ತೊಗರಿ ಮತ್ತು ಇತರೆ ಬೆಳೆಗಳ ಕ್ಷಿಪ್ರ ಸಂಚಾರ ತಂಡದಿಂದ ಸಮೀಕ್ಷೆ

0
34

ಕಲಬುರಗಿ: ಸೇಡಂ ತಾಲ್ಲೂಕಿನ ಕಲಕಂಬಾ, ಅಳ್ಳೊಳ್ಳಿ, ನೀಲಹಳ್ಳಿ, ಮಳಖೇಡ, ಅಡಕಿ ಮತ್ತು ಸೇಡಂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ವಿವಿಧ ಬೆಳೆಗಳಲ್ಲಿ ಕೀಟ ಹಾಗೂ ರೋಗಗಳ ಸಮೀಕ್ಷೆ ಮಾಡಲಾಗಿದ್ದು, ತೊಗರಿ ಬೆಳೆಯು 70 ರಿಂ 80% ರಷ್ಟು ಹೂ ಬಿಟ್ಟಿರುತ್ತದೆ ಎಂದು ಕ್ಷಿಪ್ರ ಸಂಚಾರ ಸಮೀಕ್ಷೆಯ ತಂಡದ ವಿಜ್ಞಾನಿ, ಅಧಿಕಾರಿಗಳಾದ ಡಾ. ಶ್ರೀನಿವಾಸ ಬಿ. ವಿ. ತಿಳಿಸಿದರು.

ಕಲಕಂಬಾ ಗ್ರಾಮದ ಚಂದ್ರಶೇಖರ ಪಾಟೀಲ್ ರೈತರ ಹೊಲವೊಂದರಲ್ಲಿ ಜೋಳದಲ್ಲಿ ಸೈನಿಕ ಹುಳುವಿನ ಬಾಧೆಯನ್ನು ಪರಿಶೀಲಿಸಿ ಮಾತನಾಡಿ, ಕೆಲವೊಂದು ಪ್ರದೇಶಗಳಲ್ಲಿ ತೊಗರಿಯು ಕಾಯಿಕಟ್ಟುವ ಹಂತದಲ್ಲಿದ್ದು, ಅಲ್ಲಲಿ ಹೂ ಉದುರುವಿಕೆ ಮತ್ತು ಎಲೆ ಚುಕ್ಕೆ ರೋಗದ ಬಾಧೆ ಹಾಗೂಜ ಕಡಲೆಯಲ್ಲಿ ಕಡಲೆಗೆ ಹಸಿರು ಕೀಡೆ ಬಾಧೆವು  ಆರ್ಥಿಕ ನಷ್ಟದ ರೇಖೆಯನ್ನು ತಲುಪಿಲ್ಲ ಆದರೂ ಕೀಟದ ಇರುವಿಕೆಯನ್ನು ಗಮನಿಸಿ ಕೆಲವು ರೈತರು ಈಗಾಗಲೇ ೨-೩ ಬಾರಿ ಕೀಟ ನಾಶಕಗಳ ಸಿಂಪರಣೆ ಮಾಡಿದ್ದಾರೆ. ಕಲಕಂಬಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲ್ಲಿ ಜೋಳಕ್ಕೆ ಸೈನಿಕ ಹುಳು ಬಾಧೆ ಕಂಡು ಬಂದಿದ್ದು,  ಹತೋಟಿ ಕ್ರಮಗಳನ್ನು ರೈತರಿಗೆ ತಿಳಿಸಲಾಯಿತು. ಅಲ್ಪ ಪ್ರಮಾಣದಲ್ಲಿ ಕಂಡು ಬಂದಿದೆ ಆದರೆ ಹಲವಾರು ಪ್ರದೇಶಗಳಲ್ಲಿ ಜೋಳವು ೩೫ ರಿಂದ ೪೦ ದಿವಸಗಳ ಅವಧಿಯದ್ದಾಗಿದೆ.  ಎಲ್ಲಾ ಗ್ರಾಮಗಳಲ್ಲಿ  ಸೈನಿಕ ಕೀಡೆ ಬಾಧೆವು ಕಂಡು ಬಂದಿದೆ.  ಭೇಟಿಯಾದ ಎಲ್ಲಾ ರೈತರಿಗೂ ಯಾವ ಮತ್ತು ಎಷ್ಟು ಪ್ರಮಾಣದಲ್ಲಿ ಔಷಧಿ ಬಳಸಬೇಕೆಂದು ತಿಳಿಸಲಾಯಿತು.

Contact Your\'s Advertisement; 9902492681

ಕ್ಷಿಪ್ರ ಸಂಚಾರ ಸಮೀಕ್ಷೆ ತಂಡದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯ ವಿಜ್ಞಾನಿಯಾದ ಡಾ. ಶ್ರೀನಿವಾಸ ಬಿ. ವಿ, ಸಹಾಯಕ ತೋಟಗಾರಿಕಾ ಅಧಿಕಾರಿಯಾದ ಶ್ರೀ ಚಂದ್ರಶೇಖರ ಪಾಟೀಲ್, ಕೃಷಿ ಇಲಾಖೆಯ ಅಧಿಕಾರಿಗಳಾದ ಶ್ರಿ ಬಾಲರಾಜ ಭಾಗವಹಿಸಿದ್ದರು. ರೈತರು ವ್ಯಾಪಕವಾಗಿ ಪೀಡೆ ಸಮೀಕ್ಷೆ ಕೈಗೊಂಡು ಕೀಟದ ಹರಡುವಿಕೆ ಮೇಲೆ ನಿಗಾ ವಹಿಸಬೇಕು ಎಂದು ಸಲಹೆ ನೀಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here