕ್ಷಕ್ಕೆ ತೋರಿಸಬೇಕೆಂದು ಜಿಲ್ಲಾಧಿಕಾರಿಗಳ ಆವರಣದಲ್ಲಿ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ ಆಹ್ರಹಿಸಿದರು.
ಒಕ್ಕೂಟದ ಸಂಚಾಲಕರಾದ, ರಾಜು, ಡೈರಿ ವೆಂಕಟೇಶ್ ಪಿ.ರಾಜು, ವೀರಮಡಿವಾಳ ಸಂಘದ ಸಂಚಾಲಕರಾದ ಸತ್ಯನಾರಾಯಣ್, ಜಿಲ್ಲಾ ಕುಂಬಾರ ಸಂಘದ ಗೌರವ ಅಧ್ಯಕ್ಷರಾದ ಮಾರಶೆಟ್ಟಿ,ಯುವಮುಖಂಡರಾದ ಲೋಕೇಶ್‌ಕುಮಾರ್, ಕಾಡನಹಳ್ಳಿ ಸ್ವಾಮಿಗೌಡ, ಪ್ರಸನ್ನಸೇರಿದಂತೆ ಇನ್ನಿತರ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.