ಚಿಂಚೋಳಿ: ಹಿರಿಯ ಪ್ರಾಥಮಿಕ ಶಾಲೆ ಹೂಡದಳ್ಳಿಯ ಪ್ರಭಾರಿ ಮುಖ್ಯಗುರುಗಳಿಂದ ಹಳೆಯ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಮತ್ತು ಗ್ರಾಮಿಣ ಹಾಗೂ ವ್ಯಾಸಂಗಾ ಪ್ರಮಾಣ ಪತ್ರ ಬರೆದು ಕೊಡಲು ನಿರ್ಲಕ್ಷ್ಯಿಸುತ್ತಿರುವುದನ್ನು ವಿರೋಧಿಸಿ ವಿ.ವಿ.ಎಸ್ ಸಂಘಟನೆಯಿಂದ ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸುಕ್ತ ಕ್ರಮಕ್ಕೆ ಒತ್ತಾಯಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೂಡದಳ್ಳಿಯ ಪ್ರಭಾರಿ ಮುಖ್ಯಗುರುಗಳಾದ ಪೂರ್ಣಿಮ ಇವರು ಹಳೆಯ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಮತ್ತು ಗ್ರಾಮಿಣ ಹಾಗೂ ವ್ಯಾಸಂಗಾ ಪ್ರಮಾಣ ಪತ್ರ ಬರೆದು ಕೊಡಲು ನಿರ್ಲಕ್ಷ್ಯ ಧೋರಣೆ ಅನುಸರಿಸುತಿದ್ದಾರೆಂದು ವಿದ್ಯಾರ್ಥಿಗಳ ಆರೋಪಿಸಿದರು. ಗುರುಗಳ ಮೇಲೆ ಸುಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪ್ರಭಾರಿ ಹುದ್ದೆ ರದ್ದುಪಡಿಸಿ ಬೇರೆ ಶಿಕ್ಷಕರಿಗೆ ಪ್ರಭಾರಿ ವಹಿಸಬೇಕೆಂದು ಪ್ರತಿಭನೆ ನಡೆಸಿ ಒತ್ತಾಯಸಿದರು.
ಈ ಸಂದರ್ಭದಲ್ಲಿ ಸುನೀಲ್ ಸಲಗಾರ್, ಯಲ್ಲಾಲಿಂಗ ದಂಡಿನ್, ಆನಂದ ಟೈಗರ್, ವಿಜಯಕುಮಾರ್ ರಾಜ್, ಅಕ್ಷಯ ಬೌಮ್ನಳಿ, ಗೋಪಾಲ್ ರಾಂಪೊರೆ, ಅಜರೌದಿನ್ಸು, ನೀಲ್ ಚಿಮ್ಮಾಇದಲ್ಲಾಯಿ, ಇನ್ನು ಹಲವಾರು ಜನ ಇದ್ದರು.